ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಲಂಡನ್:ಸೂರತ್ ಬಾಂಬ್ ದಾಳಿ ಶಂಕಿತ ಉಗ್ರ ಹನೀಫ್ ಸೆರೆ (Tiger Hanif | Surat bombings | UK | London,)
Bookmark and Share Feedback Print
 
ಕಳೆದ 17ವರ್ಷಗಳಿಂದ ತಲೆಮರೆಸಿಕೊಂಡಿದ್ದ 1993ರ ಸೂರತ್ ಬಾಂಬ್ ಸ್ಫೋಟದ ಪ್ರಮುಖ ಶಂಕಿತ ಆರೋಪಿ ಕೊನೆಗೂ ಉತ್ತರ ಇಂಗ್ಲೆಂಡ್‌ನಲ್ಲಿ ಗ್ರೋಸರಿ ಅಂಗಡಿಯೊಂದರಲ್ಲಿ ಪತ್ತೆ ಹಚ್ಚಿ, ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಇದೀಗ ಸೆರೆ ಸಿಕ್ಕಿರುವ ಶಂಕಿತ ಆರೋಪಿ ಮೊಹಮ್ಮದ್ ಹನೀಫ್ ಭಾರತಕ್ಕೆ ಹಸ್ತಾಂತರಿಸುವ ಬಗ್ಗೆ ಇಲ್ಲಿನ ನಗರ ನ್ಯಾಯಾಲಯ ತೀರ್ಪು ಪ್ರಕಟಿಸಲಿದೆ.

49ರ ಹರೆಯದ ಮೊಹಮ್ಮದ್ ಹನೀಫ್ ಉಮೇರಿಜಿ ಪಾಟೀಲ್ ಅಲಿಯಾಸ್ ಟೈಗರ್ ಹನೀಫ್‌ನನ್ನು ಬೋಲ್ಟನ್‌ನ ಗ್ರೋಸರಿ ಅಂಗಡಿಯೊಂದರಲ್ಲಿ ಸ್ಕಾಟ್‌ಲ್ಯಾಂಡ್ ಪೊಲೀಸರು ಪತ್ತೆ ಹಚ್ಚಿದ್ದರು. ತದನಂತರ ಫೆಬ್ರುವರಿ 16ರಂದು ಹಾಲ್ಲಿವೆಲ್‌ನ ಅಸ್‌ಟ್ಲೆ ಸ್ಟ್ರೀಟ್‌ನಲ್ಲಿರುವ ಮನೆಯಲ್ಲಿ ಹನೀಫ್‌ನನ್ನು ಬಂಧಿಸಲಾಯಿತು ಎಂದು ಮೆಟ್ರೋಪೊಲಿಟನ್ ಪೊಲೀಸ್ ವಕ್ತಾರರು ಬುಧವಾರ ತಿಳಿಸಿದ್ದಾರೆ.

ಇದೀಗ ಪೊಲೀಸ್ ಕಸ್ಟಡಿಯಲ್ಲಿರುವ ಟೈಗರ್ ಹನೀಫ್‌ನನ್ನು ಮಾರ್ಚ್‌ 25ರಂದು ವೆಸ್ಟ್‌ಮಿನಿಸ್ಟರ್‌ ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಹಾಜರುಪಡಿಸಲಿದ್ದು, ಈ ಸಂದರ್ಭದಲ್ಲಿ ಆತನನ್ನು ತಮಗೆ ಹಸ್ತಾಂತರಿಸಬೇಕೆಂಬ ಭಾರತ ಸರ್ಕಾರದ ಬೇಡಿಕೆಯ ವಿಚಾರಣೆ ಕೂಡ ನಡೆಯಲಿದೆ ಎಂದು ಹೇಳಿದ್ದಾರೆ.

ಗುಜರಾತ್‌ನ ಸೂರತ್‌ನಲ್ಲಿ ಬಾಂಬ್ ದಾಳಿ ನಡೆದ ಘಟನೆಯಲ್ಲಿ ಎಂಟರ ಹರೆಯದ ಶಾಲಾ ವಿದ್ಯಾರ್ಥಿಯೊಬ್ಬಳು ಸಾವನ್ನಪ್ಪಿದ್ದು, 12ಮಂದಿ ಗಾಯಗೊಂಡಿದ್ದರು. ಹನೀಫ್ ಈ ಪ್ರಕರಣ ಪ್ರಮುಖ ರೂವಾರಿ ಎನ್ನಲಾಗಿದೆ. ಆತನಿಗೆ ಕಳೆದ 17ವರ್ಷಗಳಿಂದ ದೇಶ-ವಿದೇಶಗಳಲ್ಲಿ ಹುಡುಕಾಟ ನಡೆದಿತ್ತು. ಬಾಂಬ್ ದಾಳಿಯ ನಂತರ ಹನೀಫ್ ವಿರುದ್ಧ ಇಂಟರ್‌ಪೋಲ್ ವತಿಯಿಂದ ಭಾರತ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಿತ್ತು.
ಸಂಬಂಧಿತ ಮಾಹಿತಿ ಹುಡುಕಿ