ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಚೀನಾ ಉಗ್ರನನ್ನು ಡ್ರೋನ್ ದಾಳಿ ಮೂಲಕ ಕೊಂದ ಅಮೆರಿಕಾ (US drone attack | al-Qaida | Chinese militant | Abdul Haq al-Turkistani)
Bookmark and Share Feedback Print
 
ಪಾಕಿಸ್ತಾನದ ಅಶಾಂತಿಯುತ ಬುಡಕಟ್ಟು ಪ್ರಾಂತ್ಯದ ಮೇಲೆ ಅಮೆರಿಕಾ ನಡೆಸಿದ ಡ್ರೋನ್ ದಾಳಿಯಲ್ಲಿ ಅಲ್‌ಖೈದಾ ಜತೆ ಸಂಬಂಧ ಹೊಂದಿದ್ದ ಚೀನಾದ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಸಾವನ್ನಪ್ಪಿದ್ದಾನೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ಫೆಬ್ರವರಿ 15ರಂದು ಉತ್ತರ ವಜಿರಿಸ್ತಾನ ಜಿಲ್ಲೆಯಲ್ಲಿ ಸಿಐಎ ನೇತೃತ್ವದಲ್ಲಿ ನಡೆದ ಮಾನವರಹಿತ ವೈಮಾನಿಕ ಕ್ಷಿಪಣಿ ದಾಳಿಯಲ್ಲಿ 'ಈಸ್ಟರ್ನ್ ತುರ್ಕಿಸ್ತಾನ ಇಸ್ಲಾಮಿಕ್ ಪಾರ್ಟಿ' ಎಂಬ ಚೀನಾದ ಭಯೋತ್ಪಾದಕ ಸಂಘಟನೆಯ ನಾಯಕ ಅಬ್ದುಲ್ ಹಕ್ ಅಲ್ ತುರ್ಕಿಸ್ತಾನಿ ಮತ್ತು ಇಬ್ಬರು ಇತರ ಭಯೋತ್ಪಾದಕರು ಹತರಾಗಿದ್ದಾರೆ ಎಂದು ಅಧಿಕಾರಿಗಳು ವಿವರಣೆ ನೀಡಿದ್ದಾರೆ.

ಅಬ್ದುಲ್ ಹಕ್ ಅಲ್ ತುರ್ಕಿಸ್ತಾನಿ ಕೊಲ್ಲಲ್ಪಟ್ಟಿದ್ದಾನೆ ಎಂದು ಈಗಷ್ಟೇ ಖಚಿತವಾಗಿದೆ. ನಮ್ಮ ಸ್ಥಳೀಯ ಮೂಲಗಳು ಇದನ್ನು ಖಚಿತಪಡಿಸಿವೆ ಎಂದು ಹೆಸರು ಹೇಳಲಿಚ್ಛಿಸದ ಬೇಹುಗಾರಿಕಾ ದಳದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಚೀನಾದ ಪೂರ್ವ ಪ್ರಾಂತ್ಯ ಕ್ಸಿಯಾಂಜಿಂಗ್ ಪ್ರಾಂತ್ಯದ ಉಯಿಗರ್ ಎಂಬಲ್ಲಿನ ನಿವಾಸಿಯಾಗಿದ್ದ ತುರ್ಕಿಸ್ತಾನಿ ಸಾವನ್ನಪ್ಪಿರುವುದು ಇದರಿಂದ ಖಚಿತವಾಗಿದೆ.

ಅಲ್‌ಖೈದಾ ಅಡಿಯಲ್ಲಿ ಈಸ್ಟರ್ನ್ ತುರ್ಕಿಸ್ತಾನ್ ಇಸ್ಲಾಮಿಕ್ ಪಾರ್ಟಿಯ ಮಾಜಿ ನಾಯಕ ಹಸನ್ ಮಹ್ಸೂಮ್‌ನನ್ನು ದಕ್ಷಿಣ ವಜಿರಿಸ್ತಾನದಲ್ಲಿ ಪಾಕಿಸ್ತಾನಿ ಸೇನೆ ಹತ್ಯೆಗೈದ ನಂತರ 2003ರ ಅಕ್ಟೋಬರ್ ತಿಂಗಳಲ್ಲಿ ಸಂಘಟನೆಯ ಮುಖ್ಯಸ್ಥನಾಗಿ ತುರ್ಕಿಸ್ತಾನ್ ನೇಮಕಗೊಂಡಿದ್ದ.

ಈ ಸಂಘಟನೆಯು ಭಯೋತ್ಪಾದಕ ಸಂಘಟನೆ ಮತ್ತು ತುರ್ಕಿಸ್ತಾನಿಯು ಜಾಗತಿಕ ಉಗ್ರ ಎಂದು 2009ರ ಏಪ್ರಿಲ್‌ನಲ್ಲಿ ಅಮೆರಿಕಾ ಘೋಷಿಸಿತ್ತು. ಹಲವು ಭಯೋತ್ಪಾದನಾ ದಾಳಿಗಳಿಗೆ ಯೋಜನೆ ರೂಪಿಸಿರುವುದು, ಕೃತ್ಯಗಳನ್ನು ನಡೆಸಿರುವುದು, ಭಯೋತ್ಪಾದಕರನ್ನು ನೇಮಿಸಿರುವುದು ಮುಂತಾದ ಕಾರಣಗಳನ್ನು ಅಮೆರಿಕಾ ತುರ್ಕಿಸ್ತಾನಿ ಮೇಲೆ ಆರೋಪಿಸಿತ್ತು.

2009ರ ಆಗಸ್ಟ್ ತಿಂಗಳಲ್ಲಿ ಈತ ಇಸ್ಲಾಮಿಕ್ ವೆಬ್‌ಸೈಟ್ ಒಂದರಲ್ಲಿ ತನ್ನ ವೀಡಿಯೋವನ್ನು ಪ್ರಕಟಿಸಿದ್ದ. ಚೀನಾದ ಉಯಿಗರ್‌ನಲ್ಲಿ ನಡೆದ ಮುಸ್ಲಿಮ್ ಮತ್ತು ಇತರ ಧರ್ಮೀಯರ ನಡುವಿನ ಗಲಭೆಗೆ ಪ್ರತೀಕಾರವಾಗಿ ಚೀನಾ ಹಿತಾಸಕ್ತಿ ಹೊಂದಿರುವ ವಿಶ್ವದ ಇತರೆಡೆಗಳಲ್ಲಿ ಸೇಡಿನ ದಾಳಿ ನಡೆಸುವುದಾಗಿ ಆತ ಇದರಲ್ಲಿ ಬೆದರಿಕೆ ಹಾಕಿದ್ದ.
ಸಂಬಂಧಿತ ಮಾಹಿತಿ ಹುಡುಕಿ