ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಲಾಹೋರ್ ದಾಳಿಯಲ್ಲಿ ಭಾರತದ ಕೈವಾಡ: ಪಾಕ್ ತಿಪ್ಪರಲಾಗ (India | RAW | Pakistan | Lahore attack)
Bookmark and Share Feedback Print
 
ಮತ್ತೆ ಭಾರತದತ್ತ ಕೈ ತೋರಿಸಲು ಆರಂಭಿಸಿರುವ ಪಾಕಿಸ್ತಾನ, ಸೋಮವಾರ ಲಾಹೋರ್ ಮೇಲೆ ನಡೆದ ಭಯೋತ್ಪಾದನಾ ದಾಳಿಯಲ್ಲಿ ಭಾರತದ ಬೇಹುಗಾರಿಕಾ ಸಂಸ್ಥೆ 'ರಾ' ಕೈವಾಡವಿದೆ ಎಂದು ಹೇಳುವ ಮೂಲಕ ನಗೆಪಾಟಲಿಗೀಡಾಗಿದೆ.

ಲಾಹೋರ್‌ನಲ್ಲಿ 12 ಜನರ ಸಾವಿಗೆ ಕಾರಣವಾದ ಇಂದಿನ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಭಾರತದ 'ರಾ' (ರೀಸರ್ಚ್ ಎಂಡ್ ಅನಾಲಿಸಿಸ್ ವಿಂಗ್) ಕೈವಾಡವಿದೆ ಎಂದು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಕಾನೂನು ಸಚಿವ ರಾಣಾ ಸನವುಲ್ಲಾಹ್ ಆರೋಪಿಸಿದ್ದಾರೆ.

ಇದರ ಬೆನ್ನಿಗೆ ಹೇಳಿಕೆ ನೀಡಿರುವ ಪಾಕ್ ಆಂತರಿಕ ಸಚಿವ ರೆಹಮಾನ್ ಮಲಿಕ್, ಬುಡಕಟ್ಟು ಪ್ರದೇಶದ ಭಯೋತ್ಪಾದಕರಿಂದ ವಶಪಡಿಸಿಕೊಂಡಿರುವ ಶಸ್ತ್ರಾಸ್ತ್ರಗಳನ್ನು ಗಮನಿಸಿದಾಗ ಭಾರತದ ಕೈವಾಡವಿರುವ ವಾಸನೆ ತಿಳಿದಿದೆ ಎಂದಿದ್ದಾರೆ.

ಇತರ ನೆರೆ ರಾಷ್ಟ್ರಗಳೊಂದಿಗೆ ಭಾರತದ 'ರಾ' ಸಂಸ್ಥೆ ಕೂಡ ಭಾಗವಹಿಸಿದೆ. ಇಸ್ರೇಲ್ ಮತ್ತು ಇತರ ದೇಶಗಳು ಕೂಡ ಈ ದುಷ್ಕೃತ್ಯದ ಹಿಂದಿವೆ ಎಂದು ಸನಾವುಲ್ಲಾಹ್ ಲಾಹೋರ್‌ನಲ್ಲಿ ಪತ್ರಕರ್ತರೊಂದಿಗೆ ಹೇಳಿಕೊಂಡರು.

ವಜಿರಿಸ್ತಾನದ ಬುಡಕಟ್ಟು ಪ್ರಾಂತ್ಯದಲ್ಲಿ ಪಾಕಿಸ್ತಾನಿ ಪಡೆಗಳು ನಡೆಸುತ್ತಿರುವ ಭಯೋತ್ಪಾದಕರ ವಿರುದ್ಧ ಹೋರಾಡುತ್ತಿದ್ದು, ಅದೇ ಭಯೋತ್ಪಾದಕರು ಈ ದಾಳಿಯ ಹಿಂದಿರಬಹುದು ಎಂದೂ ಅದೇ ಹೊತ್ತಿಗೆ ಈ ಸಚಿವರು ಮತ್ತೊಂದು ವಾದವನ್ನೂ ಮಂಡಿಸಿದ್ದಾರೆ.

ಆದರೆ ಈ ಭಯೋತ್ಪಾದಕರಿಗೆ ವಿದೇಶಿ ಕೈವಾಡಗಳಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಅದೇ ಹೊತ್ತಿಗೆ ಮತ್ತೊಂದು ಕಡೆ ಮಾತನಾಡುತ್ತಿದ್ದ ಆಂತರಿಕ ಸಚಿವ ರೆಹಮಾನ್ ಮಲಿಕ್, ಪಾಕಿಸ್ತಾನದಲ್ಲಿ ನಡೆಯುತ್ತಿರುವ ಹಲವು ದಾಳಿಗಳ ಹಿಂದೆ ಭಾರತ ಸೇರಿದಂತೆ ವಿದೇಶಗಳ ಕೈವಾಡವಿರುವುದನ್ನು ತಾವು ಗುರುತಿಸಿದ್ದೇವೆ ಎಂದು ಹೇಳಿದ್ದಾರೆ.

ದಾಳಿಗಳ ಹಿಂದೆ ಯಾವ ದೇಶಗಳು ಪಾತ್ರವಹಿಸಿವೆ ಎಂದು ಪತ್ರಕರ್ತರು ಪ್ರಶ್ನಿಸಿದಾಗ ಉತ್ತರಿಸಿದ ಮಲಿಕ್, 'ಈಗಾಗಲೇ ಹಲವಾರು ಬಾರಿ ಅವುಗಳನ್ನು ನಾನು ಗುರುತಿಸಿದ್ದೇನೆ. ಎಲ್ಲಾ ಶಸ್ತ್ರಾಸ್ತ್ರಗಳು ಅಫಘಾನಿಸ್ತಾನದಿಂದಲೇ ಬರುತ್ತಿವೆ. ಪಾಕಿಸ್ತಾನದ ಬುಡಕಟ್ಟು ಪ್ರದೇಶಗಳಲ್ಲಿ ವಶಪಡಿಸಿಕೊಂಡಿರುವ ಶಸ್ತ್ರಾಸ್ತ್ರಗಳನ್ನು ಪರಿಶೀಲನೆ ನಡೆಸಿದಾಗ ಇದರಲ್ಲಿ ಭಾರತದ ಕೈವಾಡವಿರುವುದು ಕಂಡು ಬಂದಿದೆ' ಎಂದರು.

ಉಭಯ ದೇಶಗಳ ನಡುವೆ ಮಾತುಕತೆ ನಡೆಯುವ ಸಂದರ್ಭದಲ್ಲಿ ಭಾರತದ ಭಯೋತ್ಪಾದನೆಯ ಕುರಿತ ಸಾಕ್ಷ್ಯಗಳನ್ನು ಪಾಕಿಸ್ತಾನ ಹಸ್ತಾಂತರಿಸಲಿದೆ ಎಂದೂ ಅವರು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ