ಇಲ್ಲಿನ ಮೈನೆ ಟೌನ್‌ಶಿಪ್ ಸಮೀಪದ ನಿವಾಸಿಯಾಗಿದ್ದ ಭಾರತೀಯ ಮೂಲದ 32ರ ಹರೆಯದ ಮಹಿಳೆಯೊಬ್ಬರು ಕಳೆದ ಜನವರಿ ತಿಂಗಳಿನಲ್ಲಿ ನಾಪತ್ತೆಯಾಗಿದ್ದರು. ಇದೀಗ ಆಕೆಯ ಶವ ಪತ್ತೆಯಾಗಿದ್ದು, ಇದು ಆತ್ಮಹತ್ಯೆ ಪ್ರಕರಣವಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಶಂಕಿಸಿದ್ದಾರೆ.
ಭಾನುವಾರ ಡೆಸ್ ಪ್ಲೈನೆಸ್ ನದಿ ಸಮೀಪ ಮೃತದೇಹ ಪತ್ತೆಯಾಗಿದ್ದು, ಈಕೆಯನ್ನು ಸಂಗೀತಾಜೆನ್ ಪಾಟೇಲ್ ಎಂದು ಗುರುತಿಸಲಾಗಿದೆ ಎಂಬುದಾಗಿ ಕೂಕ್ ಕೌಂಟಿ ಶೆರಿಷ್ಸ್ ಕಚೇರಿಯ ವಕ್ತಾರ ಸ್ಟೇವೆ ಪ್ಯಾಟರ್ಸನ್ ತಿಳಿಸಿದ್ದಾರೆ.
ಮೃತದೇಹದ ಮೇಲೆ ಯಾವುದೇ ಗಾಯದ ಗುರುತಿಗಳಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ಮಹಿಳೆ ಸಾವಿಗೆ ಕಾರಣ ಏನೆಂದು ಕೂಕ್ ಮೆಡಿಕಲ್ ವಿಭಾಗದ ವೈದ್ಯರು ಶವಪರೀಕ್ಷೆಯ ನಂತರ ತಿಳಿಸಲಿದ್ದಾರೆ ಎಂದರು.
ಭಾನುವಾರ ಮಧ್ಯಾಹ್ನ ಡೆಸ್ ಪ್ಲೈನೆಸ್ ನದಿ ಸಮೀಪ ಮೃತದೇಹವನ್ನು ಕೂಕ್ ಕೌಂಟಿ ಅರಣ್ಯ ಸಂರಕ್ಷಣಾಧಿಕಾರಿ ಪೊಲೀಸರು ಪತ್ತೆ ಹಚ್ಚಿರುವುದಾಗಿ ಹೇಳಿದರು. ಪಾಟೇಲ್ ಮೈಮೇಲಿರುವ ಚಿನ್ನಾಭರಣಗಳ ಮೂಲಕ ಮನೆಯವರು ಗುರುತು ಪತ್ತೆಹಚ್ಚಿರುವುದಾಗಿ ಪ್ಯಾಟರ್ಸನ್ ತಿಳಿಸಿದರು.