ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಲಂಡನ್: ಅಫ್ಘಾನ್‌ಗೆ ಹೋಗಲ್ಲ ಎಂದ ಸೈನಿಕನಿಗೆ ಜೈಲು ಶಿಕ್ಷೆ (British soldier | Afghan | London | Glenton)
Bookmark and Share Feedback Print
 
ಅಫ್ಘಾನಿಸ್ತಾನದಲ್ಲಿ ಮಿಲಿಟರಿ ಕಾರ್ಯಾಚರಣೆಯಲ್ಲಿ ಸೇವೆ ಸಲ್ಲಿಸಲು ಸಾಧ್ಯವಿಲ್ಲ ಎಂದ ಬ್ರಿಟನ್ ಸೈನಿಕನೊಬ್ಬನಿಗೆ ನ್ಯಾಯಾಲಯ 9ತಿಂಗಳ ಕಾಲ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

2006ರಲ್ಲಿ ಬ್ರಿಟನ್‌ನ ಮಿಲಿಟರಿ ಪಡೆಯಲ್ಲಿ ಸೇವೆ ಆರಂಭಿಸಿದ್ದ ಜೊಯ್ ಗ್ಲೆನ್‌ಟನ್ 2007ರಲ್ಲಿ ಅಫ್ಘಾನಿಸ್ತಾನದಲ್ಲಿ ಎರಡನೇ ಬಾರಿ ಮಿಲಿಟರಿ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳಲು ನಿರಾಕರಿಸಿದ್ದ. ಕಳೆದ ವರ್ಷ ಮಾರ್ಚ್ ತಿಂಗಳಿನಲ್ಲಿ ನಡೆದ ಬ್ರಿಟನ್ ಯುದ್ಧ ವಿರೋಧಿ ಚಳವಳಿಯಲ್ಲಿ ಗ್ಲೆನ್‌ಟನ್ ಪಾಲ್ಗೊಂಡಿದ್ದ ಎಂಬ ಆರೋಪ ಎದುರಿಸುತ್ತಿದ್ದ.

ಆರೋಪದ ಹಿನ್ನೆಲೆಯಲ್ಲಿ ಜೂನ್ ತಿಂಗಳಿನಲ್ಲಿ ಮಿಲಿಟರಿ ಅಧಿಕಾರಿಗಳು ದೂರು ದಾಖಲಿಸಿದ್ದರು. ರಜೆ ಇಲ್ಲದೆ ವಿನಾಕಾರಣ ಸೇವೆಗೆ ಗೈರು ಹಾಜರಾದ ಕಾರಣ ಗ್ಲೆನ್‌ಟನ್ ದೋಷಿಯಾಗಿರುವುದಾಗಿ ನ್ಯಾಯಾಲಯ ತೀರ್ಪು ನೀಡಿತ್ತು. ಆ ನಿಟ್ಟಿನಲ್ಲಿ ದಕ್ಷಿಣ ಇಂಗ್ಲೆಂಡ್‌ನ ಕೋಲ್‌ಚೆಸ್ಟರ್ ಮಿಲಿಟರಿ ಕೋರ್ಟ್ ಶುಕ್ರವಾರ ಒಂಬತ್ತು ತಿಂಗಳ ಕಾಲ ಜೈಲು ಶಿಕ್ಷೆಯನ್ನು ವಿಧಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ