ನೈಜೀರಿಯಾದ ಸೆಂಟ್ರಲ್ ನಗರವಾದ ಜೋಸ್‌ನಲ್ಲಿ ಸಂಭವಿಸಿದ ಕೋಮುಗಲಭೆಯಲ್ಲಿ ಸುಮಾರು 500ಮಂದಿ ಕ್ರಿಶ್ಚಿಯನ್‌ನರು ಸಾವನ್ನಪ್ಪಿರುವುದಾಗಿ ರಾಜ್ಯ ಗವರ್ನರ್ ಸಲಹೆಗಾರ ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ 95ಮಂದಿಯನ್ನು ಬಂಧಿಸಲಾಗಿದೆ. ಆದರೆ ಅಮಾನವೀಯ ಹಿಂಸಾಚಾರದಲ್ಲಿ ಫುಲಾನಿ ಮುಸ್ಲಿಂ ಗುಂಪು 500ಮಂದಿಯನ್ನು ಕೊಚ್ಚಿ ಕೊಲೆಗೈದಿರುವುದಾಗಿ ಡಾನ್ ಮಾನ್‌ಜಿಯಾಗ್ ವಿವರಿಸಿದ್ದಾರೆ.
ಕ್ರಿಶ್ಚಿಯನ್ ಸಮುದಾಯದ ಮೂರು ಗ್ರಾಮಗಳಿಗೆ ನುಗ್ಗಿದ ಮುಸ್ಲಿಂ ಸಮುದಾಯದ ಫುಲಾನಿ ಗುಂಪುಗಳು ಮನೆಗಳಿಗೆ ಬೆಂಕಿ ಹಚ್ಚಿ, ಮಾರಕ ಆಯುಧಗಳಿಂದ ಮಹಿಳೆಯರು, ಮಕ್ಕಳನ್ನು ಕೊಚ್ಚಿ ಹತ್ಯೆಗೈದಿರುವ ಘಟನೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಆಕ್ರೋಶಕ್ಕೆ ಎಡೆಮಾಡಿಕೊಟ್ಟಿದೆ ಎಂದು ಸುದ್ದಿ ಸಂಸ್ಥೆ ಹೇಳಿದೆ.
ಫುಲಾನಿ ಗುಂಪುಗಳು ಕ್ರಿಶ್ಚಿಯನ್ ಗ್ರಾಮಗಳ ಮೇಲೆ ದಾಳಿ ನಡೆಸುವುದಾಗಿ ಎರಡು ದಿನಗಳ ಮೊದಲೇ ಎಚ್ಚರಿಕೆ ನೀಡಿರುವುದಾಗಿ ವರದಿ ತಿಳಿಸಿದೆ. ಆದರೆ ಗಲಭೆ ನಡೆಯುತ್ತಿದ್ದಾಗ ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿರುವುದಾಗಿ ದೂರಿದೆ.