ಚಿಕನ್ ಟಿಕ್ಕಾ ತಿಂದು ಜನಾಂಗೀಯ ದಾಳಿ ವಿರುದ್ಧ ಪ್ರತಿಭಟನೆ!
ಮೆಲ್ಬೊರ್ನ್, ಗುರುವಾರ, 25 ಫೆಬ್ರವರಿ 2010( 10:27 IST )
ವಿಕ್ಟೋರಿಯಾದ ಪ್ರಧಾನಿ ಜಾನ್ ಬ್ರಾಂಬಿ ಸೇರಿದಂತೆ ನೂರಾರು ಆಸ್ಟ್ರೇಲಿಯನ್ ಅಧಿಕಾರಿಗಳು ಜನಸಾಮಾನ್ಯರಂತೆ ಭಾರತೀಯರು ಸೇರಿದ್ದ ಭೋಜನಾ ಕೂಟದಲ್ಲಿ ನಾನ್ ಮತ್ತು ಚಿಕನ್ ಟಿಕ್ಕಾ ಸವಿದು ಭಾರತೀಯರ ಮೇಲಿನ ಜನಾಂಗೀಯ ದಾಳಿಯನ್ನು ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ವ್ಯಕ್ತಪಡಿಸಿದರು.
ಭಾರತೀಯ ವಿದ್ಯಾರ್ಥಿಗಳ ಮೇಲಿನ ಜನಾಂಗೀಯ ದಾಳಿ ಖಂಡಿಸಿ ಆಸ್ಟ್ರೇಲಿಯಾದಲ್ಲಿ ಬುಧವಾರ ಹಮ್ಮಿಕೊಳ್ಳಲಾದ ವಿನೂತನ ಪ್ರತಿಭಟನೆಯ ಅಂಗವಾಗಿ ಮೆಲ್ಬೊರ್ನ್ ವಿದ್ಯಾರ್ಥಿಗಳು, ಅಧಿಕಾರಿಗಳು ಭಾರತೀಯ ರೆಸ್ಟೋರೆಂಟ್‌ಗಳಿಗೆ ಸಾಮೂಹಿಕವಾಗಿ ಭೇಟಿ ನೀಡಿ ಊಟ ಮಾಡಿದರು. ಸುಮಾರು 17ಸಾವಿರ ಜನರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಈ ವಿನೂತನ ಅಭಿಯಾನಕ್ಕೆ ಅಚ್ಚರಿಕರ ರೀತಿಯಲ್ಲಿ ಪ್ರತಿಕ್ರಿಯೆ ದೊರಕಿದ್ದು, ಸುಮಾರು ಹತ್ತು ಸಾವಿರಕ್ಕೂ ಅಧಿಕ ಮಂದಿ ಫೇಸ್‌ಬುಕ್‌ನಲ್ಲಿ ಬೆಂಬಲ ಸೂಚಿಸಿದ್ದಾರೆ. ಅದೇ ರೀತಿ ಆಸ್ಟ್ರೇಲಿಯಾ ಪ್ರಧಾನಿ ಕೆವಿನ್ ರೂಡ್ ಸಹ ಬೆಂಬಲ ವ್ಯಕ್ತಪಡಿಸಿದ್ದಾರೆ.ಬೆಂಬಲ ಸೂಚಿಸಿದ್ದಾರೆ.
ಪ್ಲಿನ್‌ಡೆರ್ಸ್ ಸ್ಮೀಟನ್ ದೇಶಿ ಡಾಬಾದಲ್ಲಿ ಪ್ರೀಮ್ಸು ಟೆಲಿಕಾಂನ ಮುಖ್ಯಸ್ಥರಾದ ರವಿ ಭಟಿಯಾ ಅವರೊಂದಿಗೆ ಬ್ರಾಂಬಿ ಅವರು ದೇಸಿ ಢಾಬಾದಲ್ಲಿ ಹಮ್ಮಿಕೊಂಡಿದ್ದ ಭೋಜನಾಕೂಟದಲ್ಲಿ ಪಾಲ್ಗೊಂಡು, ಮಾಂಸಹಾರಿ ಭೋಜನದ ಸವಿದರು.