ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » 'ಲಾಡೆನ್ ಎಲ್ಲಿದ್ದಾನೆ ಎಂಬುದು ಐಎಸ್‌ಐಗೆ ಗೊತ್ತು' (ISI | Osama bin Laden | America | Stephen Tanner)
Bookmark and Share Feedback Print
 
ಅಲ್ ಖಾಯಿದಾ ಉಗ್ರಗಾಮಿ ಸಂಘಟನೆಯ ವರಿಷ್ಠ ಒಸಾಮಾ ಬಿನ್ ಲಾಡೆನ್ ಎಲ್ಲಿದ್ದಾನೆ ಎಂಬುದು ಪಾಕಿಸ್ತಾನದ ಐಎಸ್‌ಐ(ಇಂಟರ್ ಸರ್ವಿಸ್ ಇಂಟಲಿಜೆನ್ಸ್)ಗೆ ಚೆನ್ನಾಗಿ ತಿಳಿದಿದೆ. ಆದರೆ ಆತನ ರಹಸ್ಯ ಸ್ಥಳದ ಗುಟ್ಟನ್ನು ಬಿಟ್ಟುಕೊಡುತ್ತಿಲ್ಲ ಎಂದು ಖ್ಯಾತ ಇತಿಹಾಸಕಾರ ಸ್ಟೇಫನ್ ತಾನ್ನೆರ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ಲಾಡೆನ್ ಅಡಗಿರುವ ಸ್ಥಳ ಐಎಸ್‌ಐಗೆ ಚೆನ್ನಾಗಿ ತಿಳಿದಿದೆ. ಆದರೆ ಆ ರಹಸ್ಯ ಸ್ಥಳದ ಮಾಹಿತಿಯನ್ನು ಬಹಿರಂಗಪಡಿಸುತ್ತಿಲ್ಲ. ಯಾಕೆಂದರೆ ಅಮೆರಿಕ ಭಾರತದ ಜೊತೆ ನಿಕಟವರ್ತಿಯಾಗುತ್ತಿದೆ ಎಂಬ ಎಚ್ಚರಿಕೆಯ ಹಿನ್ನೆಲೆಯಲ್ಲಿ ಒಸಾಮಾನಿಂದ ಪ್ರಯೋಜನ ಪಡೆಯುವ ಹುನ್ನಾರ ಪಾಕಿಸ್ತಾನದ್ದು ಎಂದು ಆರೋಪಿಸಿದ್ದಾರೆ.

ಲಾಡೆನ್‌ನನ್ನು ಐಎಸ್‌ಐ ರಕ್ಷಿಸುತ್ತಿರುವುದು ಸ್ಪಷ್ಟ ಎಂದಿರುವ ಸ್ಟೇಫನ್, ಆತನ ರಹಸ್ಯ ತಾಣ ಕೂಡ ಗೊತ್ತಿದೆ. ಆದರೂ ಐಎಸ್‌ಐ ಮಾಹಿತಿ ನೀಡಲು ತಯಾರಿಲ್ಲ ಎಂದು ಹೇಳಿದ್ದಾರೆ.

ಅಮೆರಿಕ ಮತ್ತು ಭಾರತ ಆಪ್ತವಾದರೆ ಪಾಕಿಸ್ತಾನಕ್ಕೆ ತುಂಬಾ ಅಪಾಯವಾಗಬಹುದೆಂಬ ಹೆದರಿಕೆಯಿಂದಾಗಿ ಒಸಾಮಾನ ರಹಸ್ಯ ಸ್ಥಳದ ಗುಟ್ಟನ್ನು ಬಿಟ್ಟು ಕೊಡುತ್ತಿಲ್ಲ. ಪಾಕಿಸ್ತಾನಕ್ಕೆ ನಿಜವಾದ ಭಯ ಇರುವುದು ಲಾಡೆನ್‌ದ್ದಲ್ಲ. ಅದರ ಬದಲಾಗಿ ಅಮೆರಿಕ ಮತ್ತು ಭಾರತದ ನಡುವಿನ ಗೆಳೆತನ. ಆ ಕಾರಣಕ್ಕಾಗಿಯೇ ಒಸಾಮಾನನ್ನು ಸಕಾಲದಲ್ಲಿ ಬಳಸಿಕೊಳ್ಳುವ ದುರುದ್ದೇಶದಿಂದ ಇಂತಹ ನಾಟಕವಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ