ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಆಸ್ಟ್ರೇಲಿಯಾ: ಮಗುವಿನ ಸಾವಿನ ಕಾರಣ ಇನ್ನೂ ನಿಗೂಢ (Gurshan Singh | Toddler Death | Melbourne | Police | Sydney)
Bookmark and Share Feedback Print
 
ಮೆಲ್ಬೊರ್ನ್ ಬೀದಿಯಲ್ಲಿ 3ವರ್ಷದ ಭಾರತೀಯ ಮಗು ಗುರ್ಶನ್ ಸಿಂಗ್ ಚಾನ್ನಾ‌ನ ಶವ ಪತ್ತೆಯಾಗಿದ್ದು, ಸಾವಿನ ಕಾರಣ ಇನ್ನೂ ನಿಗೂಢವಾಗಿರುವ ಹಿನ್ನೆಲೆಯಲ್ಲಿ ಭಾರತೀಯ ಸಮುದಾಯದವರು ಸಾವಿನ ಬಗ್ಗೆ ಊಹಾಪೋಹದ ಮಾತುಗಳಿಗೆ ಕಿವಿಗೊಡದಂತೆ ಆಸ್ಟ್ರೇಲಿಯಾ ಪೊಲೀಸರು ಮನವಿ ಮಾಡಿದ್ದಾರೆ.

ಮನೆಯಿಂದ ನಾಪತ್ತೆಯಾಗಿದ್ದ ಮಗು ಸುಮಾರು ಆರು ಗಂಟೆಗಳ ಬಳಿಕ ಮೆಲ್ಬೊರ್ನ್‌ನ ವಿಮಾನ ನಿಲ್ದಾಣ ಸಮೀಪದ ಶವ ಪತ್ತೆಯಾಗಿತ್ತು. ಇದೊಂದು ಕೊಲೆ ಎಂದು ಮಗುವಿನ ಪೋಷಕರು ಶಂಕಿಸಿದ್ದಾರೆ. ಆದರೆ ಮಗುವಿನ ಸಾವಿನ ಕುರಿತು ಇನ್ನೂ ಸರಿಯಾದ ಮಾಹಿತಿ ಲಭ್ಯವಾಗಿಲ್ಲ. ಘಟನೆ ಕುರಿತು ತೀವ್ರ ತನಿಖೆ ನಡೆಸುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಮಗುವಿನ ಶವ ಪತ್ತೆಯಾಗಿ ಎರಡು ದಿನಗಳ ನಂತರವೂ ಕಾರಣ ನಿಗೂಢವಾಗಿರುವುದು ಅಧಿಕಾರಿಗಳನ್ನು ಚಿಂತೆಗೀಡು ಮಾಡಿದೆ.

ಆಸೀಸ್ ನೆಲದಲ್ಲಿ ಭಾರತೀಯರ ಮೇಲೆ ನಡೆಯುತ್ತಿರುವ ಜನಾಂಗೀಯ ದಾಳಿ ಭಾರತ ಮತ್ತು ಆಸ್ಟ್ರೇಲಿಯಾದ ದ್ವಿಪಕ್ಷೀಯ ಸಂಬಂಧಕ್ಕೆ ಧಕ್ಕೆ ತರುವಂತಾಗಿದೆ. ಆ ನಿಟ್ಟಿನಲ್ಲಿ ಆಸ್ಟ್ರೇಲಿಯಾದಲ್ಲಿರುವ ಭಾರತೀಯರಿಗೆ ಸರ್ಕಾರ ಸೂಕ್ತ ಭದ್ರತೆಯನ್ನು ಒದಗಿಸಬೇಕಾಗಿದೆ ಎಂದು ಭಾರತ ಮತ್ತೊಮ್ಮೆ ಆಗ್ರಹಿಸಿದೆ.

ಮಗುವಿನ ಸಾವಿನ ಕುರಿತು ತನಿಖೆ ನಡೆಸುತ್ತಿದ್ದೇವೆ. ಅದಕ್ಕೂ ಮುನ್ನ ಊಹಾಪೋಹಗಳನ್ನು ನಂಬಿಕೊಂಡು ಅಭಿಪ್ರಾಯ ವ್ಯಕ್ತಪಡಿಸುವುದು ಸರಿಯಲ್ಲ ಎಂದು ವಿಕ್ಟೋರಿಯಾ ಪೊಲೀಸ್ ವಕ್ತಾರ ಮಾರ್ಟಿ ಬಿವೆರೆಜ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ