ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಆತ್ಮಾಹುತಿ ಬಾಂಬರ್ ದಾಳಿ: ಒಂಬತ್ತು ಭಾರತೀಯರ ಸಾವು (Kabul | Suicide bombers | Taliban | Foreigners| Afghan)
Bookmark and Share Feedback Print
 
ನಗರದ ಮಧ್ಯಭಾಗದಲ್ಲಿ ವಿದೇಶಿ ಪ್ರವಾಸಿಗರು ವಾಸಿಸುತ್ತಿದ್ದ ಹೋಟೆಲ್‌ಗಳ ಮೇಲೆ ಐವರು ಆತ್ಮಾಹುತಿ ಬಾಂಬರ್‌‌ಗಳು ದಾಳಿ ನಡೆಸಿದಾಗ 30 ಮಂದಿ ಗಾಯಗೊಂಡು, 17 ಮಂದಿ ಸಾವನ್ನಪ್ಪಿದ್ದು, ಅದರಲ್ಲಿ ಒಂಬತ್ತು ಮಂದಿ ಭಾರತೀಯರು ಸೇರಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಸ್ಫೋಟದ ಹೊಣೆಯನ್ನು ತಾಲಿಬಾನ್ ವಹಿಸಿಕೊಂಡಿದ್ದು, ವಿದೇಶಿ ನಾಗರಿಕರು ವಾಸಿಸುವ ಕಟ್ಟಡಗಳ ಮೇಲೆ ಐವರು ಆತ್ಮಾಹುತಿ ಬಾಂಬರ್‌ಗಳು ದಾಳಿ ನಡೆಸಿದ್ದಾರೆ ಎಂದು ಹೇಳಿಕೆ ನೀಡಿದೆ. ಆದರೆ ಪೊಲೀಸ್ ಅಧಿಕಾರಿಗಳು ಕೇವಲ ಮೂರು ಮಂದಿ ಆತ್ಮಾಹುತಿ ಬಾಂಬರ್‌ಗಳು ದಾಳಿ ನಡೆಸಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ಆತ್ಮಾಹುತಿ ಉಗ್ರರ ದಾಳಿಯಲ್ಲಿ 30 ಮಂದಿ ಗಾಯಗೊಂಡಿದ್ದು, ಒಂಬತ್ತು ಮಂದಿ ಭಾರತೀಯರು ಸಾವನ್ನಪ್ಪಿರುವುದಾಗಿ ಕಾಬೂಲ್‌ನ ಅಪರಾಧ ತನಿಖಾ ವಿಭಾಗದ ಮುಖ್ಯಸ್ಥರಾದ ಅಬ್ದುಲ್ ಗಫಾರ್ ಸಯ್ಯದ್ ಜಾದಾ ಖಚಿತಪಡಿಸಿದ್ದಾರೆ.

ಘಟನೆಯಲ್ಲಿ ಮೂವರು ಪೊಲೀಸ್ ಅಧಿಕಾರಿಗಳು ಸಾವನ್ನಪ್ಪಿದ್ದಾರೆ. ಭಾರತದ ನಾಗರಿಕರು ಕೂಡಾ ಹತ್ಯೆಯಾಗಿದ್ದಾರೆ. ವಿದೇಶಿಯರು, ವಿಶೇಷವಾಗಿ ಭಾರತೀಯರು ವಾಸಿಸುವ ಎರಡು ಕಟ್ಟಡಗಳನ್ನು ತಾಲಿಬಾನಿಗಳು ಗುರಿಯಾಗಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಹಮೀದ್ ಗೆಸ್ಟ್‌ಹೌಸ್‌ಗೆ ಕಾರ್‌ಬಾಂಬ್‌ ದಾಳಿ ನಡೆಸಿದ್ದು, ಪಕ್ಕದಲ್ಲಿರುವ ಪಾರ್ಕ್ ರೆಸಿಡೆನ್ಸ್‌‌ ಮೇಲೆ ಇತರ ಉಗ್ರಗಾಮಿಗಳು ದಾಳಿ ನಡೆಸಿದ್ದಾರೆ ಎಂದು ಸಯ್ಯದ್ ಜಾದಾ ತಿಳಿಸಿದ್ದಾರೆ.

ತಾಲಿಬಾನಿಗಳ ಭಧ್ರಕೋಟೆಯಾದ ಮರ್ಜಾ ಮತ್ತು ಹೆಲ್ಮಂಡ್ ಪಟ್ಟಣಗಳ ಮೇಲೆ, ಸಾವಿರಾರು ಸಂಖ್ಯೆಯಲ್ಲಿದ್ದ ಅಮೆರಿಕದ ನ್ಯಾಟೋ ಹಾಗೂ ಅಫ್ಘನ್ ಸೇನೆಗಳು, ಭಾರಿ ಸೇನಾಕಾರ್ಯಾಚರಣೆ ನಡೆಸಿದ ಹಿನ್ನೆಲೆಯಲ್ಲಿ ಸೇಡು ತೀರಿಸಿಕೊಳ್ಳಲು ತಾಲಿಬಾನಿಗಳು ದಾಳಿ ನಡೆಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಇತ್ತೀಚಿನ ಕೆಲ ವಾರಗಳಲ್ಲಿ ಪಾಕಿಸ್ತಾನದಲ್ಲಿ ಹಲವಾರು ತಾಲಿಬಾನ್ ನಾಯಕರನ್ನು ಬಂಧಿಸಲಾಗುತ್ತಿದೆ. ನುಸುಳುವಿಕೆ ಮುಂದುವರಿದಿದೆ ಎಂದು ತೋರಿಸಲು ಕಾಬೂಲ್‌ ಮೇಲೆ ತಾಲಿಬಾನ್ ಉಗ್ರರು ದಾಳಿ ನಡೆಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ