ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭಾರತದ ದಾಖಲೆಗಳನ್ನಾಧರಿಸಿ ಪಾಕ್ ಹಫೀಸ್‌ನನ್ನು ಬಂಧಿಸದು (Pakistan | Jamaat-ud-Dawah | Hafiz Saeed | India)
Bookmark and Share Feedback Print
 
ಭಾರತ ಇತ್ತೀಚೆಗಷ್ಟೇ ಹಸ್ತಾಂತರಿಸಿರುವ ನೂತನ ಸಾಕ್ಷ್ಯಗಳು ಕ್ರಮ ಕೈಗೊಳ್ಳುವಂತಹ ಮಾಹಿತಿಗಳನ್ನು ಒಳಗೊಂಡಿಲ್ಲದೇ ಇರುವುದರಿಂದ ಮುಂಬೈ ದಾಳಿ ಪಿತೂರಿದಾರ ಹಾಗೂ ಜಮಾತ್ ಉದ್ ದಾವಾ ಮುಖ್ಯಸ್ಥ ಹಫೀಜ್ ಸಯೀದ್‌ನನ್ನು ಪಾಕಿಸ್ತಾನ ಬಂಧಿಸದೇ ಇರುವ ನಿರ್ಧಾರಕ್ಕೆ ಬಂದಿದೆ ಎಂದು ಗುರುವಾರ ಮಾಧ್ಯಮ ವರದಿಯೊಂದು ಹೇಳಿದೆ.

ಫೆಬ್ರವರಿ 25ರಂದು ದೆಹಲಿಯಲ್ಲಿ ನಡೆದ ಉಭಯ ದೇಶಗಳ ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದ ಮಾತುಕತೆ ಸಂದರ್ಭದಲ್ಲಿ ಭಾರತ ನೀಡಿದ್ದ ಮೂರು ದಾಖಲೆಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿರುವ ಪಾಕಿಸ್ತಾನ, ಕೆಲವೇ ದಿನಗಳಲ್ಲಿ ತನ್ನ ಪ್ರತಿಕ್ರಿಯೆಯನ್ನು ಭಾರತಕ್ಕೆ ರವಾನಿಸಲಿದೆ ಎಂದು 'ದಿ ನ್ಯೂಸ್' ಪತ್ರಿಕೆ ಮೂಲಗಳನ್ನು ಉಲ್ಲೇಖಿಸಿ ಹೇಳಿದೆ.

ಯಾವುದೇ ಕಾರಣಕ್ಕೂ ಸಯೀದ್‌ನನ್ನು ಭಾರತಕ್ಕೆ ಪಾಕಿಸ್ತಾನವು ಹಸ್ತಾಂತರಿಸುವುದಿಲ್ಲ ಎಂದೂ ಮೂಲ ತಿಳಿಸಿದೆ.

ಸಯೀದ್‌ನನ್ನು ಬಂಧಿಸಲಾಗುವುದಿಲ್ಲ. ಆತನ ವಿರುದ್ಧ ನೀಡಲಾಗಿರುವ ಸಾಕ್ಷ್ಯಗಳು ಭಯೋತ್ಪಾದನೆ ಅಥವಾ ಇನ್ನಿತರ ಆರೋಪಗಳನ್ನು ಪುರಸ್ಕರಿಸಲು ಅಥವಾ ಸಯೀದ್ ವಿರುದ್ಧ ಕ್ರಮ ಕೈಗೊಳ್ಳಲು ಸಾಲುವುದಿಲ್ಲ. ಹಾಗಾಗಿ ಆತನ ವಿರುದ್ಧ ಯಾವುದೇ ಪ್ರಕರಣಗಳನ್ನು ದಾಖಲಿಸಲು ಸಾಧ್ಯವಿಲ್ಲ ಎಂದು ಮೂಲಗಳು ಹೇಳಿವೆ.

ಅಲ್ಲದೆ ಸಯೀದ್ ಈ ಪ್ರಾಂತ್ಯದ ದೇಶಗಳಲ್ಲಿ ಭಾರೀ ಗೌರವ ಹೊಂದಿರುವ ವ್ಯಕ್ತಿ ಎಂದೂ ಈ ಮೂಲಗಳು ಹೇಳಿವೆ.

ಭಾರತ ವಿದೇಶಾಂಗ ಕಾರ್ಯದರ್ಶಿ ನಿರುಪಮಾ ರಾವ್ ಫೆಬ್ರವರಿ 25ರಂದು ನಡೆದ ಮಾತುಕತೆ ಸಂದರ್ಭದಲ್ಲಿ ಹಫೀಜ್ ಸೇರಿದಂತೆ ಭಾರತಕ್ಕೆ ಬೇಕಾಗಿರುವ 34 ಭಯೋತ್ಪಾದಕರ ಪಟ್ಟಿಯನ್ನು ನೀಡಿದ್ದು, ಆರೋಪಿಗಳನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಪಾಕಿಸ್ತಾನ ವಿದೇಶಾಂಗ ಕಾರ್ಯದರ್ಶಿ ಸಲ್ಮಾನ್ ಬಶೀರ್ ಅವರನ್ನು ಕೇಳಿಕೊಂಡಿದ್ದರು. ಈ ಸಂದರ್ಭದಲ್ಲಿ ಹಫೀಜ್‌ಗೆ ಸಂಬಂಧಪಟ್ಟಂತೆ ಮೂರು ಪ್ರಮುಖ ಸಾಕ್ಷ್ಯಗಳನ್ನು ಹಸ್ತಾಂತರಿಸಲಾಗಿತ್ತು.

ಈ ನಡುವೆ ಪಾಕಿಸ್ತಾನ ಕೂಡ ಭಾರತಕ್ಕೆ ಮೂರಕ್ಕೂ ಹೆಚ್ಚು ದಾಖಲೆಗಳನ್ನು ಹಸ್ತಾಂತರಿಸಲಿದ್ದು, ಇದರಲ್ಲಿ ಪಾಕಿಸ್ತಾನಿ ನೆಲದಲ್ಲಿ ನಡೆಯುತ್ತಿರುವ ಭಯೋತ್ಪಾದನೆಯಲ್ಲಿ ಭಾರತದ ಕೈವಾಡವಿರುವ ಸಾಕ್ಷ್ಯಗಳೂ ಇವೆ ಎಂದು ವರದಿ ತಿಳಿಸಿದೆ.

ಭಾರತದ ಜತೆ ಇತ್ತೀಚೆಗೆ ನಡೆದ ಮಾತುಕತೆಯ ಸಂಬಂಧ ಸಂಪೂರ್ಣ ಅಸಮಾಧಾನ ಮತ್ತು ನಿರಾಸೆಗೊಂಡಿರುವ ಪಾಕಿಸ್ತಾನ, ಭಾರತದ ವಿದೇಶಾಂಗ ಕಾರ್ಯದರ್ಶಿಯವರನ್ನು ಪಾಕಿಸ್ತಾನಕ್ಕೆ ಸ್ವಾಗತಿಸುವ ಇಚ್ಛೆಯನ್ನೂ ಹೊಂದಿಲ್ಲ. ಯಾವುದೇ ಷರತ್ತುಗಳನ್ನು ಹೊಂದಿಲ್ಲದ ಸಮಗ್ರ ಮಾತುಕತೆ ನಡೆಯುವುದಾದರೆ ಮಾತ್ರ ತಾನು ಮುಂದೆ ಬರಲಿದ್ದೇನೆ ಎಂಬುದು ಅದರ ನಿಲುವಾಗಿದೆ ಎಂದು ಹೇಳಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ