ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ದಾಳಿ: ನೇರ ಸುದ್ದಿ ಪ್ರಸಾರಕ್ಕೆ ಅಫ್ಘಾನಿಸ್ತಾನ್ ನಿಷೇಧ ಹೇರಿಕೆ (Afghan journalists | Taliban attacks | attack coverage | Kabul)
Bookmark and Share Feedback Print
 
ದೇಶದಲ್ಲಿನ ತಾಲಿಬಾನ್ ವಿರುದ್ಧ ನಡೆಸುತ್ತಿರುವ ದಾಳಿಯ ಸುದ್ದಿ ಕುರಿತ ನೇರ ಪ್ರಸಾರಕ್ಕೆ ನಿಷೇಧ ಹೇರಲಾಗಿರುವುದಾಗಿ ಅಫ್ಘಾನಿಸ್ತಾನ ಸೋಮವಾರ ಘೋಷಿಸಿದ್ದು, ಇದರಿಂದಾಗಿ ಮುಸ್ಲಿಂ ಉಗ್ರರನ್ನು ಹುರಿದುಂಬಿಸಿದಂತಾಗುತ್ತದೆ ಎಂದು ತಿಳಿಸಿದೆ.

ಅಫ್ಘಾನ್-ಪಾಕ್ ಗಡಿಭಾಗದಲ್ಲಿ ತಾಲಿಬಾನ್ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವ ನ್ಯಾಟೋ ನೇತೃತ್ವದ ಅಂತಾರಾಷ್ಟ್ರೀಯ ರಕ್ಷಣಾ ಪಡೆ ದಾಳಿ ನಡೆಸಿದ ನಂತರ ಸುದ್ದಿಗಾಗಿ ಚಿತ್ರೀಕರಣ ಮಾಡಲು ಪತ್ರಕರ್ತರಿಗೆ ಅವಕಾಶ ನೀಡಲಾಗುವುದು. ಅದಕ್ಕಾಗಿ ಗುಪ್ತಚರ ಸಂಸ್ಥೆಯ ನ್ಯಾಷನಲ್ ಡೈರೆಕ್ಟರೇಟ್ ಆಫ್ ಸೆಕ್ಯುರಿಟಿಯ(ಎನ್‌ಡಿಎಸ್) ಅನುಮತಿಯ ನಂತರ ಚಿತ್ರೀಕರಣಕ್ಕೆ ಅನುಮತಿ ನೀಡಲಾಗುವುದು ಎಂದು ತಿಳಿಸಿದೆ.

ಕಾರ್ಯಾಚರಣೆಯ ನೇರ ಪ್ರಸಾರ ಸರ್ಕಾರಕ್ಕೆ ಯಾವುದೇ ರೀತಿಯಿಂದಲೂ ಪ್ರಯೋಜನವಿಲ್ಲ, ಆದರೆ ಇದರಿಂದ ಅಫ್ಘಾನಿಸ್ತಾನದ ವಿರುದ್ಧ ಹೋರಾಡುತ್ತಿರುವ ಉಗ್ರರಿಗೆ ಅನುಕೂಲವಾಗುತ್ತದೆ ಎಂದು ಎನ್‌ಡಿಎಸ್ ವಕ್ತಾರ ಸಯೀದ್ ಅನ್ಸಾರಿ ವಿವರಿಸಿದ್ದಾರೆ. ನೇರ ಪ್ರಸಾರದ ಸುದ್ದಿಗೆ ನಿಷೇಧ ಹೇರಿರುವ ಕುರಿತು ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.

ಆದರೆ ಅಫ್ಘಾನ್ ಸರ್ಕಾರದ ಈ ನಿರ್ಧಾರದ ಬಗ್ಗೆ ಅಫ್ಘಾನ್ ಜರ್ನಲಿಸಂ ಮತ್ತು ರೈಟ್ಸ್ ಗ್ರೂಪ್ಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಸಾರ್ವಜನಿಕರಿಗೆ ನೀಡುವ ಮಾಹಿತಿಯನ್ನೇ ಸರ್ಕಾರ ರಕ್ಷಣೆಯ ಹೆಸರಲ್ಲಿ ಹತ್ತಿಕ್ಕುತ್ತಿದೆ ಎಂದು ಆರೋಪಿಸಿದೆ. ಆದರೆ ಇಂತಹ ನಿರ್ಧಾರದ ಮೂಲಕ ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಹೇಳಿದೆ.
ಸಂಬಂಧಿತ ಮಾಹಿತಿ ಹುಡುಕಿ