ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಮೆರಿಕಾದಲ್ಲಿ ಬಾಡಿ ಸ್ಕ್ಯಾನ್ ನಿರಾಕರಿಸಿದ ಪಾಕ್ ಸಂಸದರು (Pak lawmakers | body scan | Washington airport | parliament members)
Bookmark and Share Feedback Print
 
ವಾಷಿಂಗ್ಟನ್‌ ವಿಮಾನ ನಿಲ್ದಾಣದಲ್ಲಿ ಅಳವಡಿಸಲಾಗಿರುವ ನೂತನ ಬಾಡಿ ಸ್ಕ್ಯಾನರ್ ತಪಾಸಣೆಗೊಳಗಾಗಲು ನಿರಾಕರಿಸಿರುವ ಪಾಕಿಸ್ತಾನದ ಸಂಸದೀಯ ನಿಯೋಗವೊಂದು ಪ್ರವಾಸವನ್ನು ಮೊಟಕುಗೊಳಿಸಿ ಹಿಂತಿರುಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಪಾಕಿಸ್ತಾನದ ಹಿಂಸಾಪೀಡಿತ ಬುಡಕಟ್ಟು ಪ್ರಾಂತ್ಯದ ಆರು ಮಂದಿ ಸಂಸರನ್ನೊಳಗೊಂಡ ನಿಯೋಗವೊಂದು ಅಮೆರಿಕಾ ಪ್ರವಾಸಕ್ಕೆ ಹೊರಟಿತ್ತು. ಆದರೆ ವಿಮಾನ ನಿಲ್ದಾಣದಲ್ಲಿ ಭದ್ರತೆಯ ನಿಟ್ಟಿನಲ್ಲಿ ಅಳವಡಿಸಲಾಗಿರುವ ಬಾಡಿ ಸ್ಕ್ಯಾನರ್‌ಗೆ ಸ್ಪಂದಿಸಲು ನಿರಾಕರಿಸಿದ ನಿಯೋಗ ತವರಿಗೆ ವಾಪಸಾಗಲು ನಿರ್ಧರಿಸಿತು ಎಂದು ಪಾಕಿಸ್ತಾನದ 'ಎಕ್ಸ್‌ಪ್ರೆಸ್ ನ್ಯೂಸ್' ವಾರ್ತಾವಾಹಿನಿ ವರದಿ ಮಾಡಿದೆ.

ವಿಮಾನಗಳ ಮೂಲಕ ವಿಧ್ವಂಸಕ ಕೃತ್ಯಗಳನ್ನೆಸಗಲು ಭಯೋತ್ಪಾದಕರು ಸಂಚು ರೂಪಿಸುತ್ತಿರುವುದನ್ನು ಪತ್ತೆ ಹಚ್ಚಿದ್ದ ಅಮೆರಿಕಾ ತನ್ನ 19 ವಿಮಾನ ನಿಲ್ದಾಣಗಳಲ್ಲಿ ಬಾಡಿ ಸ್ಕ್ಯಾನರುಗಳನ್ನು ಅಳವಡಿಸಿದೆ. ಇದು ವಿಶ್ವದಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗುತ್ತಿದೆ.

ಇದರೊಂದಿಗೆ ಬಾಡಿ ಸ್ಕ್ಯಾನರ್ ತಪಾಸಣೆಗೊಳಪಡಲು ನಿರಾಕರಿಸಿದ ಮೊದಲ ಅಧಿಕೃತ ವಿದೇಶಿ ನಿಯೋಗ ಎಂಬ ಕುಖ್ಯಾತಿಗೆ ಇದೀಗ ಪಾಕಿಸ್ತಾನ ಒಳಗಾಗಿದೆ.

ನಿಮ್ಮನ್ನು ಬಾಡಿ ಸ್ಕ್ಯಾನರ್ ತಪಾಸಣೆಗೊಳಪಡಿಸುವುದಿಲ್ಲ ಎಂಬ ಭರವಸೆ ನೀಡಿದ ನಂತರ ನಾವು ಬುಡಕಟ್ಟು ಪ್ರಾಂತ್ಯದ ಭದ್ರತೆ ಮತ್ತು ಅಭಿವೃದ್ಧಿ ಯೋಜನೆಗಳ ಕುರಿತು ಚರ್ಚಿಸಲು ವಾಷಿಂಗ್ಟನ್‌ ಆಹ್ವಾನದಂತೆ ತೆರಳಿದ್ದೆವು. ನಮಗೆ ಅಮೆರಿಕಾ ಸ್ಟೇಟ್ ಇಲಾಖೆಯು ಆಹ್ವಾನ ನೀಡಿತ್ತು ಎಂದು ಈ ನಿಯೋಗದ ಮುಖ್ಯಸ್ಥ ಅಬ್ಬಾಸ್ ಆಫ್ರಿದಿ ವಿವರಣೆ ನೀಡಿದ್ದಾರೆ.

ನಾವು ಫೆಬ್ರವರಿ 28ರಂದು ಪಾಕಿಸ್ತಾನದಿಂದ ವಾಷಿಂಗ್ಟನ್‌ಗೆ ಬಂದಿದ್ದಾಗ ನಮ್ಮನ್ನು ಬಾಡಿ ಸ್ಕ್ಯಾನ್‌ಗೊಳಪಡಿಸಿರಲಿಲ್ಲ. ಆದರೆ ಶನಿವಾರ ಇಲ್ಲಿಂದ ಮತ್ತೊಂದು ನಗರಕ್ಕೆ ಪ್ರಯಾಣಿಸಬೇಕೆಂದು ಹೋದಾಗ ಸಂಬಂಧಪಟ್ಟವರು ಬಾಡಿ ಸ್ಕ್ಯಾನ್‌ಗೊಳಗಾಗುವುದು ಕಡ್ಡಾಯ ಎಂದು ಹೇಳಿದರು ಎಂದು ಆಫ್ರಿದಿ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ