ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಆಸ್ಟ್ರೇಲಿಯಾ ಯುವಕನಿಗೆ ಹಲ್ಲೆ, ಬಲವಂತವಾಗಿ ಹಚ್ಚೆ (Australia | tattoo | Police | Australian police)
Bookmark and Share Feedback Print
 
ಯುವಕನೊಬ್ಬನಿಗೆ ಬೇಸ್‌ಬಾಲ್ ಬ್ಯಾಟಿನಿಂದ ಹಲ್ಲೆ ನಡೆಸಿದ್ದಲ್ಲದೆ, ಬಲವಂತವಾಗಿ ಹಣೆಯ ಮೇಲೆ ಟ್ಯಾಟೂ ಹಾಕಿರುವ ಪ್ರಕರಣವೊಂದು ನಡೆದಿದೆ ಎಂದು ಆಸ್ಟ್ರೇಲಿಯಾ ಪೊಲೀಸರು ಬುಧವಾರ ತಿಳಿಸಿದ್ದಾರೆ.

ದಕ್ಷಿಣ ಸಿಡ್ನಿಯ ಅಲ್ಬಿಯನ್ ಪಾರ್ಕ್ ರೈಲ್‌ನಲ್ಲಿ 18ರ ಹರೆಯದ ಯುವಕನ ಮೇಲೆ ಕಳೆದ ತಿಂಗಳು ಈ ದಾಳಿ ನಡೆದಿದೆ.

ಈ ಸಂದರ್ಭದಲ್ಲಿ ಓರ್ವ ವ್ಯಕ್ತಿ ತನ್ನಲ್ಲಿದ್ದ ಹಚ್ಚೆ ಹಾಕುವ ಯಂತ್ರದಿಂದ ಯುವಕನಿಗೆ ಥಳಿಸಿದ. ಬಳಿಕ ಯುವಕನ ಹಣೆಯ ಮೇಲೆ ಒತ್ತಾಯಪೂರ್ವಕವಾಗಿ ಶಬ್ದವೊಂದನ್ನು ಹಚ್ಚೆ ಹಾಕಲಾಯಿತು ಎಂದು ನ್ಯೂ ಸೌತ್ ವೇಲ್ಸ್ ಪೊಲೀಸರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಆದರೆ ಈ ಟ್ಯಾಟೂವಿನಲ್ಲಿ ಏನು ಬರೆಯಲಾಗಿದೆ ಎಂಬುದನ್ನು ಬಹಿರಂಗಪಡಿಸಲು ಪೊಲೀಸರು ನಿರಾಕರಿಸಿದ್ದಾರೆ.

ಫೆಬ್ರವರಿ 23ರಂದು ನಡೆದಿರುವ ಈ ಘಟನೆಗೆ ಸಂಬಂಧಿಸಿದಂತೆ 34ರ ಹರೆಯದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಆತನ ಮೇಲೆ ಹಲ್ಲೆ ಮಾಡಿ ಗಾಯಗೊಳಿಸಿದ ಮತ್ತು ಮಾದಕ ದ್ರವ್ಯ ಸೇವಿಸಿದ ಆಪಾದನೆಗಳನ್ನು ಹೊರಿಸಲಾಗಿದೆ.

ಈ ಕೃತ್ಯದಲ್ಲಿ ಪಾಲ್ಗೊಂಡ ಇತರ ನಾಲ್ವರ ಮೇಲೂ ಪ್ರಕರಣಗಳನ್ನು ದಾಖಲಿಸಲಾಗಿದ್ದು, ಬಲಿಪಶುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಹಲ್ಲೆಗೊಳಗಾದ ವ್ಯಕ್ತಿ ಅಥವಾ ಹಲ್ಲೆ ಮಾಡಿದವರ ವಿವರಗಳನ್ನು ಪೊಲೀಸರು ನೀಡಿಲ್ಲ.
ಸಂಬಂಧಿತ ಮಾಹಿತಿ ಹುಡುಕಿ