ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕ್‌ನಲ್ಲಿನ ಉಗ್ರರ ಚಟುವಟಿಕೆ ಚಿಂತೆಗೀಡು ಮಾಡಿದೆ: ಸೌದಿ (Saudi Arabia | Al Qaeda | Pakistan | Taliban | Riyadh)
Bookmark and Share Feedback Print
 
ಪಾಕಿಸ್ತಾನದಲ್ಲಿ ಅಲ್ ಖಾಯಿದಾ ಮತ್ತು ತಾಲಿಬಾನ್ ಉಗ್ರ ಸಂಘಟನೆಗಳ ಅಟ್ಟಹಾಸದ ಕುರಿತು ಆತಂಕ ವ್ಯಕ್ತಪಡಿಸಿರುವ ಸೌದಿ ಅರೆಬಿಯಾ, ಆ ನಿಟ್ಟಿನಲ್ಲಿ ಪಾಕ್‌ನಲ್ಲಿರುವ ರಾಜಕೀಯ ಮುಖಂಡರು ಉಗ್ರರನ್ನು ಬಗ್ಗು ಬಡಿಯುವ ಕಟ್ಟು ನಿಟ್ಟಿನ ಕ್ರಮಕ್ಕಾಗಿ ಒಗ್ಗೂಡಬೇಕೆಂದು ಕೋರಿದೆ.

ಪಾಕಿಸ್ತಾನ ನಮ್ಮ ಮಿತ್ರ ದೇಶವಾಗಿದೆ. ಆ ನಿಟ್ಟಿನಲ್ಲಿ ಮಿತ್ರ ದೇಶಕ್ಕೆ ಯಾವುದೇ ರೀತಿಯ ಅಪಾಯವಾಗುವ ಆತಂಕ ನಮ್ಮದಾಗಿದೆ. ಹಾಗಾಗಿ ಪಾಕಿಸ್ತಾನದಲ್ಲಿನ ಉಗ್ರರ ಚಟುವಟಿಕೆ ನಮ್ಮನ್ನು ಚಿಂತೆಗೀಡು ಮಾಡಿದೆ ಎಂದು ಸೌದಿ ಅರೆಬಿಯಾದ ವಿದೇಶಾಂಗ ಸಚಿವ ಸೌದ್ ಅಲ್ ಫೈಸಲ್ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.

ಪಾಕಿಸ್ತಾನದಲ್ಲಿ ಉಗ್ರರು ಪ್ರಾಬಲ್ಯ ಹೊಂದುತ್ತಿರುವ ಬೆಳವಣಿಗೆಯನ್ನು ಹತ್ತಿಕ್ಕುವುದು ಎಲ್ಲಾ ರಾಜಕೀಯ ಪಕ್ಷಗಳ ಕರ್ತವ್ಯವಾಗಿದೆ ಎಂದು ಸಲಹೆ ನೀಡಿರುವ ಅವರು, ಉಗ್ರರು ಮೇಲುಗೈ ಸಾಧಿಸದಂತೆ ಕಡಿವಾಣ ಹಾಕುವಲ್ಲಿ ಪಾಕ್ ರಾಜಕೀಯ ಪಕ್ಷಗಳು ಒಗ್ಗಟ್ಟು ಪ್ರದರ್ಶಿಸಬೇಕು ಎಂದರು. ಪಾಕಿಸ್ತಾನದಲ್ಲಿನ ಉಗ್ರಗಾಮಿ ಚಟುವಟಿಕೆ ಬಗ್ಗೆ ಕಳವಳ ಇದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಫೈಸಲ್ ಈ ರೀತಿ ಪ್ರತಿಕ್ರಿಯೆ ನೀಡಿದರು.
ಸಂಬಂಧಿತ ಮಾಹಿತಿ ಹುಡುಕಿ