ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ತಾಲಿಬಾನ್‌ ಉಗ್ರರಿಗೆ ಭಾರತ-ಇಸ್ರೇಲ್‌ನ ಕೃಪಾಕಟಾಕ್ಷ! (Pakistan | pamphlet | India | Israel | Al Qaida | Taliban)
Bookmark and Share Feedback Print
 
ಅಫ್ಘಾನಿಸ್ತಾನದ ಗಡಿಭಾಗದ ಬುಡಕಟ್ಟು ಪ್ರದೇಶದಲ್ಲಿ ಭಯೋತ್ಪಾದನೆ ಚಟುವಟಿಕೆ ನಡೆಸುತ್ತಿರುವ ತಾಲಿಬಾನ್ ಉಗ್ರರಿಗೆ ಭಾರತ, ಇಸ್ರೇಲ್ ಹಾಗೂ ಅಲ್ ಖಾಯಿದಾ ಆರ್ಥಿಕ ನೆರವು ಒದಗಿಸುತ್ತಿರುವುದಾಗಿ ಕಾನೂನು ಹಿಡಿತವಿಲ್ಲದ ಉತ್ತರ ವಜಿರಿಸ್ತಾನದಲ್ಲಿ ಪಾಕಿಸ್ತಾನಿ ವಿಮಾನವೊಂದರಿಂದ ಕೆಳಹಾಕಿರುವ ಕರಪತ್ರದಲ್ಲಿ ಗಂಭೀರವಾಗಿ ಆರೋಪಿಸಿದೆ.

ಸುಮಾರು ಎರಡು ಪುಟಗಳಷ್ಟಿರುವ ಕರಪತ್ರದಲ್ಲಿ ಉರ್ದು ಭಾಷೆಯನ್ನ ಬಳಿಸಿ ಬರೆಯಲಾಗಿದೆ. ತಾಲಿಬಾನ್ ಉಗ್ರರಿಗೆ ಭಾರತ, ಇಸ್ರೇಲ್ ಮತ್ತು ಅಲ್ ಖಾಯಿದಾ ದೊಡ್ಡ ಪ್ರಮಾಣದಲ್ಲಿ ಆರ್ಥಿಕ ನೆರವು ನೀಡುತ್ತಿರುವುದಾಗಿ ಕರಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಅಲ್ಲದೇ, ಅಫ್ಘಾನಿಸ್ತಾನದಲ್ಲಿರುವ ಭಾರತೀಯ ರಾಯಭಾರ ಕಚೇರಿ ಕೂಡ ತಾಲಿಬಾನ್‌ಗೆ ಕುಮ್ಮಕ್ಕು ನೀಡುತ್ತಿರುವುದಾಗಿ ಕರಪತ್ರದಲ್ಲಿ ದೂರಲಾಗಿದೆ.

ಈ ಹಣದಿಂದ ಉಗ್ರಗಾಮಿ ಸಂಘಟನೆ ಶಸ್ತ್ರಾಸ್ತ್ರ ಹಾಗೂ ಸ್ಫೋಟಕಗಳ ಖರೀದಿಗೆ ಉಪಯೋಗಿಸುತ್ತಿರುವುದಾಗಿಯೂ ಕರಪತ್ರದಲ್ಲಿ ಆರೋಪಿಸಲಾಗಿದೆ. ಅದೇ ರೀತಿ ಅಲ್ ಖಾಯಿದಾ, ರಾ ಮತ್ತು ಮೊಸ್ಸಾದ್ ಗುಪ್ತಚರ ಸಂಸ್ಥೆಗಳು ಕೂಡ ತಾಲಿಬಾನ್‌ಗೆ ಕೃಪಾಕಟಾಕ್ಷ ಇರುವುದಾಗಿ ದೂರಿದೆ.
ಸಂಬಂಧಿತ ಮಾಹಿತಿ ಹುಡುಕಿ