ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಚಿಲಿ ಭೂಕಂಪದಿಂದ ತತ್ತರ;ಮತ್ತೊಂದೆಡೆ ಲೂಟಿಕೋರರು! (Bachelet | Chile | Earthquake | looting | curfew)
Bookmark and Share Feedback Print
 
ಚಿಲಿ ಪ್ರಬಲ ಭೂಕಂಪದಿಂದ ತತ್ತರಿಸಿದ್ದು, ಸಾವಿನ ಸಂಖ್ಯೆ 700ಕ್ಕೆ ಏರಿದೆ. ಶವಗಳನ್ನು ಮೇಲಕ್ಕೆತ್ತಲು ಸರ್ಕಾರ ಸೈನಿಕ ಪಡೆಯನ್ನು ರವಾನಿಸಿದ್ದು, ಏತನ್ಮಧ್ಯೆ ರಾತ್ರಿ ವೇಳೆಯಲ್ಲಿ ಲೂಟಿಕೋರರ ಹಾವಳಿ ಹೆಚ್ಚಾಗಿದ್ದರಿಂದ ಕರ್ಫ್ಯೂ ವಿಧಿಸಲಾಗಿದೆ.

ಕೆರೆಬಿಯನ್ ರಾಷ್ಟ್ರವಾದ ಹೈಟಿಯಲ್ಲಿ ಸಂಭವಿಸಿದ್ದ ಭಾರೀ ಭೂಕಂಪನದ ನಂತರ ಚಿಲಿಯಲ್ಲಿ ಶನಿವಾರ ನಸುಕಿನ ವೇಳೆ ಸಂಭವಿಸಿದ ಪ್ರಬಲ ಭೂಕಂಪ ಈ ಶತಮಾನದ ದೊಡ್ಡ ಭೂಕಂಪ ಎಂದೇ ವಿಶ್ಲೇಷಿಸಲಾಗುತ್ತಿದೆ.

ಅವಶೇಷಗಳ ಅಡಿಯಲ್ಲಿ ಸಿಲುಕಿರುವವರನ್ನು ಹೊರತೆಗೆಯಲು ಸೈನಿಕರು, ಅಗ್ನಿಶಾಮಕ ದಳದ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಏತನ್ಮಧ್ಯೆ ಲೂಟಿಕೋರರ ಹಾವಳಿ ಹೆಚ್ಚಾಗಿದ್ದು, ಅವರನ್ನು ಚದುರಿಸಲು ಅಶ್ರುವಾಯುವನ್ನು ಸಿಡಿಸಲಾಯಿತು.

ಭೂಕಂಪನದಿಂದ ಸುಮಾರು 500,000ಮನೆಗಳು ಧ್ವಂಸಗೊಂಡಿದೆ. ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇರುವುದಾಗಿ ಅಧ್ಯಕ್ಷ ಮೈಕೆಲ್ ಬಾಚ್ಲೆಟ್ ವಿವರಿಸಿದ್ದು, ಕಣ್ಮರೆಯಾದವರ ಸಂಖ್ಯೆ ಕೂಡ ಹೆಚ್ಚಿದೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ