ಕ್ಯೂಬಾದ ಕ್ರಾಂತಿಕಾರಿ ಹೋರಾಟಗಾರ ಫಿಡೆಲ್ ಕ್ಯಾಸ್ಟ್ರೋ ಅವರನ್ನು ಹತ್ಯೆಗೈಯಲು ನಡೆಸಿದ ಸಂಚು, ಅವರು ಅದರಿಂದ ಪಾರಾದ ರೋಚಕಗಾಥೆಯ ಸಿರಿಯಲ್ ಅನ್ನು ಕ್ಯೂಬಾ ಸ್ವಾಮಿತ್ವದ ಟೆಲಿವಿಷನ್ ಭಾನುವಾರ ಪ್ರಥಮ ಪ್ರದರ್ಶನ ಪ್ರಸಾರ ಮಾಡಿದೆ.
ಫೆಡೆಲ್ ಕ್ಯಾಸ್ಟ್ರೋ ಅವರ ಹತ್ಯೆಗೆ 638ಬಾರಿ ಪ್ರಯತ್ನಿಸಲಾಗಿತ್ತು.!ಆದರೆ ಆ ಎಲ್ಲಾ ಸಂಚುಗಳಿಂದ ಕ್ಯಾಸ್ಟ್ರೋ ಪಾರಾಗಿರುವುದು ಸ್ವತಃ ಹತ್ಯಾ ಪ್ರಯತ್ನ ನಡೆಸಿ ವಿಫಲವಾಗಿರುವ ಅಮೆರಿಕಕ್ಕೂ ಕೂಡ ಚಿಂತೆಗೀಡು ಮಾಡಿತ್ತು. ಇದೀಗ ಕ್ಯೂಬಾದ ಜನಮಾನಸದಲ್ಲಿ ಜನಾನುರಾಗಿಯಾಗಿರುವ ಕ್ಯಾಸ್ಟ್ರೋ ಅವರ ಹತ್ಯಾ ಸಂಚಿನ ಕುರಿತ ಮೊದಲ ಭಾಗದ ಸರಣಿಯನ್ನು ಭಾನುವಾರ 'ಪ್ರೈಮ್ ಟೈಮ್'ನಲ್ಲಿ ಚಾನೆಲ್‌ನಲ್ಲಿ ಪ್ರಸಾರ ಮಾಡಲಾಗಿತ್ತು.
ಇದು ಸುಮಾರು 70ನಿಮಿಷಗಳ ಕಾಲದ್ದಾಗಿದ್ದು, 1959ರಲ್ಲಿ ಸರ್ವಾಧಿಕಾರಿ ಫುಲ್‌ಜೆನ್ಸಿಯೋ ಬಾಟಿಸ್ಟಾನ ಪಡೆ ಪರಾಜಯಗೊಳ್ಳುವ ಮುನ್ನ ಕ್ಯಾಸ್ಟ್ರೋ ಹತ್ಯೆಗೆ ಪ್ರಯತ್ನ ನಡೆಸಿ ವಿಫಲವಾಗಿರುವ ಆರಂಭಿಕ ಘಟನೆಯನ್ನು ಸೀರಿಯಲ್‌ನಲ್ಲಿ ಪ್ರಸಾರ ಮಾಡಲಾಗಿತ್ತು.
ಕ್ಯೂಬಾವನ್ನು ಸರ್ವಾಧಿಕಾರಿಯ ಮುಷ್ಠಿಯಿಂದ ಬಂಧಮುಕ್ತಗೊಳಿಸಲು ಕ್ಯಾಸ್ಟ್ರೋ ನೇತೃತ್ವದ ಹೋರಾಟಗಾರರ ಶಸ್ತ್ರ ಸಜ್ಜಿತ ಪಡೆ ಸೀಯೆರ್ರಾ ಮಾಯೆಸ್ಟ್ರಾ ಪರ್ವತ ಪ್ರದೇಶದಲ್ಲಿ ಬೀಡು ಬಿಟ್ಟು ಹೋರಾಟ ನಡೆಸುತ್ತಿತ್ತು. ಗೆರಿಲ್ಲಾ ಪಡೆ ಕೂಡ ಹೊಂದಿತ್ತು.
ಸರ್ವಾಧಿಕಾರಿ ಬ್ಯಾಟಿಸ್ಟಾನಿಂದ ಹಿಡಿದು ಅಮೆರಿಕ ನಡೆಸಿದ ಬಾಂಬ್, ಶಾರ್ಪ್ ಶೂಟರ್, ವಿಷಾನಿಲ, ವಿಷಯುಕ್ತ ಸಿಗಾರ್ ಮತ್ತು ಹಾಲಿನಿಂದ ಕ್ಯಾಸ್ಟ್ರೋ ಹತ್ಯೆ ಸಂಚು ನಡೆಸಿ ವಿಫಲವಾಗಿರುವ ಕಥೆಯನ್ನು ಈ ಸೀರಿಯಲ್‌ನಲ್ಲಿ ಪ್ರಮುಖವಾಗಿದೆ.
ಕ್ಯಾಸ್ಟ್ರೋ ಹತ್ಯಾ ಪ್ರಯತ್ನ ಸೀರಿಯಲ್ ಚಿತ್ರೀಕರಣದಲ್ಲಿ ಖ್ಯಾತ ನಟ-ನಟಿಯರು ಸೇರಿದಂತೆ 243ಜನರು ಭೂಮಿಕೆಯಲ್ಲಿದ್ದಾರೆ. ಇನ್ನುಳಿದ 800ಮಂದಿ ರಂಗಭೂಮಿ, ಇತರ ಕಲಾವಿದರು ಸೇರಿದ್ದಾರೆ ಎಂದು ನಿರ್ದೇಶಕ ರಾಫೆಲ್ ಬೆನಿಟೆಜ್ ವಿವರಿಸಿದ್ದಾರೆ.