ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಬಾಂಗ್ಲಾ ಅಧ್ಯಕ್ಷರು, ಪ್ರಧಾನಿ ವೇತನದಲ್ಲಿ ಭಾರೀ ಹೆಚ್ಚಳ (Bangladesh | pay hikes | President | Prime Minister)
Bookmark and Share Feedback Print
 
ಅಧ್ಯಕ್ಷರು, ಪ್ರಧಾನ ಮಂತ್ರಿ ಸೇರಿದಂತೆ ಉನ್ನತ ಅಧಿಕಾರಸ್ಥರ ವೇತನದಲ್ಲಿ ಶೇ.83ರಷ್ಟು ಹೆಚ್ಚಳಗೊಳಿಸುವ ಪ್ರಸ್ತಾವನೆಗೆ ಬಾಂಗ್ಲಾದೇಶ ಸಚಿವ ಸಂಪುಟ ಅಂಗೀಕಾರ ನೀಡಿದೆ.

ನಿನ್ನೆ ರಾತ್ರಿ ಪ್ರಧಾನ ಮಂತ್ರಿ ಶೇಖ್ ಹಸೀನಾ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಸ್ಪೀಕರ್, ಮುಖ್ಯ ನ್ಯಾಯಮೂರ್ತಿ ಮತ್ತು ಸುಪ್ರೀಂ ಕೋರ್ಟ್‌ನ ಇತರ ನ್ಯಾಯಾಧೀಶರು, ಸಚಿವರುಗಳು ಮತ್ತು ಶಾಸಕರುಗಳ ವೇತನವನ್ನೂ ಹೆಚ್ಚಳ ಮಾಡಲು ಒಪ್ಪಿಗೆ ಸೂಚಿಸಲಾಗಿದೆ.

ಇತ್ತೀಚೆಗಷ್ಟೇ ಸರಕಾರಿ ನೌಕರರ ವೇತನವನ್ನು ಹೆಚ್ಚಳಗೊಳಿಸಿದ ನಂತರ ಅದೇ ಹಾದಿಯನ್ನು ಇತರ ಉನ್ನತ ಹುದ್ದೆಗಳಲ್ಲೂ ಅನುಸರಿಸಲಾಗಿದೆ.

ಪರಿಷ್ಕೃತ ವೇತನ ನೀತಿಯ ಪ್ರಕಾರ ಅಧ್ಯಕ್ಷರ ಮಾಸಿಕ ವೇತನವು 33,400 ಟಾಕಾದಿಂದ 61,200 ಟಾಕಾಕ್ಕೆ ಏರಿಸಲಾಗುತ್ತದೆ. ಅಂದರೆ ಭಾರತೀಯ ರೂಪಾಯಿಯ ಪ್ರಕಾರ 21,960 ರೂಪಾಯಿಯಿಂದ 40,238 ರೂಪಾಯಿಗೆ ವೇತನ ಪರಿಷ್ಕರಣೆಗೊಳಿಸಲಾಗುತ್ತದೆ.

ಪ್ರಧಾನ ಮಂತ್ರಿಯವರ ವೇತನವು 32,000 ಟಾಕಾದಿಂದ 58,600 ಟಾಕಾಕ್ಕೆ ಅಂದರೆ 21,041 ರೂಪಾಯಿಯಿಂದ 38,526 ರೂಪಾಯಿಗಳಿಗೆ ಏರಿಕೆಯಾಗುತ್ತದೆ.

ವೇತನ ಹೆಚ್ಚಳದ ಜತೆಗೆ ಪ್ರತೀ ಸಂಸತ್ ಸದಸ್ಯನೂ ತನ್ನ ಕಾರು ನಿರ್ವಹಣೆ ಮತ್ತು ಇತರ ಭತ್ಯೆಗಳೂ ಸೇರಿದಂತೆ 40,000 ಟಾಕಾವನ್ನು ಪ್ರತೀ ತಿಂಗಳೂ ಪಡೆಯಲಿದ್ದಾರೆ.

ದೇಶದ ಬದಲಾಗಿರುವ ಆರ್ಥಿಕ ವ್ಯವಸ್ಥೆಯ ಹಿನ್ನೆಲೆಯಲ್ಲಿ ವೇತನ ಹೆಚ್ಚಳಗೊಳಿಸಲು ಸಂಪುಟ ನಿರ್ಧರಿಸಿದೆ. ಇತ್ತೀಚೆಗಷ್ಟೇ ಸರಕಾರಿ ನೌಕರರ ವೇತನವನ್ನೂ ಹೆಚ್ಚಳಗೊಳಿಸಲಾಗಿತ್ತು ಎಂದು ಪ್ರಧಾನ ಮಂತ್ರಿಯವರ ಮಾಧ್ಯಮ ಕಾರ್ಯದರ್ಶಿ ಅಬ್ದುಲ್ ಕಲಾಂ ಆಜಾದ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ