ಭೂಕಂಪ-ಚಿಲಿಗೆ ಮತ್ತಷ್ಟು ಆರ್ಥಿಕ ನೆರವು ಬೇಕು: ರೆಡ್ ಕ್ರಾಸ್
ಸ್ಯಾಂಟಿಯಾಗೊ, ಬುಧವಾರ, 10 ಮಾರ್ಚ್ 2010( 11:30 IST )
ಕಳೆದ ತಿಂಗಳು ಚಿಲಿಯಲ್ಲಿ ಸಂಭವಿಸಿದ ಭೀಕರ ಭೂಕಂಪನದಲ್ಲಿ ಮನೆಗಳನ್ನು ಕಳೆದುಕೊಂಡು ನಿರ್ಗತಿಕರಾದವರ ಸಂಖ್ಯೆ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಆರ್ಥಿಕ ನೆರವು ಬೇಕಾಗಿದೆ ಎಂದು ರೆಡ್ ಕ್ರಾಸ್ ಸಂಸ್ಥೆ ತಿಳಿಸಿದೆ.
ಫೆಬ್ರುವರಿ 27ರಂದು ಸಂಭವಿಸಿದ ಪ್ರಬಲ ಭೂಕಂಪದಿಂದ ಚಿಲಿ ತತ್ತರಿಸಿದ್ದು, ಲಕ್ಷಾಂತರ ಜನರು ಮನೆಗಳನ್ನು ಕಳೆದುಕೊಂಡಿದ್ದಾರೆ. ಆ ನಿಟ್ಟಿನಲ್ಲಿ ಅವರಿಗೆ ಪುನರ್ವಸತಿ ಕಲ್ಪಿಸಿಕೊಡಲು ಇನ್ನೂ ಸುಮಾರು 12.9ಮಿಲಿಯನ್ ಅಮೆರಿಕನ್ ಡಾಲರ್‌ನಷ್ಟು ಆರ್ಥಿಕ ನೆರವಿನ ಅಗತ್ಯವಿದೆ ಎಂದು ಸಂಸ್ಥೆ ಮನವಿ ಮಾಡಿದೆ.
ನಿರಾಶ್ರಿತರಾದವರಿಗೆ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಲು ಹೆಚ್ಚಿನ ನೆರವು ಬೇಕೆಂದು ಇಂಟರ್ ನ್ಯಾಷನಲ್ ಫೆಡರೇಷನ್ ಆಫ್ ರೆಡ್ ಕ್ರಾಸ್ ಹಾಗೂ ರೆಡ್ ಕ್ರೆಸೆಂಟ್ ಸೊಸೈಟಿಸ್ ಜಂಟಿ ಹೇಳಿಕೆಯಲ್ಲಿ ತಿಳಿಸಿದೆ. ಜಖಂಗೊಂಡ ಹಲವು ಆಸ್ಪತ್ರೆಗಳ ಪುನರ್ ನಿರ್ಮಾಣ ಮಾಡಲು ಮತ್ತು ಮನೆಗಳ ನಿರ್ಮಾಣಕ್ಕೆ ಸಾಕಷ್ಟು ಸಮಯಾವಕಾಶ ಬೇಕೆಂದು ರೆಡ್ ಕ್ರಾಸ್ ವಿವರಿಸಿದೆ.