ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಶೂಟೌಟ್‌ಗೆ ಬಾಲಿ ಸ್ಫೋಟದ ಶಂಕಿತ ಉಗ್ರ ಬಲಿ (al-Qaeda | Bali nightclubs | Indonesia | Dulmatin | Afghanistan)
Bookmark and Share Feedback Print
 
ಆಗ್ನೇಯ ಏಷ್ಯಾದ ಪ್ರಮುಖ ಉಗ್ರ, ಇಂಡೋನೇಷ್ಯಾದ ಇತಿಹಾಸದಲ್ಲಿಯೇ ಭೀಕರ ಬಾಂಬ್ ಸ್ಫೋಟ ನಡೆಸಿದ ಶಂಕಿತ ಭಯೋತ್ಪಾದಕ ಪೊಲೀಸರು ನಡೆಸಿದ ಶೂಟೌ‌ಟ್‌ಗೆ ಬಲಿಯಾಗಿರುವುದಾಗಿ ಬುಧವಾರ ರಾಷ್ಟ್ರಾಧ್ಯಕ್ಷರು ಖಚಿತಪಡಿಸಿದ್ದಾರೆ.

ಅಫ್ಘಾನಿಸ್ತಾನದಲ್ಲಿ ಅಲ್ ಖಾಯಿದಾದಿಂದ ತರಬೇತಿ ಪಡೆದಿದ್ದ ಇಂಡೋನೇಷ್ಯಾದ ಡುಲ್‌ಮಾಟಿನ್(39) ಪೊಲೀಸರ ಶೂಟೌಟ್‌ಗೆ ಬಲಿಯಾಗಿದ್ದಾನೆ. 2002ರಲ್ಲಿ ಇಂಡೋನೇಷ್ಯಾದ ಬಾಲಿ ನೈಟ್ ಕ್ಲಬ್ ಮೇಲೆ ನಡೆಸಿದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ 202ಮಂದಿ ಬಲಿಯಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಡುಲ್ ಮಾಟಿನ್ ಮೋಸ್ಟ್ ವಾಂಟೆಡ್ ವ್ಯಕ್ತಿಯಾಗಿದ್ದ.

ಈ ಕುರಿತು ಆಸ್ಟ್ರೇಲಿಯಾದ ಕೆನ್‌ಬೆರ್ರಾದಲ್ಲಿ ಮಾತನಾಡಿದ ಇಂಡೋನೇಷ್ಯಾದ ಅಧ್ಯಕ್ಷ ಸುಸಿಲೋ ಬಾಂಬಾಂಗ್ ಯುಧೋವೋಯೊನೊ, ದೇಶದ ದ್ವೀಪಪ್ರದೇಶವಾದ ವಾಯುವ್ಯ ಭಾಗದ ಜಾವಾದಲ್ಲಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಶಂಕಿತ ಮೂರು ಮಂದಿ ಉಗ್ರರಲ್ಲಿ ಡುಲ್‌ಮಾಟಿನ್ ಹತನಾಗಿರುವುದಾಗಿ ತಿಳಿಸಿದ್ದಾರೆ.

ಜಕಾರ್ತಾದಲ್ಲಿ ಅಡಗಿರುವ ಉಗ್ರರ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸುವ ಮೂಲಕ ಯಶಸ್ಸು ಸಾಧಿಸಿದ್ದಾರೆ. ಡುಲ್ ಮಾಟಿನ್ ಮೋಸ್ಟ್ ವಾಂಟೆಡ್ ವ್ಯಕ್ತಿಯಾಗಿದ್ದ ಎಂದರು. ಈತ ಜೆಮಾ ಇಸ್ಲಾಮಿಯಾ ಉಗ್ರಗಾಮಿ ಸಂಘಟನೆಯ ಬಾಂಬ್ ತಯಾರಿಕೆಯ ಮಾಸ್ಟರ್ ಮೈಂಡ್ ಆಗಿದ್ದ ಎಂದು ವಿವರಿಸಿದರು. ಆ ನಿಟ್ಟಿನಲ್ಲಿ ಇಂಡೋನೇಷ್ಯಾ ಭದ್ರತಾ ಪಡೆಗಳು ಉಗ್ರರ ವಿರುದ್ಧ ಮತ್ತಷ್ಟು ಯಶಸ್ವಿ ಕಾರ್ಯಾಚರಣೆ ನಡೆಸುವುದನ್ನು ಎದುರು ನೋಡುತ್ತಿರುವುದಾಗಿ ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ