ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ತರಬೇತುಗಾರ್ತಿಯನ್ನೇ ನೀರಿಗೆಳೆದು ಕೊಂದ 'ಹಂತಕ' ತಿಮಿಂಗಿಲ (Florida | SeaWorld killer whale | Dawn Brancheau | Tilikum)
Bookmark and Share Feedback Print
 
ಅಮ್ಯೂಸ್‌ಮೆಂಟ್ ಪಾರ್ಕ್ ಒಂದರಲ್ಲಿ ಪ್ರದರ್ಶನ ಮುಗಿದ ನಂತರ ಪ್ರೇಕ್ಷಕರೆದುರು ಹಂತಕ ತಿಮಿಂಗಿಲವೊಂದು ತರಬೇತುಗಾರ್ತಿಯನ್ನೇ ನೀರಿಗೆ ಎಳೆದು ಕೊಂದು ಹಾಕಿರುವ ಘಟನೆ ವರದಿಯಾಗಿದೆ.

ಅಮೆರಿಕಾದ ಫ್ಲೋರಿಡಾದಲ್ಲಿನ ಒರ್ಲಾಂಡೋದ 'ಸೀವರ್ಲ್ಡ್'ನಲ್ಲಿ ಈ ಘಟನೆ ನಡೆದಿದ್ದು, ತರಬೇತುಗಾರ್ತಿ 40ರ ಹರೆಯದ ಡಾನ್ ಬ್ರಾಂಚೆಯವರನ್ನು ಕೊಂದು ಹಾಕುವುದರೊಂದಿಗೆ 'ಟಿಲಿಕುಮ್' ಎಂಬ ತಿಮಿಂಗಿಲ ಮೂವರನ್ನು ಬಲಿ ತೆಗೆದುಕೊಂಡಂತಾಗಿದೆ. ಈ ಹಿಂದೆ ಇಬ್ಬರನ್ನು ಇದೇ ತಿಮಿಂಗಿಲ ಕೊಂದು ಹಾಕಿತ್ತು.

ಪ್ರೇಕ್ಷಕರ ಪ್ರದರ್ಶನ ಮುಗಿದ ನಂತರ ಹತ್ತಿರ ಹೋಗಿದ್ದ ತರಬೇತುಗಾರ್ತಿ ಡಾನ್, ಅದರ ಮೈ ಸವರುತ್ತಿದ್ದರು. ಈ ಹೊತ್ತಿಗೆ ಒಮ್ಮಿಂದೊಮ್ಮೆಲೇ ಡಾನ್ ಅವರನ್ನು ನೀರಿಗೆ ಎಳೆದು ಹಾಕಿದ ತಿಮಿಂಗಿಲವು ಅವರನ್ನು ನೀರಿನೊಳಗೆ ಸ್ವಲ್ಪ ಹೊತ್ತು ಮುಳುಗಿಸಿತು. ಬಳಿಕ ಬಾಯಿಯಲ್ಲಿ ಕಚ್ಚಿಕೊಂಡು ತೊಟ್ಟಿಯೊಳಗೆ ಸುತ್ತು ಹಾಕಲಾರಂಭಿಸಿತು.

ಇದೆಲ್ಲವೂ ಪ್ರೇಕ್ಷಕರೆದುರೇ ಕೆಲವೇ ಕ್ಷಣಗಳಲ್ಲಿ ನಡೆದು ಹೋಯಿತು. ಭೀತಿಗೊಂಡ ಪ್ರೇಕ್ಷಕರು ಚಲ್ಲಾಪಿಲ್ಲಿಯಾಗಿದ್ದರು. ಸ್ವಲ್ಪವೇ ಹೊತ್ತಿನಲ್ಲಿ ಪ್ರೇಕ್ಷಕರನ್ನು ಹೊರಗೆ ಕಳುಹಿಸಿ ಪಾರ್ಕನ್ನು ಮುಚ್ಚಲಾಯಿತು ಎಂದು ಮೂಲಗಳು ಹೇಳಿವೆ.

ಈ ತಿಮಿಂಗಿಲವು ಘಟನೆ ನಡೆಯುವುದಕ್ಕಿಂತ ಹಿಂದಿನ ಪ್ರದರ್ಶನದಲ್ಲಿ ತರಬೇತುಗಾರ್ತಿ ನೀಡಿದ ನಿರ್ದೇಶನಗಳನ್ನು ಸರಿಯಾಗಿ ಪಾಲಿಸುತ್ತಿರಲಿಲ್ಲ. ಕೆಟ್ಟ ಚಟಗಳ ಮಕ್ಕಳಂತೆ ಆ ತಿಮಿಂಗಿಲವು ವರ್ತಿಸುತ್ತಿತ್ತು ಎಂದು ಪ್ರೇಕ್ಷಕರು ವಿವರಣೆ ನೀಡಿದ್ದಾರೆ.

ಸುಮಾರು 16 ವರ್ಷಗಳಿಗೂ ಹೆಚ್ಚು ಕಾಲ ತರಬೇತಿ ನೀಡಿದ ಅನುಭವ ಹೊಂದಿದ್ದ ಡಾನ್ ತಿಮಿಂಗಿಲಗಳ ವರ್ತನೆಯನ್ನು ಚೆನ್ನಾಗಿ ಬಲ್ಲವರಾಗಿದ್ದರು. ಆದರೆ ಮೊದಲಿನಿಂದಲೂ ಕ್ರಾಂತಿಕಾರಿ ಗುಣವನ್ನು ಹೊಂದಿದ್ದ 5,450 ಕಿಲೋ ತೂಕದ ಬೃಹತ್ ತಿಮಿಂಗಿಲದ ಕೃತ್ಯ ದುರದೃಷ್ಟವಷಾತ್ ಮೊದಲೇ ಆಕೆಯ ಅನುಭವಕ್ಕೆ ಬರಲಿಲ್ಲ ಎಂದು ಮೂಲಗಳು ಹೇಳಿವೆ.

ತಿಮಿಂಗಿಲದ ಬೃಹತ್ ಗಾತ್ರ ಮತ್ತು ಅದರ ಕರಾಳ ಇತಿಹಾಸವನ್ನು ತಿಳಿದಿದ್ದರಿಂದ ಹಲವು ತರಬೇತುದಾರರು ಟಿಲಿಕುಮ್ ಸನಿಹಕ್ಕೆ ಬರಲು ಹಿಂದೇಟು ಹಾಕುತ್ತಿದ್ದರು. ಪಾರ್ಕ್‌ನ 29 ತರಬೇತುದಾರರಲ್ಲಿ ಕೇವಲ 12 ಮಂದಿ ಮಾತ್ರ ತಿಮಿಂಗಿಲದ ಪ್ರದರ್ಶನವನ್ನು ಏರ್ಪಡಿಸುತ್ತಿದ್ದರು. ಪಾರ್ಕ್‌ನಲ್ಲೇ ಅತೀ ಹೆಚ್ಚು ಅನುಭವ ಹೊಂದಿರುವ ಸಾಲಿನಲ್ಲಿದ್ದ ಡಾನ್‌, 30ರ ಹರೆಯದ ಈ ತಿಮಿಂಗಿಲದ ಜತೆ ಅತ್ಯುತ್ತಮ ಬಾಂಧವ್ಯ ಹೊಂದಿದ್ದರು ಎಂದು ಮೂಲಗಳು ಹೇಳಿವೆ.
ಸಂಬಂಧಿತ ಮಾಹಿತಿ ಹುಡುಕಿ