ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಬುರ್ಖಾ ಕಡ್ಡಾಯವಲ್ಲ, ಧರಿಸದವರನ್ನು ಬಂಧಿಸುವಂತಿಲ್ಲ: ಬಾಂಗ್ಲಾ (Burqa | Bangladesh | women's rights groups | veil is not mandatory)
Bookmark and Share Feedback Print
 
ಮುಸ್ಲಿಂ ಮಹಿಳೆಯರು ಬುರ್ಖಾ ಧರಿಸುವ ಕುರಿತು ವಿಶ್ವದಾದ್ಯಂತ ಭಾರೀ ಚರ್ಚೆ ನಡೆಯುತ್ತಿರುವ ನಡುವೆಯೇ ಮುಸ್ಲಿಂ ರಾಷ್ಟ್ರವೊಂದು ಬುರ್ಖಾ ಕಡ್ಡಾಯವಲ್ಲ; ಬುರ್ಖಾ ಧರಿಸದ ಕಾರಣವನ್ನು ಮುಂದಿಟ್ಟುಕೊಂಡು ಯಾರನ್ನೂ ಬಂಧಿಸುವಂತಿಲ್ಲ ಎಂದು ಹೇಳಿದೆ.

ಮುಸ್ಲಿಂ ಬಹುಸಂಖ್ಯಾತರಾಗಿರುವ ಬಾಂಗ್ಲಾದೇಶದ ಹೈಕೋರ್ಟ್ ಬುಧವಾರ ಈ ಆದೇಶವನ್ನು ನೀಡಿದೆ. ಮುಖ ಮುಚ್ಚುವ ಪರದೆಯನ್ನು ಧರಿಸುವ ಆಯ್ಕೆಯನ್ನು ಮಹಿಳೆಯರಿಗೇ ನೀಡಿ, ಇದನ್ನೇ ಮುಂದಿಟ್ಟುಕೊಂಡು ಅವರಿಗೆ ಕಿರುಕುಳ ನೀಡಬೇಡಿ ಎಂದು ನ್ಯಾಯಾಲಯ ಪೊಲೀಸರಿಗೆ ಸೂಚನೆ ನೀಡಿದೆ.

ದೇಶದ ಉತ್ತರ ನಗರ ರಂಗಾಪುರ್ ಎಂಬಲ್ಲಿ ಒಂಬತ್ತು ಯುವ ಜೋಡಿ ಅಶ್ಲೀಲ ಭಂಗಿಗಳಲ್ಲಿ ಕಾಣಿಸಿಕೊಂಡದ್ದನ್ನು ಗಮನಿಸಿದ ಪೊಲೀಸರು ಸೋಮವಾರ ಬಂಧಿಸಿ, ಬುರ್ಖಾ ಅಥವಾ ನಿಖಾಬ್ ಧರಿಸುವಂತೆ ಹುಡುಗಿಯರಿಗೆ ಪೊಲೀಸ್ ಅಧಿಕಾರಿಗಳು ಆದೇಶ ನೀಡಿದ್ದರು ಎಂದು ಆರೋಪಿಸಲಾಗಿತ್ತು.

ಬಾಂಗ್ಲಾದೇಶದಲ್ಲಿ ಬುರ್ಖಾ ಅಥವಾ ಮುಖ ಪರದೆಯನ್ನು ಧರಿಸುವುದು ಕಡ್ಡಾಯವಲ್ಲವಾಗಿರುವುದರಿಂದ ಪೊಲೀಸರ ಕ್ರಮದ ಕುರಿತು ಮಹಿಳಾ ಹಕ್ಕುಗಳ ಸಂಘಟನೆಗಳು ಭಾರೀ ಪ್ರತಿಭಟನೆ ನಡೆಸಿದ್ದವು. ಇದೇ ಹಿನ್ನೆಲೆಯಲ್ಲಿ ವಕೀಲರುಗಳು ಹೈಕೋರ್ಟ್ ಮೊರೆ ಹೋಗಿದ್ದರು.

ಮಹಿಳೆ ಅಥವಾ ಹುಡುಗಿಯೊಬ್ಬಳು ಬುರ್ಖಾ ಧರಿಸದೇ ಇದ್ದರೆ, ಅಕೆಗೆ ಕಿರುಕುಳ ನೀಡುವುದು ಅಥವಾ ಹಿಂಸೆ ನೀಡುವುದು ಸಲ್ಲದು ಎಂದು ಹೈಕೋರ್ಟ್ ಮಂಗಳವಾರ ತಡವಾಗಿ ಆದೇಶ ನೀಡಿದೆ ಎಂದು ವಕೀಲ ಹಾಗೂ ಓರ್ವ ಅರ್ಜಿದಾರರೂ ಆಗಿರುವ ಮೆಹಬೂಬ್ ಶಾಫಿಕ್ ತಿಳಿಸಿದ್ದಾರೆ.

ಈ ಆದೇಶವನ್ನು ಉಪ ಅಟಾರ್ನಿ ಜನರಲ್ ರಾಜಿಕ್ ಅಲ್ ಜಲೀಲ್ ಖಚಿತಪಡಿಸಿದ್ದು, 'ಒಬ್ಬ ಯುವತಿಯನ್ನು ಕ್ರಿಮಿನಲ್ ಪ್ರಕರಣವಿದ್ದರೆ ಮಾತ್ರ ಬಂಧಿಸಬಹುದೇ ಹೊರತು, ಆಕೆ ಬುರ್ಖಾ ಧರಿಸಿಲ್ಲ ಎಂಬ ಕಾರಣಕ್ಕಲ್ಲ' ಎಂದು ತಿಳಿಸಿದೆ ಎಂದಿದ್ದಾರೆ.

ವಿಶ್ವದಲ್ಲೇ ನಾಲ್ಕನೇ ಅತಿ ಹೆಚ್ಚು ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಸಮುದಾಯದ ಇತರ ಮಹಿಳೆಯರು ಕೂಡ ಬೆರಳೆಣಿಕೆಯಲ್ಲಿ ಪಾರದರ್ಶಕತೆಯ ಬುರ್ಖಾ ಧರಿಸುತ್ತಾರೆ.

ಈ ನಡುವೆ ತಾವು ಯುವತಿಯರು ಬುರ್ಖಾ ಧರಿಸುವಂತೆ ಆದೇಶ ನೀಡುವಂತೆ ಆದೇಶ ನೀಡಿದ್ದೇವೆ ಎಂಬುದನ್ನು ರಂಗಾಪುರ್ ಪೊಲೀಸ್ ಮುಖ್ಯಸ್ಥ ಸಲೇಹ್ ತನ್ವೀರ್ ನಿರಾಕರಿಸಿದ್ದಾರೆ.

ಒಂಬತ್ತು ಜೋಡಿ ಅಸಭ್ಯ ಭಂಗಿಗಳಲ್ಲಿರುವುದನ್ನು ಕಂಡು ನಾವು ವಶಕ್ಕೆ ತೆಗೆದುಕೊಂಡಿದ್ದೆವು. ಈ ಜೋಡಿಗಳ ಕಾರಣದಿಂದ ಪ್ರಾಣಿ ಸಂಗ್ರಹಾಲಯಕ್ಕೆ ಕುಟುಂಬ ಸಮೇತ ಹೋಗಲು ಸಾಧ್ಯವಾಗುತ್ತಿಲ್ಲ ಎಂದು ಹಲವರು ದೂರು ನೀಡಿದ ಹಿನ್ನೆಲೆಯಲ್ಲಿ ನಾವು ಕ್ರಮ ಕೈಗೊಂಡಿದ್ದೆವು ಎಂದು ಅವರು ವಿವರಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ