ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಮೆರಿಕಾಕ್ಕೆ ಬೇಹುಗಾರಿಕೆ; ಉಗ್ರರಿಂದ ಮೂವರ ಶಿರಚ್ಛೇದನ (Taliban | US spies | Pakistan | militants)
Bookmark and Share Feedback Print
 
ಅಮೆರಿಕಾ ಪರ ಬೇಹುಗಾರಿಕಾ ಕೆಲಸ ಮಾಡಿದ ಆರೋಪದ ಮೇಲೆ ಪಾಕಿಸ್ತಾನದ ಕಾನೂನು ರಹಿತ ವಾಯುವ್ಯ ಬುಡಕಟ್ಟು ಪ್ರದೇಶದಲ್ಲಿ ಅಫಘಾನಿಸ್ತಾನದ ಇಬ್ಬರು ಸೇರಿದಂತೆ ಒಟ್ಟು ಮೂವರು ವ್ಯಕ್ತಿಗಳನ್ನು ತಾಲಿಬಾನ್ ಭಯೋತ್ಪಾದಕರು ಶಿರಚ್ಛೇದ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಫಘಾನಿಸ್ತಾನ ಗಡಿ ಭಾಗದ ಉತ್ತರ ವಜಿರಿಸ್ತಾನ ಬುಡಕಟ್ಟು ಜಿಲ್ಲೆಯ ಮಿರ್ ಆಲಿ ಪ್ರದೇಶದ ರಸ್ತೆ ಬದಿಯಲ್ಲಿ ಇವರ ತಲೆಯಿಲ್ಲದ ದೇಹಗಳನ್ನು ಎಸೆಯಲಾಗಿತ್ತು ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ಮುನೀರ್ ಜಮಾನ್ ವಿವರಣೆ ನೀಡಿದ್ದಾರೆ.

ಅವರ ಕತ್ತುಗಳನ್ನು ಕಳೆದ ರಾತ್ರಿ ತುಂಡರಿಸಲಾಗಿತ್ತು. ಬುಧವಾರ ಮುಂಜಾನೆ ದೇಹಗಳನ್ನು ತಂದು ಎಸೆಯಲಾಗಿದೆ ಎಂದು ಮಿರಾನ್ಶಾಹ್ ನಗರದಿಂದ ಪೊಲೀಸ್ ಅಧಿಕಾರಿ ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದ್ದಾರೆ.

ದೇಹಗಳನ್ನು ಎಸೆದ ಪ್ರದೇಶದಲ್ಲಿ ಒಂದು ಚೀಟಿಯನ್ನು ಕೂಡ ಇಡಲಾಗಿತ್ತು. 'ಸತ್ತವರು ಅಮೆರಿಕಾ ಪರ ಗುಪ್ತಚರ ಕೆಲಸ ಮಾಡುತ್ತಿದ್ದರು. ಈ ರೀತಿಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವವರಿಗೆ ಇದೇ ಕಾದಿದೆ' ಎಂದು ಆ ಚೀಟಿಯಲ್ಲಿ ಎಚ್ಚರಿಕೆ ನೀಡಲಾಗಿದೆ.

ಮೂವರನ್ನು ಕೊಲ್ಲಲಾಗಿರುವುದನ್ನು ಭದ್ರತಾ ಅಧಿಕಾರಿಗಳು ಕೂಡ ಖಚಿತಪಡಸಿದ್ದಾರೆ. ಇಬ್ಬರು ಅಫ್ಘಾನ್ ನಿರಾಶ್ರಿತರಾಗಿದ್ದರೆ, ಓರ್ವ ಪಾಕಿಸ್ತಾನದ ಬುಡಕಟ್ಟು ಪ್ರದೇಶದ ಸಾಮಾನ್ಯ ವ್ಯಕ್ತಿ.

ಪಾಕಿಸ್ತಾನ ಸರಕಾರ ಮತ್ತು ಅಮೆರಿಕಾ ಪಡೆಗಳಿಗಾಗಿ ಅಫಘಾನಿಸ್ತಾನದಲ್ಲಿ ಬೇಹುಹಾರಿಕೆ ನಡೆಸುವ ಬುಡಕಟ್ಟು ಜನರನ್ನು ಭಯೋತ್ಪಾದಕರು ನಿರಂತರವಾಗಿ ಅಪಹರಿಸಿ ಕೊಲ್ಲುತ್ತಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ