ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಆಸ್ಟ್ರೇಲಿಯಾ: ಲಂಕಾ ಪ್ರಜೆ, ಭಾರತೀಯ ಪತ್ನಿ ಮೇಲೆ ದಾಳಿ (attack on Indian | Sri Lankan | Australia | drunken men)
Bookmark and Share Feedback Print
 
ಆಸ್ಟ್ರೇಲಿಯಾದಲ್ಲಿ ಏಷಿಯನ್ನರ ಮೇಲಿನ ದಾಳಿ ಮುಂದುವರಿದಿದ್ದು, ಇತ್ತೀಚಿನ ಘಟನೆಯೊಂದರಲ್ಲಿ ಶ್ರೀಲಂಕಾ ವ್ಯಕ್ತಿ ಹಾಗೂ ಅವರ ಭಾರತೀಯ ಪತ್ನಿಯ ಮನೆಗೆ ನುಗ್ಗಿದ ಪಾನಮತ್ತರ ಗುಂಪೊಂದು ಹಲ್ಲೆ ನಡೆಸಿದ್ದು, ಜನಾಂಗೀಯ ನಿಂದನೆಗೈದಿದೆ ಎಂದು ಆರೋಪಿಸಲಾಗಿದೆ.

ಕಾರಾಮ್ಸ್ ಡೌನ್ ಉಪನಗರದಲ್ಲಿ ಭಾನುವಾರ ಮುಂಜಾನೆ ಭಾರತ ಮೂಲದ ಅಗಲ್ಯಾ ಸಹಸ್ರಾರಾಮನ್ ಅವರ ಗಂಡ 60ರ ಹರೆಯದ ರಂಜಿತ್ ಸಹಸ್ರಾನಮನ್ ಎಂಬವರ ಮೇಲೆ ಅವರ ಮನೆಯ ಹೊರಗಡೆ ಸುಮಾರು 25 ಮಂದಿಯ ದುಷ್ಕರ್ಮಿಗಳ ಪಾನಮತ್ತರ ತಂಡ ಕ್ರೂರವಾಗಿ ಹಲ್ಲೆ ನಡೆಸಿದೆ.

ಶ್ರೀಲಂಕಾ ಪ್ರಜೆ ಸಹಸ್ರಾನಮನ್ ಅವರು ಪೊಲೀಸರು ಬಂದು ಅವರನ್ನು ರಕ್ಷಿಸುವವರೆಗೆ ದುಷ್ಕರ್ಮಿಗಳೊಂದಿಗೆ ಸುಮಾರು ಎರಡೂವರೆ ಗಂಟೆಗಳ ಕಾಲ ಹೇಗೆ ಹೋರಾಟ ನಡೆಸಿದರು ಎಂಬುದನ್ನು 'ಹೆರಾಲ್ಡ್ ಸನ್' ಪತ್ರಿಕೆಗೆ ಮಂಗಳವಾರ ವಿವರಣೆ ನೀಡಿದ್ದಾರೆ.

ಬಿಳಿಯರೇ ಹೆಚ್ಚಾಗಿದ್ದ ಈ ದುಷ್ಕರ್ಮಿಗಳ ತಂಡವು ತನ್ನ ಮೇಲೆ ಹಲ್ಲೆ ನಡೆಸಿದ್ದಲ್ಲದೆ, ಜನಾಂಗೀಯ ನಿಂದನೆಗೈಯುತ್ತಾ ಮನೆಯ ಹಿಂದುಗಡೆಯ ಬೇಲಿಯನ್ನು ಮುರಿದು ಹಿಂದಿನಿಂದ ಪ್ರವೇಶ ಮಾಡಿತು ಎಂದು ಕಳೆದ 19 ವರ್ಷಗಳಿಂದ ಇಬ್ಬರು ಮಕ್ಕಳೊಂದಿಗೆ ಆಸ್ಟ್ರೇಲಿಯಾದಲ್ಲಿ ವಾಸಿಸುತ್ತಿರುವ ಸಹಸ್ರಾನಮನ್ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಹಿಂಬಾಗಿಲಿನ ಮೂಲಕ ಆಕ್ರಮಣಕಾರರು ಪ್ರವೇಶಿಸಲು ಯತ್ನಿಸಿದ ಸಂದರ್ಭದಲ್ಲಿ ತಾನು ಕೋಲೊಂದರಿಂದ ತಿರುಗಿ ಹೋರಾಟ ಮಾಡುವ ಅನಿವಾರ್ಯತೆಗೆ ಬಿದ್ದೆ ಎನ್ನುವ ಸಹಸ್ರಾನಮನ್, ತನ್ನಿಂದ ಹಲ್ಲೆಗೊಳಗಾಗಿ ಗಾಯಗೊಂಡ ಆರೋಪಿಯೊಬ್ಬನನ್ನು ಪೊಲೀಸು ಸ್ಥಳದಲ್ಲೇ ಬಿಟ್ಟು ಹೋದರು ಎಂದು ಬಹಿರಂಗಪಡಿಸಿದ್ದಾರೆ.

ಆಕ್ರಮಣಕಾರರು ನನಗೆ ಹೊಡೆಯುತ್ತಿದ್ದರು. ಅವರು ಹೆಸರು ಹಿಡಿದು ಕೂಗುತ್ತಾ, ಈ ದೇಶದಿಂದ ತೊಲಗಿ ಎಂದು ನನ್ನಲ್ಲಿ ಹೇಳುತ್ತಿದ್ದರು ಎಂದು ಸಹಸ್ರಾನಮನ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ