ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕಿಸ್ತಾನ: ಉಗ್ರರಿಂದ ಅಪಹರಿಸಲ್ಪಟ್ಟ ಸಿಖ್‌ರಿಬ್ಬರ ರಕ್ಷಣೆ (Sikhs | Abduction | Taliban | Pakistan | Peshawar)
Bookmark and Share Feedback Print
 
ಪಾಕಿಸ್ತಾನದ ವಾಯುವ್ಯ ಪ್ರಾಂತ್ಯದ ಖೈಬರ್ ಬುಡಕಟ್ಟು ಪ್ರದೇಶದಲ್ಲಿ ತಾಲಿಬಾನ್ ಉಗ್ರಗಾಮಿಗಳಿಂದ ಅಪಹರಿಸಲ್ಪಟ್ಟಿದ್ದ ಸಿಖ್‌ರಿಬ್ಬರನ್ನು ಪಾಕ್ ಮಿಲಿಟರಿ ಪಡೆ ಸೋಮವಾರ ಕಾರ್ಯಾಚರಣೆ ನಡೆಸುವ ಮೂಲಕ ರಕ್ಷಿಸಿರುವುದಾಗಿ ತಿಳಿಸಿದೆ.

ಇತ್ತೀಚೆಗಷ್ಟೇ ತಾಲಿಬಾನ್ ಉಗ್ರರು ನಾಲ್ವರು ಸಿಖ್ಖ್‌ರನ್ನು ಅಪಹರಿಸಿ, ಅದರಲ್ಲಿ ಇಬ್ಬರು ಉದ್ಯಮಿಗಳ ತಲೆ ಕಡಿದು ಪೇಶಾವರದ ಗುರುದ್ವಾರಕ್ಕೆ ಕಳುಹಿಸಿಕೊಟ್ಟ ಅಮಾನವೀಯ ಘಟನೆ ನಡೆದಿತ್ತು. ಇದೀಗ ಘಟನೆ ನಡೆದು ವಾರದ ಬಳಿಕ ಉಗ್ರರ ವಶದಲ್ಲಿದ್ದ ಉಳಿದಿಬ್ಬರನ್ನು ರಕ್ಷಿಸಿರುವುದಾಗಿ ಮಿಲಿಟರಿ ವಕ್ತಾರರು ವಿವರಿಸಿದ್ದಾರೆ.

ಖೈಬರ್ ಮತ್ತು ಅವ್‌ರಾಕಜೈ ಗಡಿ ಭಾಗದಲ್ಲಿ ತೀವ್ರ ಕಾರ್ಯಾಚರಣೆ ನಡೆಸುವ ಮೂಲಕ ಇಬ್ಬರನ್ನು ರಕ್ಷಿಸಲಾಯಿತು ಎಂದು ಗುಪ್ತಚರ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಉಗ್ರರಿಂದ ಅಪಹರಿಸಲ್ಪಟ್ಟ ಸುರ್ಜೀತ್ ಸಿಂಗ್ ಮತ್ತು ಗುರ್ವಿಂದರ್ ಸಿಂಗ್ ಅವರು ಸುರಕ್ಷಿತವಾಗಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ತಾಲಿಬಾನ್ ವಿರುದ್ಧ ನಡೆದ ಈ ಕಾರ್ಯಾಚರಣೆಯಲ್ಲಿ ಹಲವು ಉಗ್ರರು ಹತರಾಗಿರುವುದಾಗಿ ತಿಳಿಸಿದರು. ಕಾರ್ಯಾಚರಣೆ ಮತ್ತು ಇನ್ನಿತರ ವಿವರಗಳನ್ನು ಶೀಘ್ರವೇ ನೀಡುವುದಾಗಿ ಈ ಸಂದರ್ಭದಲ್ಲಿ ಮಿಲಿಟರಿ ವಕ್ತಾರ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ