ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕಿಸ್ತಾನ ಮಿಲಿಟರಿ ಕಾರ್ಯಾಚರಣೆಗೆ 17 ಉಗ್ರರು ಬಲಿ (militants | Pakistan | military operations | security personnel)
Bookmark and Share Feedback Print
 
ವಾಯುವ್ಯ ಪಾಕಿಸ್ತಾನದಲ್ಲಿ ಶುಕ್ರವಾರ ಭದ್ರತಾ ಪಡೆಗಳು ಮತ್ತು ತಾಲಿಬಾನ್ ಹೋರಾಟಗಾರರ ನಡುವಿನ ಸಂಘರ್ಷದಲ್ಲಿ 17ಕ್ಕೂ ಹೆಚ್ಚು ಭಯೋತ್ಪಾದಕರನ್ನು ಕೊಂದು ಹಾಕಲಾಗಿದೆ. ಓರ್ವ ಮಿಲಿಟರಿ ಸಿಬ್ಬಂದಿ ಈ ಸಂದರ್ಭದಲ್ಲಿ ಗಾಯಗೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೇನಾಪಡೆಯ ನಗರ ಕೋಹಟ್ ಸಮೀಪದ ಪಾಸ್ತವನಾ ಪ್ರದೇಶದಲ್ಲಿ ಮಿಲಿಟರಿ ಮತ್ತು ಅರೆ ಸೇನಾಪಡೆಗಳು ಜಂಟಿಯಾಗಿ ನಡೆಸಿದ ಕಾರ್ಯಾಚರಣೆ ಸಂದರ್ಭದಲ್ಲಿ ಉಗ್ರರನ್ನು ಕೊಂದು ಹಾಕಲಾಗಿದೆ.

ಕಾಳಗದ ಸಂದರ್ಭದಲ್ಲಿ 17 ಭಯೋತ್ಪಾದಕರು ಸಾವನ್ನಪ್ಪಿದ್ದಾರೆ. ಓರ್ವ ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾನೆ ಎಂದು ಅರೆ ಸೇನಾಪಡೆಯ ಅಧಿಕಾರಿಗಳು ವಿವರಣೆ ನೀಡಿದ್ದಾರೆ.

ಭಯೋತ್ಪಾದಕರಿಂದ ಭಾರೀ ಪ್ರಮಾಣ ಶಸ್ತ್ರಾಸ್ತ್ರ, ಸ್ಫೋಟಕಗಳು, ಎಂಟು ಆತ್ಮಹತ್ಯಾ ಜಾಕೆಟುಗಳನ್ನು ವಶ ಪಡಿಸಿಕೊಳ್ಳಲಾಗಿದೆ.

ಅಮೆರಿಕಾದಿಂದ ತೀವ್ರ ಒತ್ತಡ ಎದುರಿಸುತ್ತಿರುವ ಪಾಕಿಸ್ತಾನವು ವಾಯುವ್ಯ ಪ್ರಾಂತ್ಯದಲ್ಲಿ ಅಡಗಿಕೊಂಡಿರುವ ಸುರಕ್ಷಿತ ನೆಲೆಗಳ ಮೇಲೆ ಜಂಟಿ ಕಾರ್ಯಾಚರಣೆಗಳ ಮೂಲಕ ದಾಳಿ ನಡೆಸುತ್ತಿದೆ.

ಪಾಕಿಸ್ತಾನದ ವಾಯುವ್ಯ ಪ್ರಾಂತ್ಯವು ಜಗತ್ತಿನಲ್ಲೇ ಅತೀ ಅಪಾಯಕಾರಿ ಸ್ಥಳವೆಂದು ಅಮೆರಿಕಾ ಪರಿಗಣಿಸಿದ್ದು, ಒಸಾಮಾ ಬಿನ್ ಲಾಡೆನ್ ನಾಯಕತ್ವದ ಅಲ್‌‌ಖೈದಾ ಇಲ್ಲಿ ಭಾರೀ ಪ್ರಭಾವಶಾಲಿಯಾಗಿದೆ ಎಂದು ಹೇಳುತ್ತಾ ಬಂದಿದೆ.
ಸಂಬಂಧಿತ ಮಾಹಿತಿ ಹುಡುಕಿ