ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಕಾಶ್ಮಿರದಲ್ಲಿ ಭಯೋತ್ಪಾದನೆಗೆ ಪಾಕ್ ಬೆಂಬಲ: ಮುಷರಫ್ (Kashmir | Militancy | Pervez Musharraf)
Bookmark and Share Feedback Print
 
PTI
ಪಾಕಿಸ್ತಾನ 1989ರಿಂದ ನಿರಂತರವಾಗಿ ಕಾಶ್ಮಿರದಲ್ಲಿ ಭಯೋತ್ಪಾದಕರಿಗೆ ಬೆಂಬಲ ನೀಡುತ್ತಿದೆ.ಇವತ್ತಿಗೂ ಕೂಡಾ ಉಗ್ರರ ಒಳನುಸುಳುವಿಕೆಯಲ್ಲಿ ಪಾಕ್ ಹಸ್ತಕ್ಷೇಪವಿದೆ ಎಂದು ಪಾಕಿಸ್ತಾನದ ಮಾಜಿ ರಾಷ್ಟ್ರಾಧ್ಯಕ್ಷ ಜನರಲ್ ಪರ್ವೇಜ್ ಮುಷರಪ್ ಹೇಳಿದ್ದಾರೆ.

ಲಾರ್ಡ್ಸ್‌ನ ಸಂಸತ್ ಸದಸ್ಯರ ಸಭೆಯಲ್ಲಿ 'ನಾಯಕತ್ವ' ಎನ್ನುವ ವಿಷಯ ಕುರಿತಂತೆ ಮಾತನಾಡಿದ ಮುಷರಪ್, ಕಳೆದ 20 ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಕಾಶ್ಮಿರಿ ಮುಜಾಹಿದಿನ್ ಗುಂಪುಗಳಿಗೆ, ಪಾಕಿಸ್ತಾನ ಸರಕಾರ ನಿರಂತರ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿದ್ದಾರೆ.

1989ರಲ್ಲಿ ಸ್ವತಂತ್ರ ಕಾಶ್ಮಿರಕ್ಕಾಗಿ ಹೋರಾಟ ಆರಂಭವಾಗಿದ್ದು, ಕಾಶ್ಮಿರಿ ಮುಜಾಹಿದಿನ್ ಗುಂಪುಗಳ ಪಾತ್ರ ತುಂಬಾ ಮಹತ್ವದ್ದಾಗಿದೆ. ಪಾಕಿಸ್ತಾನದಲ್ಲಿ ಹಲವಾರು ಮುಜಾಹಿದಿನ್ ಗುಂಪುಗಳು ನೆಲೆಯೂರಿವೆ. ಕಾಶ್ಮಿರ ಸಮಸ್ಯೆ ಇತ್ಯರ್ಥವಾಗದೆ ಉಳಿದಿರುವುದರಿಂದ, ಮುಜಾಹಿದಿನ್ ಗುಂಪುಗಳಿಗೆ ಸಾರ್ವಜನಿಕ ಬೆಂಬಲ ದೊರೆಯುತ್ತಿದೆ ಎಂದರು.

ಉಭಯ ದೇಶಗಳು ಪ್ರಾಮಾಣಿಕವಾಗಿ ಕಾಶ್ಮಿರ ಸಮಸ್ಯೆಯನ್ನು ಪರಿಹರಿಸದಿದ್ದಲ್ಲಿ, ಶಾಂತಿ ಸ್ಥಾಪನೆ ಹಾಗೂ ಏಳಿಗೆಯನ್ನು ಬಯಸುವುದು ಸಾಧ್ಯವಿಲ್ಲ ಎಂದು ಮುಷರಫ್ ಹೇಳಿದ್ದಾರೆ.

ಭಾರತದ ಮುಸ್ಲಿಂರಲ್ಲಿ ಅನಾದರ ಭಾವನೆ ವೇಗವಾಗಿ ಬೆಳೆಯುತ್ತಿರುವುದರಿಂದ,ಪ್ರತ್ಯೇಕತಾವಾದಿಗಳಿಗೆ ಬೆಂಬಲ ದೊರೆಯಲು ಮೂಲಕಾರಣವಾಗಿದೆ ಎಂದು ಮಾಜಿ ರಾಷ್ಟ್ರಾಧ್ಯಕ್ಷ ಜನರಲ್ ಪರ್ವೇಜ್ ಮುಷರಫ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ