ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕಿಸ್ತಾನ: ಬಸ್ಸುಗಳ ಮೇಲೆ ಆತ್ಮಹತ್ಯಾ ದಾಳಿಗೆ 10 ಬಲಿ (Suicide attack | NW Pakistan | Hangu district | North West Frontier Province)
Bookmark and Share Feedback Print
 
ವಾಯುವ್ಯ ಪಾಕಿಸ್ತಾನದ ಮಾರುಕಟ್ಟೆಯೊಂದರ ಬಳಿ ಸಾಗುತ್ತಿದ್ದ ಬಸ್ಸುಗಳ ಮೇಲೆ ಆತ್ಮಹತ್ಯಾ ಬಾಂಬರ್ ನಡೆಸಿದ ದಾಳಿಗೆ ಕನಿಷ್ಠ 10 ಮಂದಿ ಬಲಿಯಾಗಿದ್ದು, 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಕೆಳಭಾಗದಲ್ಲಿ ನಡೆದುಕೊಂಡು ಹೋಗುತ್ತಿದ್ದ ಆತ್ಮಹತ್ಯಾ ಬಾಂಬರ್ ತನ್ನ ದೇಹದಲ್ಲೇ ಕಟ್ಟಿಕೊಂಡಿದ್ದ ಸ್ಫೋಟಕಗಳನ್ನು ಸಿಡಿಸಿಕೊಂಡಿದ್ದಾನೆ. ವಾಯುವ್ಯ ಪ್ರಾಂತ್ಯದ ಹಂಗೂ ಜಿಲ್ಲೆಯ ಥಾಲ್ ಪ್ರದೇಶದ ಪೆಟ್ರೋಲ್ ಪಂಪ್ ಸಮೀಪ ಈ ಘಟನೆ ನಡೆದಿದೆ. ಇದು ಒಂದು ಆತ್ಮಹತ್ಯಾ ದಾಳಿ ಎಂದು ಕೋಹತ್ ಆಯುಕ್ತ ಖಾಲಿದ್ ಖಾನ್ ಖಚಿತಪಡಿಸಿದ್ದಾರೆ.

ಘಟನೆಯಲ್ಲಿ ಕನಿಷ್ಠ 10 ಮಂದಿ ಸಾವನ್ನಪ್ಪಿದ್ದಾರೆ, 15ಕ್ಕೂ ಹೆಚ್ಚು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡ ಹಲವು ಮಹಿಳೆಯರು ಮತ್ತು ಮಕ್ಕಳನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಎರಡಕ್ಕೂ ಹೆಚ್ಚು ವರ್ಷಗಳಿಂದ ಪಂಥಾಭಿಮಾನಿಗಳ ಹಿಂಸಾಚಾರ ಪೀಡಿತ ಖುರ್ರಂ ಬುಡಕಟ್ಟು ಪ್ರಾಂತ್ಯದ ಪ್ರಮುಖ ನಗರ ಪಾರಚಿನರ್‌ಗೆ ಈ ಬಸ್ಸುಗಳು ತೆರಳುತ್ತಿದ್ದಾಗ ಬಾಂಬ್ ದಾಳಿ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಮೂರು ವಾಹನಗಳು ಸ್ಫೋಟಕ್ಕೆ ಆಹುತಿಯಾಗಿವೆ.

ಘಟನೆ ನಡೆಯುತ್ತಿದ್ದಂತೆ ಥಾಲ್ ಪ್ರದೇಶದ ಮಾರುಕಟ್ಟೆಯನ್ನು ಮುಚ್ಚಲಾಗಿದೆ. ತಕ್ಷಣವೇ ಭದ್ರತಾ ಪಡೆಗಳು ಸ್ಥಳವನ್ನು ಸುತ್ತುವರಿದವು. ಖುರ್ರಂ ಬುಡಕಟ್ಟು ಪ್ರಾಂತ್ಯಕ್ಕೆ ಒಂಟಿ ವಾಹನಗಳು ಮತ್ತು ಟ್ರಕ್ಕುಗಳು ತೆರಳುವಾಗ ಭಯೋತ್ಪಾದನಾ ದಾಳಿಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಗುಂಪು ಗುಂಪಾಗಿ ವಾಹನಗಳು ಆ ಪ್ರಾಂತ್ಯಕ್ಕೆ ಹೋಗುತ್ತವೆ.

ಈ ಪ್ರಾಂತ್ಯದಲ್ಲಿ ಬಹಳ ಹಿಂದಿನಿಂದಲೇ ಶಿಯಾ ಮತ್ತು ಸುನ್ನಿ ಪಂಗಡಗಳ ನಡುವೆ ಸಂಘರ್ಷ ನಡೆಯುತ್ತಲೇ ಬಂದಿದೆಯಾದರೂ, ತಾಲಿಬಾನ್ ಉಗ್ರರು ಈ ಪ್ರದೇಶಕ್ಕೆ ಬಂದ ನಂತರ ಅದು ಹೆಚ್ಚಾಗಿದೆ. ಅವರು ಸುನ್ನಿ ಬುಡಕಟ್ಟು ಜನರಿಗೆ ತಮ್ಮ ಬೆಂಬಲವನ್ನು ನೀಡುತ್ತಾ ಬಂದಿದ್ದಾರೆ.

ಕಳೆದ ಎರಡು ವರ್ಷಗಳಲ್ಲಿ ಶಿಯಾ ಮತ್ತು ಸುನ್ನಿ ಗುಂಪುಗಳ ನಡುವೆ ನಡೆದ ಗಲಭೆಗಳಲ್ಲಿ ನೂರಾರು ಮಂದಿ ಸಾವನ್ನಪ್ಪಿದ್ದಾರೆ. ಗಲಭೆ ಹಿನ್ನೆಲೆಯಲ್ಲಿ ಈ ಭಾಗದ ಪ್ರಮುಖ ರಸ್ತೆಯನ್ನು ಹಲವು ತಿಂಗಳುಗಳ ಕಾಲ ಮುಚ್ಚಲಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ