ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಜಪಾನ್ ಸುನಾಮಿ ಮುನ್ನೆಚ್ಚರಿಕೆ: 70,000 ನಿವಾಸಿಗಳ ಸ್ಥಳಾಂತರ (Japan | Tsunami | Chile)
Bookmark and Share Feedback Print
 
PTI
ಚಿಲಿಯಲ್ಲಿ ಭೂಕಂಪ ಸಂಭವಿಸಿದ ಬೆನ್ನಲ್ಲೇ ಫೆಸಿಫಿಕ್ ಸಮುದ್ರ ತೀರಗಳಲ್ಲಿ ಸುನಾಮಿ ಎಚ್ಚರಿಕೆಯ ಕರೆಗಂಟೆ ನೀಡಿದ್ದರಿಂದ ಜಪಾನ್‌ನ ಸಮುದ್ರ ತೀರದ ಸುಮಾರು 70,000ಕ್ಕೂ ಹೆಚ್ಚು ನಿವಾಸಿಗಳನ್ನು ಮುನ್ನಚ್ಚರಿಕೆಗಾಗ ಬೇರೆ ಕಡೆಗೆ ಸ್ಥಳಾಂತರಿಸಲಾಗಿದೆ.

ಜಪಾನ್ ಪ್ರಧಾನಿ ಯೂಕಿ ಹಟೋಯಾಮಾ ಈ ಹಿನ್ನೆಲೆಯಲ್ಲಿ ಸಾರ್ವಜನಿಕವಾಗಿ ಮಾತನಾಡಿದ್ದು, ದಯವಿಟ್ಟು ಯಾರೂ ಸಮುದ್ರ ತೀರಕ್ಕೆ ಹೋಗದಂತೆ ಸಂದೇಶ ರವಾನಿಸಿದ್ದಾರೆ.

ಈಗಾಗಲೇ ಉತ್ತರ ದ್ವೀಪಪ್ರದೇಶವಾದ ಹೊಕ್ಕಾಯಿಡೋದಲ್ಲಿ ಮಧ್ಯಾಹ್ನದ ವೇಳೆಗೆ ಒಂದು ಅಡಿ ಎತ್ತರವಿರುವ ಅಲೆಗಳು ಅಪ್ಪಳಿಸಲಾರಂಭಿಸಿದ್ದು ಜನರಲ್ಲಿ ಸುನಾಮಿ ಭೀತಿಯನ್ನು ಸೃಷಅಟಿಸಿದೆ.ಅಮೋರಿ, ಐವೇಟ್, ಮಿಯಾಗಿ ಮತ್ತಿತರ ದಕ್ಷಿಣ ಭಾಗದ ಹೊಕ್ಕಾಯಿಡೋ ದ್ವೀಪಗಳಲ್ಲೂ 10 ಅಡಿ ಎತ್ತರದ ಭಾರೀ ಅಲೆಗಳು ಸಮುದ್ರದಲ್ಲಿ ಗೋಚರವಾಗುತ್ತಿದೆ. ಹೀಗಾಗಿ ಜಪಾನ್‌ನ ಎಲ್ಲಾ ಟಿವಿ ಚಾನಲ್‌ಗಳಲ್ಲಿ ಸುನಾಮಿಯ ಬಗ್ಗೆ ಮುನ್ನೆಚ್ಚರಿಕೆ ಸಂದೇಶಗಳ್ನನು ರವಾನಿಸಲಾಗುತ್ತಿದ್ದು, ಸಮುದ್ರ ತೀರದ ನಿವಾಸಿಗಳಿಗೆ ರಕ್ಷಣೆ ಒದಗಿಸಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಜಪಾನ್, ಸುನಾಮಿ, ಪ್ರಕೃತಿ ವಿಕೋಪ