ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ದಲೈಲಾಮಾಗೆ ಪ್ರತಿಸ್ಪರ್ಧಿಯಾಗಿ ಪಂಚೆನ್‌ ಲಾಮಾ: ಚೀನಾ ತಂತ್ರ (Panchen Lama | Dalai Lama | Chinese | Tibetan)
Bookmark and Share Feedback Print
 
ಚೀನಾದ ಶಾಸನ ಸಭೆಯ ಸಲಹಾ (ಚೀನಾದ ಪೀಪಲ್ಸ್ ಪೊಲಿಟಿಕಲ್ ಕನ್ಸಲ್ಟೇಟಿವ್ ಕಾನ್ಫರೆನ್ಸ್ ರಾಷ್ಟ್ರೀಯ ಸಮಿತಿ) ಸಮಿತಿಗೆ ಬೌದ್ಧ ಗುರು 23ರ ಹರೆಯದ ಪಂಚೆನ್ ಲಾಮಾ ಅವರನ್ನು ನೇಮಕ ಮಾಡುವ ಮೂಲಕ ಟಿಬೆಟ್ ಧಾರ್ಮಿಕ ಗುರು ದಲೈಲಾಮಾ ಅವರಿಗೆ ಪ್ರತಿಸ್ಪರ್ಧಿಯನ್ನಾಗಿ ಮಾಡಲು ಹೊರಟಿದೆ.

ದಲೈಲಾಮಾ ಅವರನ್ನು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಭೇಟಿಯಾಗಿ ಮಾತುಕತೆ ನಡೆಸಬಾರದು ಎಂಬ ಚೀನಾದ ಎಚ್ಚರಿಕೆಯ ನಡುವೆಯೇ ಒಬಾಮ ಮಾತುಕತೆ ನಡೆಸಿದ ಬೆನ್ನಲ್ಲೇ ಚೀನಾ ಇಂತಹ ತಂತ್ರಗಾರಿಕೆ ಹೆಣೆದಿದೆ. ಆ ನಿಟ್ಟಿನಲ್ಲಿ ದಲೈಲಾಮಾ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಭಾವಶಾಲಿಯಾಗಿದ್ದು, ಅವರಿಗೆ ಪ್ರತಿಸ್ಪರ್ಧಿಯಾಗಿಸಲು ಪಂಚೆನ್ ಲಾಮಾರನ್ನು ಚೀನಾ ಆಯ್ಕೆ ಮಾಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ದಲೈಲಾಮಾ ಅವರು ತಾನು ಹುಟ್ಟಿದ್ದು ಟಿಬೆಟ್‌ನಲ್ಲಾದರೂ ಕೂಡ ತಾನು ಧಾರ್ಮಿಕವಾಗಿ ಭಾರತೀಯ ಎಂದು ಹೇಳಿದ್ದರು. ಹಾಗಾಗಿ ಟಿಬೆಟ್ ವಿವಾದದ ಕುರಿತು ಮಾತನಾಡುವ ನೈತಿಕ ಹಕ್ಕು ದಲೈಲಾಮಾ ಅವರಿಗಿಲ್ಲ ಎಂಬುದು ಚೀನಾದ ವಾದ.
ಸಂಬಂಧಿತ ಮಾಹಿತಿ ಹುಡುಕಿ