ಪ್ರೇಮಿಯ ಅವಳಿ ಸೋದರನ ಜತೆ ಸೆಕ್ಸ್; ಇದು ತಪ್ಪಿ-ಅಪ್ಪಿದ್ದು!
ಟೊರೊಂಟೊ, ಶನಿವಾರ, 6 ಮಾರ್ಚ್ 2010( 10:50 IST )
ಇದು ತನ್ನ ಪ್ರೇಮಿಯೇ ಇರಬಹುದು ಅಂದುಕೊಂಡ ಮಹಿಳೆಯೊಬ್ಬಳು ಆತನ ಅವಳಿ ಸಹೋದರನ ಜತೆ ಸೆಕ್ಸ್ ನಡೆಸಿ ಪರಿತಪಿಸುತ್ತಿರುವ ಪ್ರಕರಣವಿದು. ಇದಕ್ಕಾಗಿ ಶಿಕ್ಷೆ ಅನುಭವಿಸಿದ ವ್ಯಕ್ತಿ ಇದೀಗ ಪ್ರಕರಣವನ್ನು ಕೆದಕಿ ನ್ಯಾಯಾಲಯದ ಮೆಟ್ಟಿಲೇರಿದ್ದಾನೆ.
2006ರಲ್ಲಿ ನಡೆದ ಪಾರ್ಟಿಯೊಂದರ ಸಂದರ್ಭದಲ್ಲಿನ ತನ್ನ ಪ್ರಿಯತಮನ ಅವಳಿ ಸಹೋದರನ ಜತೆ ತಾನು ತಪ್ಪಿ ಸೆಕ್ಸ್ ನಡೆಸಿದ್ದೆ. ಕೊಠಡಿಯ ದೀಪಗಳನ್ನು ಬೆಳಗಿಸಿದ ನಂತರವಷ್ಟೇ ಇದು ನನಗೆ ತಿಳಿದಿತ್ತು. ಆದರೆ ಪ್ರಿಯತಮನ ಸಹೋದರನಿಗೆ ಮೊದಲೇ ಗೊತ್ತಿತ್ತು ಎಂದು ಮಹಿಳೆ ಆರೋಪಿಸುತ್ತಿದ್ದಾಳೆ.
ಇದು ಗಮನಕ್ಕೆ ಬರುತ್ತಿದ್ದಂತೆ ಆಘಾತಕ್ಕೊಳಗಾದ ಮಹಿಳೆ ಅಪಾರ್ಟ್‌ಮೆಂಟ್‌ನಿಂದ ಜೋರಾಗಿ 'ಓ ಮೈ ಗಾಡ್, ಓ ಮೈ ಗಾಡ್, ಓ ಮೈ ಗಾಡ್.. ನೀನು ಅವನ ಸಹೋದರ ಎಂದು ಅಂದ್ಕೊಂಡಿದ್ದೆ' ಎಂದು ಕೂಗುತ್ತಾ ಓಡಿದ್ದಳು.
ಈ ಪ್ರಕರಣದ ಸಂಬಂಧ ಪ್ರಿಯತಮನ ಸಹೋದರನಿಗೆ 2008ರಲ್ಲಿ ಆರು ತಿಂಗಳ ಜೈಲು ಶಿಕ್ಷೆಯನ್ನೂ ನ್ಯಾಯಾಲಯ ವಿಧಿಸಿತ್ತು. ಆದರೆ ಇದೀಗ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿರುವ ಆಪಾದಿತ ಯುವಕ, ಮಹಿಳೆ ಸೆಕ್ಸ್‌ಗೆ ತಾನೇ ಸ್ವತಃ ಒಪ್ಪಿಗೆ ನೀಡಿದ್ದಳು ಎಂದಿದ್ದಾನೆ.
2006ರ ಸೆಪ್ಟೆಂಬರ್ ತಿಂಗಳಲ್ಲಿ ತನ್ನ 30ರ ಹರೆಯದ ಪ್ರಿಯಕರನ ಜತೆ ಆಗಾಗ ಸೆಕ್ಸ್ ನಡೆಸುತ್ತಿದ್ದ ಅಪಾರ್ಟ್‌ಮೆಂಟ್‌ನಲ್ಲಿ ಆಯೋಜಿಸಿದ್ದ ಪಾರ್ಟಿಯೊಂದಕ್ಕೆ 48ರ ಹರೆಯದ ಈ ಮಹಿಳೆ ತೆರಳಿದ್ದಳು.
ಈ ಸಂದರ್ಭದಲ್ಲಿ ಕೊಂಚ ಪಾನಮತ್ತಳಾಗಿದ್ದ ಆಕೆ ಸುಸ್ತಾದ ನಂತರ ಪ್ರಿಯಕರನ ಬೆಡ್‌ರೂಂಗೆ ವಿಶ್ರಾಂತಿಗೆಂದು ಹೋಗಿದ್ದಳು. ಈ ಹೊತ್ತಿನಲ್ಲಿ ಅವಳಿ ಸಹೋದರರು ಮತ್ತು ಇತರರು ಇನ್ನಷ್ಟು ಕುಡಿಯಲೆಂದು ಬಾರ್‌ಗೆ ಹೋಗಿದ್ದರು.
ಬಾರ್‌ನಿಂದ ವಾಪಸ್ ಬಂದಾಗ ಆಪಾದಿತ ವ್ಯಕ್ತಿ (ಅವಳಿ ಸಹೋದರ) ಕೂಡ ಸುಸ್ತೆನಿಸಿದ್ದರಿಂದ ಮಲಗಲು ತನ್ನ ಸಹೋದರನ ಕೊಠಡಿಗೆ ತೆರಳಿದ್ದ. ಈ ಸಂದರ್ಭದಲ್ಲಿ ಮಹಿಳೆ ಅಲ್ಲಿ ಮಲಗಿದ್ದಳು.
ಯುವಕನ ಪ್ರಕಾರ, 'ಆಕೆ ರೂಮಿನಲ್ಲಿ ಕೇವಲ ಟೀ-ಶರ್ಟ್ ಮತ್ತು ಒಳಚೆಡ್ಡಿಯನ್ನಷ್ಟೇ ಧರಿಸಿ ಮಲಗಿದ್ದಳು. ನಾವು ಆಪ್ತ ಗೆಳೆಯರಾಗಿದ್ದ ಕಾರಣ ಆಕೆಯ ಪಕ್ಕ ಮಲಗುವುದರಲ್ಲಿ ತಪ್ಪಿಲ್ಲವೆಂದು ಮಲಗಿದ್ದೆ. ಆದರೆ ಆಕೆ ಸ್ವಲ್ಪ ಹೊತ್ತಿನಲ್ಲಿ ನನ್ನ ಮೈ ಮೇಲೆ ಕೈಯಾಡಿಸಲು ಆರಂಭಿಸಿದ್ದಳು' ಎನ್ನುತ್ತಾನೆ.
ಈ ಅಪಾರ್ಟ್‌ಮೆಂಟ್‌ನಲ್ಲಿ ಆಗಾಗ ತನ್ನ ಪ್ರಿಯಕರನೊಂದಿಗೆ ಆಕೆ ಮಲಗುತ್ತಿದ್ದ ಕಾರಣ ತನ್ನ ಪ್ರೇಮಿಯೇ ಈತನಿರಬಹುದು ಎಂದು ಆಕೆ ಅಂದುಕೊಳ್ಳಲು ಸಾಕಷ್ಟು ಕಾರಣಗಳಿವೆ. ಆಕೆ ಸಾಕಷ್ಟು ಬಾರಿ ತನ್ನ ಪ್ರಿಯಕರನ ಹೆಸರನ್ನು ಕೂಗಿದರೂ ಆ ಸಂದರ್ಭದಲ್ಲಿ ಆರೋಪಿ ಯಾವುದೇ ಪ್ರತಿಕ್ರಿಯೆಯನ್ನು ನೀಡದೆ ಪರಿಸ್ಥಿತಿಯ ಲಾಭವನ್ನು ಪಡೆದುಕೊಂಡಿದ್ದ ಎಂದು ಮಹಿಳೆಯ ಪರ ವಕೀಲರು ವಾದಿಸುತ್ತಿದ್ದಾರೆ.