ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಫ್ಘಾನ್‌ನಿಂದ 2015ರೊಳಗೆ ಮಿಲಿಟರಿ ಪಡೆ ವಾಪಸ್: ಬ್ರಿಟನ್ (Afghanista | Britain | Britain | militarily troops)
Bookmark and Share Feedback Print
 
ಮುಂದಿನ ಐದು ವರ್ಷದೊಳಗೆ ಅಫ್ಘಾನಿಸ್ತಾನದಿಂದ ಬ್ರಿಟನ್ ಮಿಲಿಟರಿ ಪಡೆಯನ್ನು ವಾಪಸು ಕರೆಯಿಸಿಕೊಳ್ಳಲಾಗುವುದು ಎಂದು ಬ್ರಿಟನ್ ಆರ್ಮಿ ವರಿಷ್ಠ ಜನರಲ್ ಡೇವಿಡ್ ರಿಚರ್ಡ್ಸ್ ತಿಳಿಸಿದ್ದು, ತಾಲಿಬಾನ್ ವಿರುದ್ಧದ ಹೋರಾಟದಲ್ಲಿ ತಾವು ಪ್ರಮುಖ ಹಂತಕ್ಕೆ ಬರುವುದಾಗಿ ಹೇಳಿದ್ದಾರೆ.

ಅಫ್ಘಾನಿಸ್ತಾನದಲ್ಲಿ ಉಗ್ರರ ವಿರುದ್ಧದ ಹೋರಾಟವನ್ನು 2011ಕ್ಕೆ ಅಂತ್ಯಗೊಳಿಸಬೇಕೆಂದು ನಿರೀಕ್ಷಿಸಲಾಗಿತ್ತು. ಆದರೆ ಅಲ್ಲಿನ ಪರಿಸ್ಥಿತಿಯನ್ನು ಗಮನಿಸದ ಮೇಲೆ ಇನ್ನೂ ಐದು ವರ್ಷಗಳ ಕಾಲ ಬ್ರಿಟನ್ ಮಿಲಿಟರಿ ಕಾರ್ಯಾಚರಣೆ ಮತ್ತು ತರಬೇತಿಯನ್ನು ಮುಂದುವರಿಸುವುದಾಗಿ ಡೇವಿಡ್ ತಿಳಿಸಿದ್ದಾರೆಂದು ದಿ ಟೆಲಿಗ್ರಾಫ್ ಪತ್ರಿಕೆ ವರದಿ ಹೇಳಿದೆ.

ಅಫ್ಘಾನಿಸ್ತಾನದಲ್ಲಿ ಬ್ರಿಟನ್ ಮಿಲಿಟರಿ ಕಾರ್ಯಾಚರಣೆ ಮುಂದಿನ 40ವರ್ಷಗಳವರೆಗೆ ಮುಂದುವರಿಯಲಿದೆ ಎಂಬ ಹೇಳಿಕೆ ನೀಡಿದ ಏಳು ತಿಂಗಳ ನಂತರ ರಿಚರ್ಡ್ಸ್ ಈ ಹೇಳಿಕೆ ನೀಡಿದ್ದಾರೆ.

ಅಫ್ಘಾನಿಸ್ತಾನದಲ್ಲಿ ತಾಲಿಬಾನ್, ಅಲ್ ಖಾಯಿದಾ ಉಗ್ರರನ್ನು ಮಟ್ಟಹಾಕುವಲ್ಲಿ ನಮ್ಮದೇ ಕಾರ್ಯತಂತ್ರದ ಮೂಲಕ ಕಾರ್ಯಾಚರಿಸುತ್ತಿರುವುದಾಗಿ ಅವರು ಸ್ಪಷ್ಟಪಡಿಸಿದರು.
ಸಂಬಂಧಿತ ಮಾಹಿತಿ ಹುಡುಕಿ