ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಜನಾಂಗೀಯ ದಾಳಿ ತಡೆ ಕಾಯ್ದೆ ತಿದ್ದುಪಡಿ: ಆಸ್ಟ್ರೇಲಿಯಾ (racist attacks | Australia law | Melbourne | Indian)
Bookmark and Share Feedback Print
 
ಭಾರತೀಯ ವಿದ್ಯಾರ್ಥಿ ಸಮುದಾಯದ ಮೇಲೆ ನಿರಂತರವಾಗಿ ಜನಾಂಗೀಯ ದಾಳಿ ನಡೆಯುತ್ತಿದ್ದು, ಅದನ್ನು ತಡೆಯುವ ನಿಟ್ಟಿನಲ್ಲಿ ಭಾರತ ಸೇರಿದಂತೆ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗೆ ರಕ್ಷಣೆ ನೀಡಲು ಕಾನೂನು ತಿದ್ದುಪಡಿಗೆ ಕೊನೆಗೂ ಆಸ್ಟ್ರೇಲಿಯಾ ಸರ್ಕಾರ ಮುಂದಾಗಿದೆ.

ದೇಶದಲ್ಲಿ ನಡೆದ ಜನಾಂಗೀಯ ದಾಳಿ ಮತ್ತು ಎಜ್ಯುಕೇಶನ್ ಸರ್ವಿಸ್ ಫಾರ್ ಓವರ್‌ಸೀಸ್ ಸ್ಟುಡೆಂಟ್ಸ್ ಆಕ್ಟ್(ಇಎಸ್‌ಒಎಸ್) ತಿದ್ದುಪಡಿ ಕುರಿತಂತೆ ಮಾಜಿ ಸಂಸದ ಬ್ರೂಸ್ ಬೈರ್ಡ್ ಅವರು ನೀಡಿರುವ ವರದಿಯಂತೆ ಕ್ರಮ ಕೈಗೊಳ್ಳುವುದಾಗಿ ಆಸೀಸ್ ಶಿಕ್ಷಣ ಸಚಿವೆ ಜುಲಿಯಾ ಗಿಲ್ಲಾರ್ಡ್ ತಿಳಿಸಿದ್ದಾರೆ.

ಇಂಟರ್‌ನ್ಯಾಷನಲ್ ಎಜ್ಯುಕೇಶನ್ ಇಂಡಸ್ಟ್ರೀಸ್‌ ಪ್ರವೇಶಕ್ಕೆ ಹೇರಿರುವ ನಿಷೇಧ ರದ್ದುಪಡಿಸಲು ಈ ಕಾಯ್ದೆ ಸಹಕಾರಿಯಾಗಿದೆ ಎಂದರು.

ಆ ನಿಟ್ಟಿನಲ್ಲಿ ಎಜ್ಯುಕೇಶನ್ ಸರ್ವಿಸ್ ಫಾರ್ ಓವರ್‌ಸೀಸ್ ಸ್ಟುಡೆಂಟ್ಸ್ ಆಕ್ಟ್ ತಿದ್ದುಪಡಿಯನ್ನು ಸರ್ಕಾರ ಬೆಂಬಲಿಸುವುದಾಗಿ ಅವರು ತಿಳಿಸಿದ್ದಾರೆ. ತಿದ್ದುಪಡಿ ಕಾಯ್ದೆಯನ್ನು ಶೀಘ್ರವೇ ಅನುಷ್ಠಾನಗೊಳಿಸುವುದಾಗಿ ಈ ಸಂದರ್ಭದಲ್ಲಿ ಭರವಸೆ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ