ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಸ್ತ್ರೀಯರ ಚಡ್ಡಿ ಕದ್ದು, ವಿಕೃತವಾಗಿ ಸುಖಿಸುತ್ತಿದ್ದ ಮೇಯರ್ ಜೈಲಿಗೆ (Mayor | women's underwear | sexual kicks | Ian Stafford)
Bookmark and Share Feedback Print
 
ಹೆಂಗಸರ ಒಳ ಉಡುಪುಗಳನ್ನು ಕದ್ದು ಹಸ್ತಮೈಥುನ ಮಾಡಿಕೊಳ್ಳುತ್ತಾ ವಿಕೃತ ಸುಖ ಅನುಭವಿಸುತ್ತಿದ್ದ ಮೇಯರ್ ಒಬ್ಬ ಸಿಸಿಟಿವಿ ಕ್ಯಾಮರಾದಲ್ಲಿ ರೆಡ್‌ಹ್ಯಾಂಡಾಗಿ ಸಿಕ್ಕಿಬಿದ್ದಿದ್ದು, ಇದೀಗ ಜೈಲು ಸೇರಿದ್ದಾನೆ.

ಇಂಗ್ಲೆಂಡ್ ಲ್ಯಾಂಕ್‌ಶೈರ್ ರಾಜ್ಯದ ಪ್ರೀಸಾಲ್ ಎಂಬಲ್ಲಿನ ಮೇಯರ್ ಆಗಿರುವ ಇಯಾನ್ ಸ್ಟಾಫರ್ಡ್ ಎಂಬ 59ರ ಹರೆಯದ ವ್ಯಕ್ತಿಯೇ ಹೀಗೆ ಸಿಕ್ಕಿಬಿದ್ದು ನಗೆಪಾಟಲಿಗೀಡಾಗಿರುವುದು. ಘಟನೆ ಸಂಬಂಧ ಪೊಲೀಸರು ಬಂಧಿಸುತ್ತಿದ್ದಂತೆ, ಮೇಯರ್ ಹುದ್ದೆಗೆ ಸ್ಟಾಫರ್ಡ್ ರಾಜೀನಾಮೆ ಸಲ್ಲಿಸಿದ್ದಾನೆ.

ಪ್ರೀಸಾಲ್, ಪೌಲ್ಟನ್ ಮತ್ತು ಸ್ಟಾಲ್‌ಮೈನ್‌ಗಳಲ್ಲಿನ ಮನೆಗಳಿಂದ ಮಹಿಳೆಯ ಒಳ ಉಡುಪು ಮತ್ತು ರಾತ್ರಿ ಉಡುಪುಗಳು ಇದ್ದಕ್ಕಿದ್ದಂತೆ ಕಾಣೆಯಾಗುತ್ತಿದ್ದುದರಿಂದ ತಲೆ ಕೆಡಿಸಿಕೊಂಡಿದ್ದ ಇಲ್ಲಿನ ನಿವಾಸಿಗಳು ರಹಸ್ಯ ಕ್ಯಾಮರಾವೊಂದನ್ನು ಅಳವಡಿಸಿ ಸ್ಟಾಫರ್ಡ್‌ನನ್ನು ಬಲೆಗೆ ಕೆಡವಿದ್ದರು. ಇದು ನಡೆದಿರುವುದು 2009ರಲ್ಲಿ.

ಈತನ ಮೇಲೆ ಸಂಶಯಾಸ್ಪದ ದೃಷ್ಟಿ ಹೊಂದಿದ್ದ ದಂಪತಿ ತಮ್ಮ ಮನೆಯ ಬೆಡ್‌ರೂಮಿನಲ್ಲಿ ಸಿಸಿಟಿವಿ ಅಳವಡಿಸಿದ್ದರು. ಈ ವೀಡಿಯೋವನ್ನು ಪರಿಶೀಲನೆ ನಡೆಸಿದಾಗ ಮೇಯರ್ ಮನೆಗೆ ನುಗ್ಗಿ ಮಹಿಳೆಯ ಒಳ ಉಡುಪುಗಳನ್ನು ಬೆತ್ತಲೆಯಾಗಿ ಬಂದು ಕಳ್ಳತನ ಮಾಡಿದ್ದಲ್ಲದೆ, ಅಲ್ಲೇ ಹಸ್ತಮೈಥುನ ನಡೆಸಿದ್ದ.

ಈ ಸಂಬಂಧ ಪ್ರಕರಣ ದಾಖಲಾಗಿತ್ತು. ವಿಕೃತ ಚಟುವಟಿಕೆಯ 14 ನಿಮಿಷಗಳ ವೀಡಿಯೋವನ್ನು ಪರಿಶೀಲನೆ ನಡೆಸಿದ ಇತರ ಸಾಕ್ಷ್ಯಗಳನ್ನು ಪರಿಶೀಲಿಸಿದ ನ್ಯಾಯಾಧೀಶರು ಸ್ಟಾಫರ್ಡ್ ತಪ್ಪಿತಸ್ಥ ಎಂದು ಘೋಷಿಸಿ, ಎರಡು ವರ್ಷ ಜೈಲು ಶಿಕ್ಷೆ ಪ್ರಕಟಿಸಿದ್ದಾರೆ.

ಸಾರ್ವಜನಿಕ ಗ್ಯಾಲರಿಯಲ್ಲಿ ಕುಳಿತಿದ್ದ ಬಲಿಪಶುಗಳನ್ನು ದಾಟಿಕೊಂಡು ವಾಕಿಂಗ್ ಸ್ಟಿಕ್ ಹಿಡಿದು ಕೋರ್ಟಿಗಾಗಮಿಸಿದ ಸ್ಟಾಫರ್ಡ್ ನ್ಯಾಯಾಧೀಶರೆದುರು ಯಾವುದೇ ಉತ್ತರವನ್ನು ನೀಡಲಿಲ್ಲ. ಈ ಸಂದರ್ಭದಲ್ಲಿ ನ್ಯಾಯಾಧೀಶರು, ಮೇಯರ್ ಕೃತ್ಯವನ್ನು ತೀವ್ರವಾಗಿ ಖಂಡಿಸಿದ್ದಲ್ಲದೆ, ನೀವು ವಿಶ್ವಾಸದ್ರೋಹ ಎಸಗಿದ್ದೀರಿ ಎಂದು ವಾಗ್ದಾಳಿ ನಡೆಸಿದರು.

ಮಹಿಳೆಯರ ಒಳ ಉಡುಪುಗಳೊಂದಿಗೆ ಹಸ್ತಮೈಥುನ ನಡೆಸುತ್ತಾ, ಮರಳಿ ಅದನ್ನು ಅಲ್ಲೇ ಬಿಟ್ಟು ಬರುವ ಕೃತ್ಯಗಳನ್ನು ಪುನರಾವರ್ತಿಸಿರುವ ಚಿತ್ರಣಗಳು ಡೀವಿಡಿಯಲ್ಲಿ ಕಂಡು ಬಂದಿದೆ. ನೀವಿದನ್ನು ಹಲವಾರು ಮನೆಗಳಲ್ಲಿ ನಡೆಸಿದ್ದೀರಿ. ಆ ಮೂಲಕ ಅವರಲ್ಲಿ ಅಹಸ್ಯ ಹುಟ್ಟಿಸಿದ್ದೀರಿ. ಇದು ಬಲಿಪಶುಗಳ ಮೇಲೆ ಗಾಢವಾದ ಪರಿಣಾಮ ಬೀರಿದೆ ಎಂದು ಈ ಸಂದರ್ಭದಲ್ಲಿ ಮೇಯರ್ ಕೃತ್ಯಕ್ಕೆ ಅಭಿಪ್ರಾಯಪಡಲಾಯಿತು.
ಸಂಬಂಧಿತ ಮಾಹಿತಿ ಹುಡುಕಿ