ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಈಡೇರಿದ ಬೇಡಿಕೆ; ಆಮರಣಾಂತ ಉಪವಾಸ ಕೈಬಿಟ್ಟ ಫೊನ್ಸೇಕಾ (Lanka’s ex-Army Chief | Sarath Fonseka | Sri Lanka | Mahinda Rajapaksa)
Bookmark and Share Feedback Print
 
ಆಮರಣಾಂತ ಉಪವಾಸ ಸತ್ಯಾಗ್ರಹ ಘೋಷಿಸಿದ್ದ ಶ್ರೀಲಂಕಾ ಸೇನೆಯ ಮಾಜಿ ಮುಖ್ಯಸ್ಥ ಶರತ್ ಫೊನ್ಸೇಕಾ, ಪತ್ನಿಯ ಮೊಬೈಲ್ ಮೂಲಕ ತನ್ನ ಹೆಣ್ಣು ಮಕ್ಕಳ ಜತೆ ಮಾತನಾಡಲು ಮಿಲಿಟರಿ ಅವಕಾಶ ನೀಡಿದ ನಂತರ ನಿರ್ಧಾರ ಬದಲಾಯಿಸಿದ್ದಾರೆ.

ಪಿತೂರಿ ಆರೋಪಗಳ ಸಂಬಂಧ ಫೆಬ್ರವರಿ 8ರಿಂದ ನೌಕಾ ನೆಲೆಯ ಪ್ರಧಾನ ಕಚೇರಿಯಲ್ಲಿ ಬಂಧನದಲ್ಲಿರುವ 59ರ ಹರೆಯ ಫೊನ್ಸೇಕಾ, ವಿದೇಶಗಳಲ್ಲಿ ನೆಲೆಸಿರುವ ತನ್ನ ಇಬ್ಬರು ಹೆಣ್ಣು ಮಕ್ಕಳ ಜತೆ ಕಳೆದ ರಾತ್ರಿ ಮಾತುಕತೆ ನಡೆಸಿದ್ದಾರೆ ಎಂದು ಜನರಲ್ ಅವರ ಹೆಸರು ಹೇಳಲಿಚ್ಛಿಸದ ಆಪ್ತ ಸಂಬಂಧಿಯೊಬ್ಬರು ತಿಳಿಸಿದ್ದಾರೆ.

ತನ್ನ ಪತ್ನಿ ಅನೋಮಾ ಅವರ ಮೊಬೈಲ್ ಫೋನ್ ಮೂಲಕ ಮಕ್ಕಳ ಜತೆ ಮಾತುಕತೆ ನಡೆಸಲು ಅನುಮತಿ ನೀಡಬೇಕು ಎಂಬ ಬೇಡಿಕೆ ಮುಂದಿಟ್ಟಿದ್ದ ಫೊನ್ಸೇಕಾ ಭಾನುವಾರದಿಂದಲೇ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು.

ಬಳಿಕ ಸೋಮವಾರ ಸೇನೆಯು ದೂರವಾಣಿ ಒದಗಿಸಿದರೂ ನಿರಾಕರಿಸಿದ್ದ ಫೊನ್ಸೇಕಾ, ತಾನು ತನ್ನ ಪತ್ನಿಯ ಮೊಬೈಲ್ ಫೋನಿನ ಮೂಲಕವೇ ಮಕ್ಕಳ ಜತೆ ಮಾತನಾಡಬೇಕಿದೆ ಎಂದು ಪಟ್ಟು ಹಿಡಿದಿದ್ದರು.

ಅನೋಮಾ ಅವರು ನಿನ್ನೆ ರಾತ್ರಿ ಫೊನ್ಸೇಕಾ ಅವರನ್ನು ಭೇಟಿಯಾಗಿದ್ದು, ರಾತ್ರಿಯ ಊಟವನ್ನು ಬಂಧನದಲ್ಲಿರುವ ವ್ಯವಸ್ಥೆಯಲ್ಲಿ ಒದಗಿಸಿದ್ದಾರೆ ಎಂದು ಜನರಲ್ ಅವರ ಸಂಬಂಧಿ ವಿವರಣೆ ನೀಡಿದ್ದಾರೆ.

ಜನವರಿ 26ರಂದು ನಡೆದಿದ್ದ ಶ್ರೀಲಂಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ನಿರೀಕ್ಷೆಗಿಂತಲೂ ಹೆಚ್ಚು ಅಂತರದಿಂದ ಅಧ್ಯಕ್ಷ ಮಹೀಂದ್ರಾ ರಾಜಪಕ್ಷೆಯವರೆದುರು ಸೋಲುಂಡಿದ್ದ ಫೊನ್ಸೇಕಾ, ಜಿವಿಪಿ ನೇತೃತ್ವದ ಡಿಎನ್‌ಎ ಮಿತ್ರಕೂಟವನ್ನು ಮುನ್ನಡೆಸುತ್ತಿದ್ದಾರೆ.

ಅಧ್ಯಕ್ಷ ರಾಜಪಕ್ಷೆ ಮತ್ತು ಅವರ ಕುಟುಂಬದವರನ್ನು ಹತ್ಯೆಗೈಯಲು ಪಿತೂರಿ ನಡೆಸಿದ್ದಾರೆ ಎಂದು ಆರೋಪಿಸಿ ಫೊನ್ಸೇಕಾ ಅವರನ್ನು ಅಧ್ಯಕ್ಷೀಯ ಚುನಾವಣೆಯ ಕೆಲದಿನಗಳ ಬಳಿಕ ಬಂಧಿಸಲಾಗಿತ್ತು. ಅವರನ್ನು ಕೋರ್ಟ್ ಮಾರ್ಷಲ್‌ಗೆ ಒಳಪಡಿಸಲಾಗುತ್ತದೆ ಎಂದು ಹೇಳಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ