ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಗಡಿಪಾರು ಒಪ್ಪಂದಕ್ಕೆ ಸೌದಿ ಅರೇಬಿಯಾ - ಭಾರತ ಸಹಿ (India | Saudi Arabia | extradition treaty | fight terror)
Bookmark and Share Feedback Print
 
ಭಯೋತ್ಪಾದನೆ ಮತ್ತು ಕಪ್ಪು ಹಣ ಚಲಾವಣೆಯ ವಿರುದ್ಧ ಜಂಟಿ ಹೋರಾಟ ನಡೆಸುವ ಬಗ್ಗೆ ಭಾರತ ಮತ್ತು ಸೌದಿ ಅರೇಬಿಯಾಗಳು ಪ್ರತಿಜ್ಞೆ ಮಾಡಿದ್ದು, ಭದ್ರತೆ, ಆರ್ಥಿಕತೆ, ಇಂಧನ ಮತ್ತು ರಕ್ಷಣಾ ಕ್ಷೇತ್ರಗಳು ಸೇರಿದಂತೆ ಹಲವು ವಿಚಾರಗಳಲ್ಲಿನ ಸಹಭಾಗಿತ್ವವನ್ನು ವೃದ್ಧಿಸುವ ನಿಟ್ಟಿನಲ್ಲಿ ಎರಡೂ ದೇಶಗಳು ಗಡಿಪಾರು ಒಪ್ಪಂದ ಸೇರಿದಂತೆ ಹಲವು ಒಪ್ಪಂದಗಳಿಗೆ ಸಹಿ ಹಾಕಿವೆ.

ಈ ಸಂಬಂಧ ವಿಸ್ತೃತ ಚರ್ಚೆ ನಡೆಸಿದ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಮತ್ತು ಸೌದಿ ರಾಜ ಅಬ್ದುಲ್ಲಾ ಅವರು ಎರಡು ದೇಶಗಳ ನಡುವಿನ ಕೌಶಲ್ಯಯುತ ಭಾಗೀದಾರಿಕೆ ಸಂಬಂಧ ರಿಯಾದ್ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಹೊಸ ಅಧ್ಯಾಯವನ್ನೇ ತೆರೆದಿದ್ದಾರೆ.

ಶುಕ್ರವಾರ ಸೌದಿ ಅರೇಬಿಯಾಕ್ಕೆ ತೆರಳಿದ್ದ ಸಿಂಗ್ ಅವರಿಗೆ ಸೌದಿ ಸಂಪುಟವು ವಿಮಾನ ನಿಲ್ದಾಣದಿಂದಲೇ ಅಭೂತಪೂರ್ವ ಸ್ವಾಗತ ಕೋರಿತ್ತು. ಬಳಿಕ ಅವರಿಗೆ ಅಲ್ ರವಾದಾಹ್ ಪ್ಯಾಲೇಸ್‌ನಲ್ಲಿ ಔತಣಕೂಟ ಏರ್ಪಡಿಸಲಾಗಿತ್ತು.

ಕಿಂಗ್ ಅಬ್ದುಲ್ಲಾ ಅವರು ಪ್ರಧಾನ ಮಂತ್ರಿಯವರನ್ನು ಸ್ವಾಗತಿಸಿದ ಬಳಿಕ ಸ್ವಾಗತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅತಿಥಿ ಸತ್ಕಾರ ನಡೆಸಿದರು.

ಮಾತುಕತೆಯಲ್ಲಿ ಭಾರತಕ್ಕೆ ಅಗತ್ಯವಿರುವ ಕಚ್ಚಾ ತೈಲದ ಪ್ರಮಾಣವನ್ನು ಹೆಚ್ಚಿಸುವುದು ಹಾಗೂ ನೂತನ ಮತ್ತು ಪುನರ್ನವೀಕರಣಗೊಳಿಸಬಹುದಾದ ಇಂಧನಗಳ ಕ್ಷೇತ್ರಗಳನ್ನು ಗುರುತಿಸುವುದು ಸೇರಿದಂತೆ 2006ರ ದೆಹಲಿ ಒಪ್ಪಂದದ ಪ್ರಕಾರ ಎರಡೂ ದೇಶಗಳ ನಡುವಿನ ಇಂಧನ ಪಾಲುದಾರಿಕೆಯನ್ನು ಬಲಗೊಳಿಸುವ ಅಗತ್ಯತೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ದೇಶದಲ್ಲಿ ಕಚ್ಚಾ ತೈಲಗಳ ಶೇಖರಣೆ ವ್ಯವಸ್ಥೆಯಲ್ಲಿ ಪಾಲ್ಗೊಳ್ಳುವಂತೆ ಈ ಸಂದರ್ಭದಲ್ಲಿ ಸೌದಿ ಅರೇಬಿಯಾಕ್ಕೆ ಭಾರತ ಆಹ್ವಾನವನ್ನೂ ನೀಡಿದೆ.

ಎರಡೂ ದೇಶಗಳ ನಾಯಕರು ಭಯೋತ್ಪಾದನೆ, ಪ್ರತ್ಯೇಕತಾವಾದ ಮತ್ತು ಹಿಂಚಾಚಾರಗಳನ್ನು ತೀವ್ರವಾಗಿ ಖಂಡಿಸಿದ್ದು, ಇದು ಜಾಗತಿಕ ಬೆದರಿಕೆಯಾಗಿದೆ ಎಂದು ಒಪ್ಪಿಕೊಂಡಿದ್ದಾರೆ. ಅಲ್ಲದೆ ಇದನ್ನು ಯಾವುದೇ ಸಮಾಜಕ್ಕೆ ಅಥವಾ ಜನಾಂಗಕ್ಕೆ, ಬಣ್ಣಕ್ಕೆ ಅಥವಾ ನಂಬಿಕೆಗೆ ಸಂಬಂಧ ಕಲ್ಪಿಸಬಾರದು ಎಂದು ಅವರು ಹೇಳಿದ್ದಾರೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಗುಲಾಂ ನಬೀ ಆಜಾದ್ ಮತ್ತು ರಾಜಕುಮಾರ, ಉಪ ಪ್ರಧಾನ ಮಂತ್ರಿ, ಆಂತರಿಕ ಸಚಿವ ನಯೀಫ್ ಬಿಬ್ ಅಬ್ದುಲಾಜೀಜ್ ಅವರು ಎರಡು ದೇಶಗಳ ನಡುವಿನ ಗಡಿಪಾರು ಒಪ್ಪಂದಕ್ಕೆ ಸಹಿ ಹಾಕಲಾಯಿತು.
ಸಂಬಂಧಿತ ಮಾಹಿತಿ ಹುಡುಕಿ