ಅಮೆರಿಕದಲ್ಲಿನ ಸೆಪ್ಟೆಂಬರ್ 11ರ ದಾಳಿಯೊಂದು ದೊಡ್ಡ ಸುಳ್ಳಿನ ಕಂತೆ ಎಂದು ಇರಾಕ್ ಅಧ್ಯಕ್ಷ ಮಹಮದ್ ಅಹಮದಿನೆಜಾದ್ ಬಣ್ಣಿಸಿದ್ದು, ದಾಳಿಯ ಹೆಸರಿನಲ್ಲಿ ಅಮೆರಿಕ ಅಫ್ಘಾನಿಸ್ತಾನ ಮತ್ತು ಇರಾಕ್ ಮೇಲೆ ದಾಳಿ ಮಾಡುವ ತಂತ್ರಗಾರಿಕೆ ಹೂಡಿದೆ ಎಂದು ಆರೋಪಿಸಿದ್ದಾರೆ.
'2001ರ ಸೆಪ್ಟೆಂಬರ್ ದಾಳಿ ಗುಪ್ತಚರ ಇಲಾಖೆಯ ನಾಟಕ ಮತ್ತು ಸಂಚು ಎಂದು ಅವರು ಕಟುವಾಗಿ ಟೀಕಿಸಿರುವುದಾಗಿ ಇರಾನ್ ಸ್ವಾಮಿತ್ವದ ಚಾನೆಲ್‌ವೊಂದರ ವರದಿ ತಿಳಿಸಿದೆ.
ಅಲ್ಲದೇ, ಅಮೆರಿಕ ಪದೇ ಪದೇ ದಾಳಿ ನಡೆದಿದೆ ಎಂದು ಹೇಳುತ್ತಿದೆ, ನಿಜಕ್ಕೂ ಈ ದಾಳಿಯ ಹಿಂದೆ ಯಾರಿದ್ದಾರೆ ಮತ್ತು ಹೇಗೆ ನಡೆಯಿತು ಎಂದು ಅಮೆರಿಕವನ್ನು ಪ್ರಶ್ನಿಸಿದ್ದಾರೆ.
ಸೆಪ್ಟೆಂಬರ್ ದಾಳಿಯ ನಾಟಕದ ಮೂಲಕ ಅಮೆರಿಕ ವ್ಯವಸ್ಥಿತವಾಗಿ ಇಡೀ ವಿಶ್ವದ ದಾರಿಯನ್ನೇ ತಪ್ಪಿಸುವ ಹುನ್ನಾರ ನಡೆಸುತ್ತಿದೆ. ಆ ಮೂಲಕ ಅಫ್ಘಾನ್, ಇರಾಕ್ ಸೇರಿದಂತೆ ಪಾಶ್ಚಾತ್ಯ ರಾಷ್ಟ್ರಗಳ ಮೇಲೆ ಆಕ್ರಮಣ ಮಾಡುವ ಧೋರಣೆ ಹೊಂದಿದೆ ಎಂದು ಆರೋಪಿಸಿದ್ದಾರೆ.