ಇಸ್ಲಾಮಾಬಾದ್ , ಶುಕ್ರವಾರ, 26 ಫೆಬ್ರವರಿ 2010( 14:04 IST )
ಭಾರತ ಸಂಪೂರ್ಣವಾಗಿ ಶಾಂತಿ ಮಾತುಕತೆಗೆ ಬದ್ಧವಾಗಿಲ್ಲ ಎಂದು ಪಾಕಿಸ್ತಾನದ ಮಾಧ್ಯಮಗಳು ಭಾರತದ ದ್ವಿಮುಖ ನೀತಿಯನ್ನು ತರಾಟೆಗೆ ತೆಗೆದುಕೊಂಡಿವೆ.
2008ರಲ್ಲಿ ನಡೆದ ಮುಂಬೈ ದಾಳಿಯ ನಂತರ ಮೊದಲ ಬಾರಿಗೆ ಭಾರತ ಮತ್ತು ಪಾಕಿಸ್ತಾನದ ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದ ಮಾತುಕತೆ ಗುರುವಾರದಂದು ನವದೆಹಲಿಯಲ್ಲಿ ಆರಂಭಗೊಂಡಿತ್ತು.
ದೆಹಲಿಯ ದ್ವಿಮುಖ ನೀತಿಯಿಂದಾಗಿ ಮಾತುಕತೆಗಳು ಫಲಪ್ರದವಾಗುವಲ್ಲಿ ವಿಫಲವಾಗಿದ ಎಂದು ಪಾಕಿಸ್ತಾನ ಮೂಲದ ಇಂಗ್ಲೀಷ್ ಭಾಷೆಯ ದಿ ನ್ಯೂಸ್ ಪತ್ರಿಕೆ ಹೆಡ್‌ಲೈನ್‌ಗಳಲ್ಲಿ ವರದಿ ಮಾಡಿದೆ
ಅರ್ಥವಿಲ್ಲದ ಮಾತುಕತೆಗಳು, ಅರ್ಥವಿಲ್ಲದ ದಾರಿಯಲ್ಲಿ ಅಂತ್ಯಗೊಂಡಿವೆ ಎಂದು ದಿ ನೇಶನ್ ಪತ್ರಿಕೆ ಭಾರತದ ನಿಲುವನ್ನು ಖಂಡಿಸಿದೆ.
ಪಾಕಿಸ್ತಾನದ ಜನಪ್ರಿಯ ಪತ್ರಿಕೆ ಡಾನ್, ಉಭಯ ದೇಶಗಳ ಮಾತುಕತೆಯಲ್ಲಿ ಅಧಿಕೃತ ಒಪ್ಪಂದವಾಗಿಲ್ಲ. ಆದರೆ ಶಾಂತಿ ಮಾತುಕತೆ ಆರಂಭವಾಗಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಸಂಪಾದಕೀಯದಲ್ಲಿ ಉಲ್ಲೇಖಿಸಿದೆ.