ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಟರ್ಕಿಯಲ್ಲಿ ಪ್ರಬಲ ಭೂಕಂಪ: 57 ಬಲಿ (US Geological Survey | Turkey quake | Kandilli earthquake)
Bookmark and Share Feedback Print
 
ಪೂರ್ವ ಟರ್ಕಿಯಲ್ಲಿ ಸೋಮವಾರ ಸಂಭವಿಸಿದ ಪ್ರಬಲ ಭೂಕಂಪನದಲ್ಲಿ 57 ಮಂದಿ ಸಾವನ್ನಪ್ಪಿರುವುದಾಗಿ ಅಧಿಕಾರಿಗಳು ತಿಳಿಸಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಪೂರ್ವ ಟರ್ಕಿಯ ಇಲಾಜಿಗ್ ಪ್ರದೇಶದಲ್ಲಿ ಸೋಮವಾರ ಬೆಳಿಗ್ಗೆ ಪ್ರಬಲ ಭೂಕಂಪ ಸಂಭವಿಸಿತ್ತು. ರಿಕ್ಟರ್ ಮಾಪಕದಲ್ಲಿ 6.0ತೀವ್ರತೆ ದಾಖಲಾಗಿರುವುದಾಗಿ ಅನಾಟೋಲಿಯಾ ನ್ಯೂಸ್ ಏಜೆನ್ಸಿ ವರದಿ ಹೇಳಿದೆ.

ಭೂಕಂಪನದಿಂದಾಗಿ ಇಲಾಜಿಗ್ ಪ್ರದೇಶದ ಮೂರು ಹಳ್ಳಿಗಳಲ್ಲಿ ಸುಮಾರು 38ಜನರು ಸಾವನ್ನಪ್ಪಿರುವುದಾಗಿ ಸಮೀಪದ ಕೋವಾನ್ಸಿಲರ್ ನಗರದ ಮೇಯರ್ ಬೆಕಿರ್ ಯಾನಿಲ್‌ಮಾಜ್ ತಿಳಿಸಿದ್ದಾರೆ.

ಸೋಮವಾರ ಮುಂಜಾವಿನ ಸಂದರ್ಭದಲ್ಲಿ ಭೂಕಂಪ ಸಂಭವಿಸಿದ ಪರಿಣಾಮ ಟುನ್‌ಸೆಲಿ, ಬಿಂಗೋಲ್ ಮತ್ತು ಡಿಯಾರ್‌ಬಾಕಿರ್ ಪ್ರದೇಶದ ನಿವಾಸಿಗಳು ದಿಕ್ಕೆಟ್ಟು ಬೀದಿಗಳಲ್ಲಿ ಓಡಿರುವುದಾಗಿ ಪ್ರತ್ಯಕ್ಷದರ್ಶಿಗಳು ಹೇಳಿರುವುದಾಗಿ ಸುದ್ದಿಸಂಸ್ಥೆಯ ವರದಿ ವಿವರಿಸಿದೆ.

ಘಟನೆಯಲ್ಲಿ ಬಹುತೇಕ ಜನರು ಅವಶೇಷಗಳಡಿಯಲ್ಲಿ ಸಿಕ್ಕಿಬಿದ್ದಿರುವುದಾಗಿ ಸಿಎನ್‌ಎನ್ ವರದಿ ತಿಳಿಸಿದ್ದು, ಅವರನ್ನೆಲ್ಲಾ ಹೊರತೆಗೆಯುವ ಕಾರ್ಯ ನಡೆಯುತ್ತಿರುವುದಾಗಿ ಹೇಳಿದೆ.
ಸಂಬಂಧಿತ ಮಾಹಿತಿ ಹುಡುಕಿ