ಪೆಂಟಗಾನ್ ಪೊಲೀಸರತ್ತ ಶಸ್ತ್ರಾಸ್ತ್ರಧಾರಿ ವ್ಯಕ್ತಿಯಿಂದ ಗಂಡಿನ ದಾಳಿ
ವಾಷಿಂಗ್ಟನ್, ಶುಕ್ರವಾರ, 5 ಮಾರ್ಚ್ 2010( 18:48 IST )
ಪೆಂಟಗಾನ್ ಬೃಹತ್ ಕಟ್ಟಡದ ಮುಖ್ಯದ್ವಾರದ ಬಳಿ ಮೆಟ್ರೋ ರೈಲಿಗೆ ಹೋಗುವ ಪ್ರವೇಶದ್ವಾರದ ಸಮೀಪ ಬಂದೂಕುಧಾರಿಯೊಬ್ಬ ಗುಂಡು ಹಾರಿಸಿ ಇಬ್ಬರು ಪೆಂಟಗಾನ್ ಭದ್ರತಾ ಅಧಿಕಾರಿಗಳನ್ನು ಗಾಯಗೊಳಿಸಿರುವ ಘಟನೆ ನಡೆದಿದೆ.
ಪೆಂಟಗಾನ್ ಪೊಲೀಸ್ ವರಿಷ್ಠಾಧಿಕಾರಿ ರಿಚರ್ಡ್ ಕೀವಿಲ್ಲ್ ಈ ಬಗ್ಗೆ ವಿವರಣೆ ನೀಡಿದ್ದು, ಗುಂಡು ಹಾರಿಸಿದ ವ್ಯಕ್ತಿಯನ್ನು ಹೂಲ್ಲಿಸ್ಟರ್‌ನ ಜಾನ್ ಪ್ಯಾಟ್ರಿಕ್ ಬೆಡೆಲ್ಲ್ ಎಂದು ಗುರುತಿಸಲಾಗಿದೆ. ಆತನ ಕಾರನ್ನು ಸ್ಥಳೀಯ ಗ್ಯಾರೇಜ್‌ವೊಂದರಲ್ಲಿ ಪತ್ತೆ ಹಚ್ಚಲಾಗಿದೆ. ಅಲ್ಲದೇ ಆತನ ಕಾರಿನಲ್ಲಿ ಹೆಚ್ಚಿನ ಶಸ್ತ್ರಾಸ್ತ್ರವನ್ನು ವಶಪಡಿಸಿಕೊಂಡಿರುವುದಾಗಿ ಹೇಳಿದರು.
ಭದ್ರತಾ ಪೊಲೀಸ್ ಅಧಿಕಾರಿಗಳ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ ಸಂದರ್ಭದಲ್ಲಿ ಅದಕ್ಕೆ ಪ್ರತಿಯಾಗಿ ಪೊಲೀಸರು ಪ್ರತಿದಾಳಿ ನಡೆಸಿದಾಗ ಬೆಡೆಲ್ಲ್(39ವ) ತಲೆಗೆ ಗುಂಡೇಟು ಬಿದ್ದಿದ್ದು, ಆತ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವುದಾಗಿ ತಿಳಿಸಿದರು. ಆತ ಕ್ಯಾಲಿಫೋರ್ನಿಯಾದಿಂದ ಬಂದ ವ್ಯಕ್ತಿಯಾಗಿದ್ದು, ಆತನ ಉಳಿದುಕೊಂಡಿರುವ ಸ್ಥಳಗಳ ಮಾಹಿತಿ ಪಡೆಯಲು ನಾವು ಸಮರ್ಥರಾಗಿದ್ದೇವೆ ಎಂದು ಕೀವಿಲ್ಲ್ ವಿವರಿಸಿದರು.