ಮಸೀದಿಗಳನ್ನು ನಾಶಪಡಿಸಿ ಧರ್ಮದಲ್ಲಿ ಅಪನಂಬಿಕೆ ತೋರುತ್ತಿರುವ ಸ್ವಿಟ್ಜರ್‌ಲ್ಯಾಂಡ್ ವಿರುದ್ಧ, ಶಸ್ತ್ರಾಸ್ತ್ರ ಹೋರಾಟ ಅಥವಾ ಜಿಹಾದ್ ದಾಳಿಗೆ ಲಿಬಿಯಾ ಅಧ್ಯಕ್ಷ ಮುವಮ್ಮರ್ ಗಡ್ಡಾಫಿ ಕರೆ ನೀಡಿದ್ದಾರೆ.
ವಿಶ್ನದ ಯಾವುದೇ ದೇಶದ ಮುಸ್ಲಿಂ ರಾಷ್ಟ್ರಗಳು ಸ್ವಿಟ್ಜರ್‌ಲ್ಯಾಂಡ್‌ನೊಂದಿಗೆ ಕಾರ್ಯನಿರ್ವಹಿಸುತ್ತಿದ್ದಲ್ಲಿ, ಪ್ರವಾದಿ ಮೊಹಮ್ಮದ್, ದೇವರು ಹಾಗೂ ಖುರಾನ್ ವಿರುದ್ಧವಾಗಿರುತ್ತದೆ ಎಂದು ಪ್ರವಾದಿ ಮೊಹಮ್ಮದ್ ಅವರ ಜನ್ಮದಿನಾಚರಣೆಯ ಸಂದರ್ಭದಲ್ಲಿ ಹೇಳಿದ್ದಾರೆ.
ಇಸ್ಲಾಮಿಕ ರಾಷ್ಟ್ರಗಳಲ್ಲಿರುವ ವಿಮಾನ ನಿಲ್ದಾಣಗಳು ಹಾಗೂ ನೌಕಾ ಬಂದರುಗಳು ಮತ್ತು ಸ್ವಿಸ್ ಹಡಗುಗಳನ್ನು ಪರಿಶೀಲಿಸಿ, ಸ್ವಿಟ್ಜರ್‌ಲ್ಯಾಂಡ್ ವಸ್ತುಗಳ ಮಾರಾಟವನ್ನು ತಡೆಯಬೇಕು ಎಂದು ಮುಸ್ಲಿಂ ಸಮುದಾಯಕ್ಕೆ ಕರೆ ನೀಡಿದ್ದಾರೆ.
2008ರಲ್ಲಿ ಕೆಲಸಗಾರರನ್ನು ನಿಂದಿಸಿದ ಹಿನ್ನೆಲೆಯಲ್ಲಿ ಗಡ್ಡಾಫಿಯವರ ಪುತ್ರನನ್ನು ಜಿನೇವಾ ಹೋಟೆಲ್‌ನಲ್ಲಿ ಬಂಧಿಸಲಾಗಿತ್ತು. ನಂತರ ಉಭಯ ದೇಶಗಳ ಮಧ್ಯೆ ಸಂಬಂಧಗಳು ಮುರಿದುಬಿದ್ದಿವೆ. ಗಡ್ಡಾಫಿ ಹೇಳಿಕೆಗೆ ತಾವು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಸ್ವಿಸ್ ವಿದೇಶಾಂಗ ಸಚಿವಾಲಯ ಹೇಳಿಕೆ ನೀಡಿದೆ.
ಗಡ್ಡಾಫಿ ಪುತ್ರನ ವಿರುದ್ಧದ ಪ್ರಕರಣಗಳನ್ನು ಕೈಬಿಟ್ಟು ಶೀಘ್ರದಲ್ಲಿ ಬಿಡುಗಡೆಗೊಳಿಸಲಾಗಿತ್ತು.ಆದರೆ ಲಿಬಿಯಾ ಸ್ವಿಟ್ಜರ್‌ಲ್ಯಾಂಡ್‌ಗೆ ತೈಲ ಸರಬರಾಜು ಕಡಿತಗೊಳಿಸಿ, ಸ್ವಿಸ್ ಬ್ಯಾಂಕ್‌ನಲ್ಲಿರುವ ಬಿಲಿಯನ್‌ಗಟ್ಟಲೆ ಡಾಲರ್‌ಗಳನ್ನು ಹಿಂತೆಗೆದುಕೊಂಡಿತ್ತು ಎಂದು ಮೂಲಗಳು ತಿಳಿಸಿವೆ.
ಯಹೂದಿ ಹಾಗೂ ವಿದೇಶಿಯರ ಮೇಲಿನ ಆಕ್ರಮಣಕ್ಕಾಗಿ ಸ್ವಿಟ್ಜರ್‌ಲ್ಯಾಂಡ್ ವಿರುದ್ಧ ಹೋರಾಟ ನಡೆಸಲಾಗುವುದು.ಆದರೆ ಇದು ಭಯೋತ್ಪಾದನೆಯಲ್ಲ. ಭಯೋತ್ಪಾದನೆಗೆ ಮತ್ತು ಜಿಹಾದ್ ತುಂಬಾ ಭಿನ್ನತೆಯಿದೆ. ಜಿಹಾದ್ ಎಂದರೆ ಶಸ್ತ್ರಾಸ್ತ್ರ ಹೋರಾಟ ಎಂದು ಗಡ್ಡಾಫಿ ಬಣ್ಣಿಸಿದ್ದಾರೆ.