ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಫಘಾನಿಸ್ತಾನದಲ್ಲಿ ಯೋಧರ ರಾತ್ರಿ ದಾಳಿಗೆ ಹೊಸ ನಿಯಮಗಳು (night raids | Afghanistan | Afghan soldiers | Nato)
Bookmark and Share Feedback Print
 
ಅಫಘಾನಿಸ್ತಾನದಲ್ಲಿ ವಿದೇಶಿ ಪಡೆಗಳು ಜನತೆಯ ಮನೆಗಳಿಗೆ ರಾತ್ರಿ ದಾಳಿ ನಡೆಸುವ ಸಂದರ್ಭ ಹೊಸ ನೀತಿಗಳನ್ನು ಪ್ರಕಟಿಸಿರುವ ನ್ಯಾಟೋ, ಅಫ್ಘಾನ್ ಯೋಧರೊಂದಿಗೆ ಅಗತ್ಯವಿದ್ದಲ್ಲಿ ಮಾತ್ರ ರಾತ್ರಿ ದಾಳಿಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದೆ.

ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಪಡೆಗಳು ನಿರತವಾಗಿರುವಾಗ ತೀವ್ರ ವಿರೋಧಗಳು ಕಂಡು ಬರುತ್ತಿರುವ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡಿರುವ ಅಮೆರಿಕಾ ಮತ್ತು ನ್ಯಾಟೋ ಪಡೆಗಳ ಅಫಘಾನಿಸ್ತಾದ ಮುಖ್ಯಸ್ಥ ಯುಎಸ್ ಜನರಲ್ ಸ್ಟಾನ್ಲಿ ಮೆಕ್ ಕ್ರಿಸ್ಟಲ್, ಇರುಳು ಹೊತ್ತಿನಲ್ಲಿ ನಡೆಸುವ ದಾಳಿಗಳು ಹೇಗಿರಬೇಕು ಎಂಬ ನೂತನ ನೀತಿಗಳನ್ನು ಪ್ರಕಟಿಸಿದ್ದಾರೆ.

ರಾತ್ರಿ ದಾಳಿಗಳನ್ನು ನಡೆಸುವಾಗ, ಅದರಲ್ಲೂ ಜನರ ಮನೆಗಳಿಗೆ ದಾಳಿ ಮಾಡುವಾಗ ಅಫಘಾನಿಸ್ತಾನದ ಯೋಧರು ಅಥವಾ ಪಡೆಗಳ ಮುಂದಾಳುತ್ವದಲ್ಲೇ ಕಾರ್ಯಾಚರಣೆ ನಡೆಸಬೇಕು.

ಈ ಸಂದರ್ಭದಲ್ಲಿ ಮಹಿಳೆಯರನ್ನು ತಪಾಸಣೆ ನಡೆಸುವುದಿದ್ದರೆ, ಮಹಿಳಾ ಯೋಧರನ್ನೇ ಬಳಸಬೇಕು. ಕಾರ್ಯಾಚರಣೆ ಸಂದರ್ಭದಲ್ಲಿ ಆಸ್ತಿ ನಷ್ಟವಾದಲ್ಲಿ ಅದಕ್ಕೆ ಪರಿಹಾರ ನೀಡಲಾಗುತ್ತದೆ ಎಂದು ಕ್ರಿಸ್ಟಲ್ ಸೂಚನೆ ನೀಡಿದ್ದಾರೆ.

ಮನೆಗಳಿಗೆ ದಾಳಿ ನಡೆಯುವ ಸಂದರ್ಭದಲ್ಲಿ ತಮ್ಮ ಆಸ್ತಿ-ಪಾಸ್ತಿ, ಖಾಸಗಿತನ ಮತ್ತು ಮಹಿಳೆಯರನ್ನು ರಕ್ಷಿಸಲು ಯತ್ನಿಸುವ ಜನತೆ ಭದ್ರತಾ ಪಡೆಗಳ ವಿರುದ್ಧ ಹಿಂಸಾಚಾರದಲ್ಲಿ ನಿರತರಾಗುತ್ತಿರುವ ಪ್ರಸಂಗಗಳು ಹೆಚ್ಚಿದ ಹಿನ್ನೆಲೆಯಲ್ಲಿ ನ್ಯಾಟೋ ಈ ಕ್ರಮಕ್ಕೆ ಮುಂದಾಗಿದೆ ಎಂದು ಹೇಳಲಾಗಿದೆ.

ಕಳೆದ ಹಲವು ವರ್ಷಗಳಿಂದ ಅಫಘಾನಿಸ್ತಾನದಲ್ಲಿ ತಾಲಿಬಾನ್ ವಿರುದ್ಧ ವಿದೇಶಿ ಪಡೆಗಳನ್ನು ಒಟ್ಟುಗೂಡಿಸಿಕೊಂಡಿರುವ ಅಮೆರಿಕಾ ನ್ಯಾಟೋ ಹೆಸರಿನಲ್ಲಿ ಹೋರಾಡುತ್ತಿದ್ದು, ಕೆಲವೇ ವರ್ಷಗಳಲ್ಲಿ ಹೋರಾಟವನ್ನು ಮುಕ್ತಾಯಗೊಳಿಸುವ ವಿಶ್ವಾಸ ಹೊಂದಿದೆ. ಅದಕ್ಕೂ ಮೊದಲು ದೇಶದ ನಿಯಂತ್ರಣವನ್ನು ಅಫ್ಘಾನ್ ಪಡೆಗಳಿಗೆ ಹಸ್ತಾಂತರಿಸಲಾಗುತ್ತದೆ ಎಂದು ಮೂಲಗಳು ಹೇಳಿವೆ.
ಸಂಬಂಧಿತ ಮಾಹಿತಿ ಹುಡುಕಿ