ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭಾರತೀಯ ಮೂಲದ ಕಮಲಾ ಟ್ರಿನಿಡಾಡ್ ವಿಪಕ್ಷ ನಾಯಕಿ (Indian | Trinidad | Tobago | Kamla Persad | parliament)
Bookmark and Share Feedback Print
 
ಭಾರತೀಯ ಮೂಲದ ಕಮಲಾ ಪ್ರಸಾದ್ ಬಿಸ್ಸೆಸ್ಸಾರ್ ಅವರು ಕೆರಿಬಿಯನ್ ದ್ವೀಪ ಸಮೂಹದಲ್ಲಿರುವ ಟ್ರಿನಿಡಾಡ್ ಅಂಡ್ ಟೊಬಾಗೋದ ಸಂಸತ್‌ನ ವಿಪಕ್ಷದ ನಾಯಕಿಯಾಗಿ ಆಯ್ಕೆಗೊಳ್ಳುವ ಮೂಲಕ ರಾಷ್ಟ್ರದ ಪ್ರಥಮ ಮಹಿಳಾ ವಿಪಕ್ಷಿ ನಾಯಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಕಮಲಾ ಅವರಿಗೆ ಗುರುವಾರ ಅಧ್ಯಕ್ಷ ಜಾರ್ಜ್ ಮಾಕ್ಸ್‌ವೆಲ್ ರಿಚರ್ಡ್ಸ್ ಅವರು ಪ್ರಮಾಣವಚನ ಬೋಧಿಸಿದರು. ಮಾಜಿ ಪ್ರಧಾನಿ, ವಿಪಕ್ಷ ನಾಯಕರಾಗಿದ್ದ ಬಾಸಡೆವೋ ಪಾಂಡೆ ಅವರಿಂದ ತೆರವಾದ ಸ್ಥಾನಕ್ಕೆ ಕಮಲಾ ಅವರು ಆಯ್ಕೆಯಾಗಿದ್ದಾರೆ.

ಪಾಂಡೆ ಅವರು ಸುಮಾರು 34ವರ್ಷಗಳ ಕಾಲ ವಿರೋಧ ಪಕ್ಷದ ನಾಯಕರಾಗಿದ್ದರು. ಅಲ್ಲದೇ ಆರು ವರ್ಷಗಳ ಕಾಲ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ್ದರು.

ಜನವರಿ 24ರಂದು ಯುನೈಟೆಡ್ ನ್ಯಾಷನಲ್ ಕಾಂಗ್ರೆಸ್ ಪಕ್ಷದ ವತಿಯಿಂದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಕಮಲಾ ಅವರು ಎದುರಾಳಿ ಪಾಂಡೆ ಅವರನ್ನು ಸೋಲಿಸಿದ್ದರು.

ಬಿಹಾರ- ಉತ್ತರ ಪ್ರದೇಶದಿಂದ ಅವರ ಪೂರ್ವಜರು ಸೇರಿದಂತೆ ಸುಮಾರು 148,000 ಜನರು ಕಬ್ಬಿನ ಗದ್ದೆಗಳಲ್ಲಿ ಕೆಲಸ ಅರಸಿಕೊಂಡು 1845- 1917ರ ಅವಧಿಯಲ್ಲಿ ಇಲ್ಲಿಗೆ ಬಂದು ನೆಲೆಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ