ಒಂದು ಕಾಲದಲ್ಲಿ ಗೆರಿಲ್ಲಾ ಪಡೆಯ ಹೋರಾಟಗಾರರಾಗಿದ್ದ ಜೋಸೆ ಮುಜಿಕಾ ಈಗ ಉರುಗ್ವೆಯ ನೂತನ ಅಧ್ಯಕ್ಷರಾಗಿ ಮಂಗಳವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ.
ದೇಶದ ಆಡಳಿತ ಚುಕ್ಕಾಣಿಯನ್ನು ಸುಸೂತ್ರವಾಗಿ ನಡೆಸಲು ವಿರೋಧ ಪಕ್ಷ, ಉದ್ಯಮಿಗಳು, ಯೂನಿಯನ್ ಹಾಗೂ ಸಾಮಾಜಿಕ ಸಂಘಟನೆಗಳ ಒಮ್ಮತದ ಸಹಾಯ ಪಡೆಯುವ ಗುರಿ ಹೊಂದಿರುವುದಾಗಿ ಅಧಿಕಾರ ಸ್ವೀಕಾರ ಸಂದರ್ಭದಲ್ಲಿ ಮುಜಿಕಾ ತಿಳಿಸಿದ್ದಾರೆ.
ಸುಮಾರು ಒಂದು ಗಂಟೆ ಕಾಲ ಸುದೀರ್ಘವಾಗಿ ಮಾತನಾಡಿದ ಅವರು, ನನ್ನ ದೇಶ ಎಲ್ಲರಿಗೂ ಸೇರಿದ್ದು, ಆ ನಿಟ್ಟಿನಲ್ಲಿ ತಮ್ಮ ಸರ್ಕಾರ ಉತ್ತಮ ಆಡಳಿತವನ್ನು ನೀಡುವುದಾಗಿ ಈ ಸಂದರ್ಭದಲ್ಲಿ ಹೇಳಿದರು.
ದೇಶದ ಮೂಲಭೂತ ಸೌಕರ್ಯ, ಸಂಸ್ಕೃತಿ, ಇಂಧನ ಹಾಗೂ ಸಾರ್ವಜನಿಕರ ರಕ್ಷಣೆಯೇ ಪ್ರಮುಖ ಉದ್ದೇಶವಾಗಿದೆ ಎಂದು ಭಾಷಣದ ಅಂತ್ಯದಲ್ಲಿ ಹೇಳಿದರು.
1973ರ ಸಂದರ್ಭದಲ್ಲಿ ಉರುಗ್ವೆ ಮಿಲಿಟರಿ ಸರ್ವಾಧಿಕಾರತ್ವದ ವಿರುದ್ಧ ಗೆರಿಲ್ಲಾ ಪಡೆಯೊಂದಿಗೆ ಹೋರಾಟ ನಡೆಸಿದ್ದವರು ಮೊಜಿಕಾ. ಆ ಕಾರಣಕ್ಕಾಗಿಯೇ ಅವರು ಸುಮಾರು 13ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ಅನುಭವಿಸಿದ್ದರು. ತನನಂತರ ಉರುಗ್ವೆ ಪ್ರಜಾಪ್ರಭುತ್ವ ಪಡೆದ ಬಳಿಕ. ಮೊಜಿಕಾ ದೇಶದ ಪ್ರಜಾಸತ್ತೆಯೊಂದಿಗೆ ಕೈಜೋಡಿಸಿದ್ದರು.