ನಟೋರಿಯಸ್ ಉಗ್ರಗಾಮಿಯಾಗಿರುವ ಒಸಾಮ ಬಿನ್ ಲಾಡೆನ್‌ನ ನಿಕಟವರ್ತಿ ಹಾಗೂ ಅಲ್ ಖಾಯಿದಾ ಸಂಘಟನೆಯ ಪ್ರಮುಖ ಮುಖಂಡನೊಬ್ಬನನ್ನು ಪಾಕಿಸ್ತಾನದ ಹೊರವಲಯವಾದ ದಕ್ಷಿಣ ಕರಾಚಿಯನ್ನು ಬಂಧಿಸಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸಿಐಎನ ಮೋಸ್ಟ್ ವಾಟೆಂಡ್ ಟೆರರಿಸ್ಟ್ ಪಟ್ಟಿಯಲ್ಲಿರುವ ಅಲ್ ಖಾಯಿದಾದ ಅಬು ಯಾಹ್ಯಾ ಮುಜಾಹಡೇನ್ ಅಲ್ ಅದಂ ಎಂಬಾತನನ್ನು ಅಮೆರಿಕ ಗುಪ್ತಚರ ಇಲಾಖೆ ಮತ್ತು ಪಾಕಿಸ್ತಾನ ಭದ್ರತಾ ಪಡೆಯ ಜಂಟಿ ಕಾರ್ಯಾಚರಣೆಯೊಂದಿಗೆ ಸೆರೆ ಹಿಡಿಯಲಾಗಿದೆ ಎಂದು ವಿವರಿಸಿದ್ದಾರೆ.
ಅಬು ಯಾಹ್ಯಾನನ್ನು ಭಾನುವಾರ ಬಂಧಿಸಲಾಗಿದ್ದು, ಮುಂದಿನ ತನಿಖೆಗಾಗಿ ಪ್ರಕರಣವನ್ನು ಇಸ್ಲಾಮಾಬಾದ್‌ಗೆ ವರ್ಗಾಯಿಸಲಾಗಿದೆ ಎಂದು ಮೂಲಗಲು ತಿಳಿಸಿರುವುದಾಗಿ ಡಾನ್ ಪತ್ರಿಕೆ ವರದಿ ಹೇಳಿದೆ.
2001 ಸೆಪ್ಟೆಂಬರ್ 11ರಂದು ನ್ಯೂಯಾರ್ಕ್‌ನಲ್ಲಿ ದಾಳಿ ನಡೆದ ನಂತರ ಯಾಹ್ಯಾ ಒಸಾಮ ಬಿನ್ ಲಾಡೆನ್ ಜೊತೆ ಇದ್ದಿರುವುದಾಗಿ ಶಂಕಿಸಲಾಗಿದೆ. ಪೆನ್ನಾಸಾಲವಾನಿಯಾ ಮೂಲದ ಯಾಹ್ಯಾ ಅಮೆರಿಕದ ಪ್ರಜೆಯಾಗಿದ್ದಾನೆ.