ಆರಾಧ್ಯ ದೈವ ವ್ಯಕ್ತಿಯಾಗಿದ್ದ ನೆಪೋಲಿಯನ್ ಬೋನಾಪಾರ್ಟೆ ಅವರ ಬೆಲೆ ಕಟ್ಟಲಾಗದ ಅಮೂಲ್ಯ ಹಾಸಿಗೆಯನ್ನು ಖರೀದಿಸಿರುವುದಾಗಿ ಇಟಲಿ ಪ್ರಧಾನ ಮಂತ್ರಿ ಸಿಲ್ವಿವೊ ಬೆರುಲುಸ್ಕೋನಿ ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
73 ವರ್ಷ ವಯಸ್ಸಿನ ಪ್ರಧಾನ ಮಂತ್ರಿ ಸಿಲ್ವಿವೊ ಬೆರುಲುಸ್ಕೋನಿ, ಸ್ತ್ರೀಲೋಲತೆಗೆ ಹೆಸರುವಾಸಿಯಾಗಿದ್ದು, ಮಿಲನ್‌ನಲ್ಲಿರುವ ತಮ್ಮ ನಿವಾಸದಲ್ಲಿ, ಮೇಲ್ಚಾವಣಿ ಹಾಗೂ ಕಂಚಿನ ಗರುಡದ ತಲೆಗಳುಳ್ಳ, ನಾಲ್ಕು ಪೋಸ್ಟರ್ ಹಾಸಿಗೆಯಿಂದ ತಮ್ಮ ಮಲಗುವ ಕೋಣೆಯನ್ನು ಸಿಂಗರಿಸಿದ್ದಾರೆ.
ಆದರೆ ಮಾಧ್ಯಮ ಕಿಂಗ್ ಎಂದು ಖ್ಯಾತಿಯಾದ ಬಿಲಿಯನೇರ್ ಪ್ರಧಾನಿ, ದೇಶಕ್ಕೆ ಸುಂದರವಾದ ಯುವತಿಯರ ವಲಸೆ ಅಗತ್ಯವಾಗಿದೆ.ಹಾಸಿಗೆಯ ಉದ್ದಗಲವನ್ನು ಹೆಚ್ಚಿಸಬೇಕಾಗಿದೆ ಎಂದು ಹೇಳಿದ್ದಾರೆ.
ಸಿಲ್ವಿವೊ ಬೆರುಲುಸ್ಕೋನಿ ನನ್ನ ಆತ್ಮಿಯ ಗೆಳೆಯರಾಗಿದ್ದು, ಕಳೆದ 25 ವರ್ಷಗಳಿಂದ ನನಗೆ ಅವರ ಪರಿಚಯವಿದೆ. ನನ್ನ ಅಂಗಡಿಗೆ ವಸ್ತುಗಳನ್ನು ಖರೀದಿಸಲು ಆಗಮಿಸುತ್ತಾರೆ ಎಂದು ಪ್ರಾಚೀನ ವಸ್ತುಗಳ ಅಂಗಡಿಯ ಮಾಲೀಕ ಅನ್ನಾಮಾರಿಯಾ ಕುವಾಟ್ರಿನಿ ಹೇಳಿರುವುದಾಗಿ ಸನ್ ಮಾಧ್ಯಮ ವರದಿ ಮಾಡಿದೆ.
ನೆಪೋಲಿಯನ್ ಬೊನಾಪಾಟ್‌ಗೆ ಸೇರಿದ ಹಾಸಿಗೆಯಾಗಿದ್ದರಿಂದ, ಅದಕ್ಕೆ ತನ್ನದೇ ಆದ ಮಹತ್ವವಿದೆ. ಚಕ್ರಾಧಿಪತಿಯ ಹಾಸಿಗೆಯಾಗಿದ್ದರಿಂದ ತುಂಬಾ ಸುಂದರವಾಗಿದೆ ಎಂದು ಅನ್ನಾಮಾರಿಯಾ ಕುವಾಟ್ರಿನಿ ಹೇಳಿದ್ದಾರೆ.