ಶಾಲೆಗಳಲ್ಲಿ ಲೈಂಗಿಕ ಶಿಕ್ಷಣದ ಪಾಠ ಹೇಳಲು ದೇಶದ ಶಿಕ್ಷಕರು ತಯಾರಿಲ್ಲ ಎಂದು ಮಲೇಷ್ಯಾದ ಟೀಚರ್ಸ್ ಯೂನಿಯನ್ ತಿಳಿಸಿದ್ದು, ಲೈಂಗಿಕ ಶಿಕ್ಷಣದ ಬಗ್ಗೆ ಪಾಠ ಹೇಳಲು ಶಿಕ್ಷಕರಿಗೆ ಪ್ರಾಥಮಿಕ ತರಬೇತಿ ಇಲ್ಲದೆ ಅದು ಸಾಧ್ಯವಿಲ್ಲ ಎಂದು ಅಭಿಪ್ರಾಯವ್ಯಕ್ತಪಡಿಸಿದೆ.
ಲೈಂಗಿಕ ಶಿಕ್ಷಣದ ಕುರಿತು ಪಾಠ ಹೇಳಲು ಶಿಕ್ಷರಿಗೆ ಸಮರ್ಪಕವಾದ ತರಬೇತಿ ಇಲ್ಲ ಎಂದು ನ್ಯಾಷನಲ್ ಯೂನಿಯನ್ ಆಫ್ ಟೀಚಿಂಗ್ ಪ್ರೊಫೆಶನ್(ಎನ್‌ಯುಟಿಪಿ)ಪ್ರಧಾನ ಕಾರ್ಯದರ್ಶಿ ಲೋಕ್ ವೈಮ್ ಫೆಂಗ್ ತಿಳಿಸಿದ್ದಾರೆ.
ಶಾಲೆಗಳಲ್ಲಿ ಲೈಂಗಿಕತೆ ಬಗ್ಗೆ ಶಿಕ್ಷಣ ನೀಡುವ ಸರ್ಕಾರದ ನಿಲುವನ್ನು ಯೂನಿಯನ್ ಪೂರ್ಣ ಪ್ರಮಾಣದಲ್ಲಿ ಬೆಂಬಲಿಸುತ್ತದೆ ಎಂದಿರುವ ಅವರು, ಇಂತಹ ಸೂಕ್ಷ್ಮವಾದ ವಿಷಯದ ಬಗ್ಗೆ ಪಾಠ ಮಾಡುವ ವಿಶ್ವಾಸ ನಮಗಿಲ್ಲ ಎಂಬುದು ಅವರ ವಾದ.
ಒಂದು ವೇಳೆ ಏಕಾಏಕಿ ನಿರ್ಧಾರದಿಂದ ಶಾಲೆಗಳಲ್ಲಿ ಲೈಂಗಿಕ ಶಿಕ್ಷಣ ನೀಡಲು ಮುಂದಾದರೆ ಪೋಷಕರೇ ದೂರು ದಾಖಲಿಸುವ ಭಯ ಕೂಡ ಶಿಕ್ಷಕರನ್ನು ಕಾಡುತ್ತಿದೆ ಎಂದು ಫೆಂಗ್ ಹೇಳಿದ್ದಾರೆ.
ಮಲೇಷ್ಯಾ ಬಹುಮುಖಿ ಸಂಸ್ಕೃತಿಯ ದೇಶವಾಗಿದೆ. ಲೈಂಗಿಕತೆ ಕುರಿತಂತೆ ಪ್ರತಿಯೊಂದು ಧರ್ಮಕ್ಕೂ ಅವರದ್ದೇ ಆದ ಸ್ವಂತ ಕಟ್ಟುಕಟ್ಟಳೆಗಳಿವೆ. ಹಾಗಾಗಿ ಅಂತಹ ವಿಷಯವನ್ನು ಬೋಧಿಸುವುದು ತುಂಬಾ ಕ್ಲಿಷ್ಟಕರವಾದದ್ದು ಎಂದರು.