ಸೈಪ್ರಸ್‌ನ ಮಾಜಿ ಅಧ್ಯಕ್ಷ ತಾಸ್ಸೋಸ್ ಪಾಪಾಡೋಪುಲೊಸ್ ಅವರ ಶವ ಮೆಡಿಟೇರಿಯನ್ ದ್ವೀಪಪ್ರದೇಶದ ಸಮಾಧಿ ಸ್ಥಳದಲ್ಲಿ ಪತ್ತೆಯಾಗಿರುವುದಾಗಿ ಮಾಧ್ಯಮದ ವರದಿವೊಂದು ತಿಳಿಸಿದೆ.
ತಾಸ್ಸೋಸ್ ಅವರ ಮೃತದೇಹ ನಿಕೋಸಿಯಾದ ಸಮಾಧಿ ಸ್ಥಳದ ಬಳಿ ಪತ್ತೆಯಾಗಿದ್ದು, ಶವ ಬಹುತೇಕ ತಾಸ್ಸೋಸ್ ಅವರದ್ದಾಗಿದೆ ಎಂದು ಶಂಕಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಸಮಾಧಿ ಸ್ಥಳದಲ್ಲಿ ಶವ ಇದ್ದಿರುವ ಮಾಹಿತಿ ಆಧಾರದ ಮೇಲೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಈ ಅಂಶ ಬೆಳಕಿಗೆ ಬಂದಿರುವುದಾಗಿ ಅಧಿಕಾರಿಗಳು ವಿವರಿಸಿದ್ದಾರೆ. ಪ್ರಾಥಮಿಕ ತನಿಖೆಯ ಆಧಾರದ ಮೇಲೆ ಇದು ತಾಸ್ಸೋಸ್ ಅವರು ಶವ ಆಗಿರಬೇಕೆಂದು ಶಂಕಿಸಲಾಗಿದೆ ಎಂದು ಪೊಲೀಸ್ ವಕ್ತಾರ ಮಿಕೆಲಿಸ್ ಕಾಟುಸ್ಸೋನೋಟೊಸ್ ತಿಳಿಸಿರುವುದಾಗಿ ಸಿಎನ್‌ಎ ನ್ಯೂಸ್ ಏಜೆನ್ಸಿ ವರದಿ ಹೇಳಿದೆ.
ಆದರೆ ಈ ಶವ ಮಾಜಿ ಅಧ್ಯಕ್ಷ ತಾಸ್ಸೋಸ್ ಅವರದ್ದೇ ಎಂಬ ಬಗ್ಗೆ ಡಿಎನ್‌ಎ ಪರೀಕ್ಷೆಯ ಬಳಿಕ ಪೂರ್ಣ ಮಾಹಿತಿ ತಿಳಿಯಲಿದೆ ಎಂದು ತಿಳಿಸಿದ್ದಾರೆ.