ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕ್ ಕುತಂತ್ರ: ಟೆರರಿಸ್ಟ್ ಪಟ್ಟಿಯಲ್ಲಿ ಸಯೀದ್ ಹೆಸರೇ ಇಲ್ಲ! (Hafiz Saeed | Masood Azhar | Mumbai attacks | Pakistan)
Bookmark and Share Feedback Print
 
ವಾಣಿಜ್ಯ ನಗರಿ ಮುಂಬೈ ದಾಳಿಗೆ ಸಂಚು ಮತ್ತು ಸಹಾಯ ನೀಡಿದ ಬಗ್ಗೆ ಲಷ್ಕರ್ ಇ ತೊಯ್ಬಾದ ಉಗ್ರರು ಸೇರಿದಂತೆ 20ಮಂದಿ ವಿರುದ್ಧ ಆರೋಪ ಇದ್ದು, ಆ ನಿಟ್ಟಿನಲ್ಲಿ ಪಾಕಿಸ್ತಾನದ ಮೋಸ್ಟ್ ವಾಂಟೆಡ್ 119ಭಯೋತ್ಪಾದಕರ ಪಟ್ಟಿಯಲ್ಲಿ ಪಾಕಿಸ್ತಾನ್ ತಾಲಿಬಾನ್‌‌‌ನ ಮಸೂದ್ ಹಾಗೂ ಲಷ್ಕರ್ ಇ ತೊಯ್ಬಾದ ಹಫೀಜ್ ಸಯೀದ್‌ನ ಹೆಸರನ್ನು ಕೈಬಿಡುವ ಮೂಲಕ ಪಾಕಿಸ್ತಾನ ತನ್ನ ಕುತಂತ್ರದ ನಿಲುವನ್ನು ಮುಂದುವರಿಸಿದೆ.

ಮುಂಬೈ ದಾಳಿಗೆ ಸಂಬಂಧಿಸಿದಂತೆ ಫೆಡರಲ್ ಇನ್ವೆವೆಸ್ಟಿಗೇಷನ್ ಏಜೆನ್ಸಿ (ಎಫ್‌ಐಎ)20ಮಂದಿ ವಿರುದ್ಧ ಭಯೋತ್ಪಾದನ ನಿಗ್ರಹ ಕಾಯ್ದೆ, ಪಾಕಿಸ್ತಾನ ಪೀನಲ್ ಕೋಡ್ ಮತ್ತು ಸೈಬರ್ ಕ್ರೈಮ್ಸ್ ಕಾಯ್ದೆಯಡಿ ಮೊಕದ್ದಮೆಯನ್ನು ದಾಖಲಿಸಿತ್ತು.

ಈ ವಾಂಟೆಡ್ ಪಟ್ಟಿಯನ್ನು ರೆಡ್ ಬುಕ್ ಅಥವಾ ಲಿಸ್ಟ್ ಆಫ್ 119 ಎಂಬ ಹೆಸರಿನಲ್ಲಿ ಮೋಸ್ಟ್ ವಾಂಟೆಡ್ ಟೆರರಿಸ್ಟ್ ಎಂಬುದಾಗಿ ಎಫ್‌ಐಎ ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ತನಿಖೆ ನಡೆಸಿ ಪಟ್ಟಿ ಸಿದ್ದಪಡಿಸಿತ್ತು.

ಆದರೆ ವಿಪರ್ಯಾಸ ಎಂದರೆ ಜೈಶ್ ಇ ಮೊಹಮ್ಮದ್ ವರಿಷ್ಠ (ಪಾಕಿಸ್ತಾನದ ತೆಹ್ರೀಕ್ ಇ ತಾಲಿಬಾನ್) ಮೌಲಾನಾ ಮಸೂದ್ ಅಜಹರ್ ಹೆಸರು ಪಟ್ಟಿಯಲ್ಲಿ ಕೈಬಿಡಲಾಗಿದೆ. ಅಲ್ಲದೇ, ಮುಂಬೈ ದಾಳಿಗೆ ಸಂಬಂಧಿಸಿದಂತೆ ಲಷ್ಕರ್ ಇ ತೊಯ್ಬಾದ ಸ್ಥಾಪಕ ಹಫೀಜ್ ಮೊಹಮ್ಮದ್ ಸಯೀದ್ ವಿರುದ್ಧ ಯಾವುದೇ ಸೂಕ್ತ ಸಾಕ್ಷ್ಯಾಧಾರ ಇಲ್ಲ ಎಂದು ಹೇಳಿರುವ ಪಾಕಿಸ್ತಾನದ ಅಧಿಕಾರಿಗಳು ಆತನ ಬಂಧನ ಸಾಧ್ಯವಿಲ್ಲ ಎಂದು ಹೇಳಿದೆ.

ಮುಂಬೈ ದಾಳಿ ಪ್ರಕರಣದಲ್ಲಿ 20ಮಂದಿ ಪಾಕಿಸ್ತಾನಿ ಪ್ರಜೆಗಳು ವಾಂಟೆಡ್ ಲಿಸ್ಟ್‌ನಲ್ಲಿದ್ದು, ಅದರಲ್ಲಿ ಕರಾಚಿ ಮೂಲದ ಲಷ್ಕರ್ ಇ ತೊಯ್ಬಾದ ಸಂಘಟಕ ಅಮ್ಜದ್ ಖಾನ್ ಹೆಸರು ಪ್ರಮುಖವಾಗಿದೆ. ಅಲ್ಲದೇ ಪಾಕಿಸ್ತಾನ ಭಾರತಕ್ಕೆ ನೀಡಿದ ಮಾಹಿತಿ ಕಡತದಲ್ಲಿಯೂ ಖಾನ್ ಬಗ್ಗೆ ವಿವರಣೆ ನೀಡಿತ್ತು.

ಇನ್ನುಳಿದಂತೆ ಪಟ್ಟಿಯಲ್ಲಿ ಇಂಟರ್ನೆಟ್ ಪ್ರೋಟೋಕಾಲ್ ಕನೆಕ್ಷನ್‌ ಮೂಲಕ ವೈಸ್ ಓವರ್ ಮಾಡಲು (ಮುಂಬೈ ದಾಳಿಕೋರರ ಜೊತೆ ಸಂಪರ್ಕ ಸಾಧಿಸಲು) 250ಯುಎಸ್‌ಡಿ ಠೇವಣಿ ಇಟ್ಟ ಫೈಸಲಾಬಾದ್‌ನ ಇಫ್ತಿಕಾರ್ ಅಲಿ, ಲಷ್ಕರ್ ಇ ತೊಯ್ಬಾದ ಫೈನಾಸ್ಸ್‌ರ್ ಸುಫ್ಯಾನ್ ಜಾಫರ್, ರಾವಲ್ಪಿಂಡಿಯ ಮುಹಮ್ಮದ್ ಉಸ್ಮಾನ್ ಜಿಯಾ, ಖಾನೆವಾಲ್‌ನ ಮುಹಮ್ಮದ್ ಅಬ್ಬಾಸ್ ನಾಸೀರ್, ಕಾಸುರ್‌ನ ಜಾವೇದ್ ಇಕ್ಬಾಲ್, ಮುಕ್ತಾರ್ ಅಹ್ಮದ್ ಮತ್ತು ಅಹ್ಮದ್ ಸಯೀದ್.

ಅಲ್ಲದೇ ಮೋಸ್ಟ್ ವಾಂಟೆಡ್ ಉಗ್ರರ ಪಟ್ಟಿಯಲ್ಲಿ ಹಡಗು ಸಿಬ್ಬಂದಿಗಳಾದ ಅಲ್ ಹುಸೈನಿ ಮತ್ತು ಅಲ್ ಫೌಜ್, ಬೋಟ್ ಕ್ಯಾಪ್ಟನ್ ಭಾವಾಲ್ಪುರ್‌ನ ಶಾಹಿದ್ ಗಫೂರ್, ಬಾಹಾವಾಲ್‌ನಗರದ ಅಬ್ದುಲ್ ರೆಹಮ್ಮಾನ್, ಮುಹಮ್ಮದ್ ಉಸ್ಮಾನ್, ಲಾಹೋರ್‌ನ ಅತೀಕ್ ಉರ್ ರೆಹಮಾನ್, ಜಾರಿಯಾನ್‌ವಾಲಾದ ರಿಯಾಜ್ ಅಹ್ಮದ್, ಗುಜ್ರನ್‌ವಾಲಾದ ಮುಹಮ್ಮದ್ ಮುಷ್ತಾಕ್, ಡೇರಾ ಘಾಜಿಯ ಮುಹಮ್ಮದ್ ನಯೀಮ್, ಸರ್ಗೋದಾದ ಅಬ್ದುಲ್ ಶಾಕೂರ್, ಮುಲ್ತಾನ್‌ನ ಮುಹಮ್ಮದ್ ಶಾಬಿರ್ ಸಲಾಫಿ, ಮುಹಮ್ಮದ್ ಉಸ್ಮಾನ್ ಮತ್ತು ಶಕೀಲ್ ಅಹ್ಮದ್, ಬಲೂಚಿಸ್ತಾನದ ಮುಹಮ್ಮದ್ ಖಾನ್.

ಲಷ್ಕರ್ ಇ ತೊಯ್ಬಾದ ಕಾರ್ಯಾಚರಣೆಯ ಕಮಾಂಡರ್ ಜಾಕೀರ್ ಉರ್ ರೆಹಮಾನ್ ಲಖ್ವಿ ಸೇರಿದಂತೆ ಏಳು ಮಂದಿ ಪಟ್ಟಿಯಲ್ಲಿದ್ದು, ಉಳಿದಂತೆ ಎಫ್‌ಐಎ ವಾಂಟೆಡ್ ಲಿಸ್ಟ್‌ನಲ್ಲಿ 33ಮಂದಿ ಉಗ್ರರು ಸೇರಿದ್ದಾರೆ. 2007ರ ಪಾಕ್ ಮಾಜಿ ಪ್ರಧಾನಿ ಬೇನಜಿರ್ ಭುಟ್ಟೋ ಹತ್ಯೆ, 2008ರ ಮ್ಯಾರಿಯೋಟ್ ಹೋಟೆಲ್‌ಗೆ ಬಾಂಬ್ ದಾಳಿ ಸೇರಿದಂತೆ ಹಲವಾರು ಭಯೋತ್ಪಾದನಾ ದಾಳಿಯಲ್ಲಿ ಇವರ ಕೈವಾಡ ಇದ್ದು, ವಾಂಟೆಡ್ ಪಟ್ಟಿಯಲ್ಲಿ ಸೇರಿಸಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ